Advertisement

ರಮಾನಾಥ ಎಸ್‌.ಪಯ್ಯಡೆ ಕಾಲೇಜ್‌ :ಪರಿಚಯಾತ್ಮಕ ಕಾರ್ಯಕ್ರಮ

04:28 PM Jul 24, 2018 | Team Udayavani |

ಮುಂಬಯಿ: ಬಂಟರ ಸಂಘದ ರಮಾನಾಥ ಪಯ್ಯಡೆ ಆದರಾತಿಥ್ಯ ಕಾಲೇಜಿನಲ್ಲಿ ಅಭ್ಯಸಿಸುವ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿಯುವ ಅತ್ಯಾಧುನಿಕ ಸೌಕರ್ಯಗಳನ್ನು ಒದಗಿಸುತ್ತಿರುವ ಜೊತೆಗೆ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ  ಶಿಕ್ಷಣ ನೀಡುವಲ್ಲಿ ಬದ್ಧವಾಗಿ ಶ್ರಮಿಸುತ್ತಿದೆ ಎಂದು ಬಂಟರ ಸಂಘ ಉನ್ನತ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ನಗ್ರಿಗುತ್ತು ವಿವೇಕ್‌ ಶೆಟ್ಟಿ ಇವರು ಅಭಿಪ್ರಾಯಿಸಿದರು.

Advertisement

ಕುರ್ಲಾ ಪೂರ್ವ  ಬಂಟರ ಸಂಘ ಮುಂಬಯಿ ಇದರ ಶಶಿಮನ್‌ಮೋಹನ್‌ ಶೆಟ್ಟಿ ಉನ್ನತ ಶಿಕ್ಷಣ ಸಂಕೀರ್ಣದಲ್ಲಿರುವ ರಮಾನಾಥ ಎಸ್‌. ಪಯ್ಯಡೆ ಕಾಲೇಜ್‌ ಆಫ್‌ ಹಾಸ್ಪಿಟಾಲಿಟಿ ಮೆನೇಜ್‌ಮೆಂಟ್‌ ಇದರ 2018-2019 ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಪರಿಚಯಾತ್ಮಕ ಕಾರ್ಯಕ್ರಮವು ಜು. 17 ರಂದು ಬೆಳಗ್ಗೆ ಸಂಘದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಜರಗಿದ್ದು, ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಪ್ರಥಮ ವರ್ಷದ ಆದರಾತಿಥ್ಯ ಉದ್ಯಮ ಕಾಲೇಜಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲು ಸಂತೋಷವಾಗುತ್ತಿದೆ. ಆದರಾತಿಥ್ಯ ಉದ್ಯಮ ಇಂದು ಅಭಿವೃದ್ಧಿಯತ್ತ ದಾಪುಗಾಲಿಡುತ್ತಿದ್ದು, ಈ ಕ್ಷೇತ್ರಕ್ಕೆ ಸೇರ ಬಯಸುವ ವಿದ್ಯಾರ್ಥಿಗಳಿಗೆ ಮುಂದೆ ಭವಿಷ್ಯದಲ್ಲಿ ವಿಪುಲ ಅವಕಾಶವಿದ್ದು, ಯಶಸ್ವಿಯ ಎತ್ತರಕ್ಕೆ ಏರುವುದರಲ್ಲಿ ಸಂಶಯವಿಲ್ಲ ಎಂದು ನುಡಿದು ಶುಭಹಾರೈಸಿದರು.

ಬಂಟರ ಸಂಘ ಮುಂಬಯಿ ಉಪಾಧ್ಯಕ್ಷ ಚಂದ್ರಹಾಸ್‌ ಕೆ. ಶೆಟ್ಟಿ ಇವರು ಮಾತನಾಡಿ, ಬಂಟರ ಸಂಘ ಜಾತಿ, ಮತ, ಭೇದವಿಲ್ಲದೆ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುತ್ತಾ ಬಂದಿದೆ. ಸಂಘದ ಶಶಿ ಮನಮೋಹನ್‌ ಶೆಟ್ಟಿ ಶೈಕ್ಷಣಿಕ ಸಂಕೀರ್ಣದ ಸೌಂದರೀಕರಣ, ಕಾಲೇಜುಗಳ ಮೂಲಭೂತ ಸೌಕರ್ಯ ಉತ್ತಮ ಗುಣಮಟ್ಟದ ಶಿಕ್ಷಣದಿಂದ ಕೂಡಿದ್ದು, ಇದರಿಂದ ಹೆಚ್ಚು ಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸಲು ಸಾಧ್ಯವಾಗಿದೆ ಎಂದು ನುಡಿದು, ಉನ್ನತ ಶಿಕ್ಷಣ ಸಮಿತಿ, ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ರಮಾನಾಥ ಪಯ್ಯಡೆ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ ಕಾಲೇಜಿನ ವೃತ್ತಿಪರ ಸಲಹೆಗಾರ ಪುಷ್ಪರಾಜ್‌ ಶೆಟ್ಟಿ ಇವರು ಮಾತನಾಡಿ, ಆದರಾತಿಥ್ಯ ಉದ್ಯಮದಲ್ಲಿರುವ ಭವಿಷ್ಯ ಹಾಗೂ ವಿದ್ಯಾರ್ಥಿಗಳು ಕೈಗೊಳ್ಳಬೇಕಾದ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ಬಂಟರ ಸಂಘ ಗೌರವ ಕೋಶಾಧಿಕಾರಿ ಪ್ರವೀಣ್‌ ಬಿ. ಶೆಟ್ಟಿ, ಉನ್ನತ ಶಿಕ್ಷಣ ಸಮಿತಿಯ ಉಪ ಕಾರ್ಯಾಧ್ಯಕ್ಷರುಗಳಾದ ಕಿಶೋರ್‌ ಕುಮಾರ್‌ ಕುತ್ಯಾರ್‌, ಉಪ ಕಾರ್ಯಾಧ್ಯಕ್ಷೆ ಮಮತಾ ಶೆಟ್ಟಿ, ಕಾರ್ಯದರ್ಶಿ ಭಾಸ್ಕರ ಶೆಟ್ಟಿ ಕಾರ್ನಾಡ್‌, ಆದರಾತಿಥ್ಯ ಕಾಲೇಜಿನ ದಾನಿ ಗೌರವ್‌ ಪಿ. ಪಯ್ಯಡೆ, ಆರ್‌. ಎಚ್‌. ಎಚ್‌. ಸಲಹೆಗಾರ ಆದರ್ಶ್‌ ಶೆಟ್ಟಿ, ಉನ್ನತ ಶಿಕ್ಷಣ ಸಮಿತಿಯ ಸದಸ್ಯ ಪ್ರಸನ್ನ ಶೆಟ್ಟಿ, ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು, ನಿರ್ದೇಶಕರು, ಸಿಎಒ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉನ್ನತ ಶಿಕ್ಷಣ ಕಾಲೇಜುಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. 

Advertisement

ಮೂಲ ಸೌಕರ್ಯ ಹಾಗೂ ವಿವಿಧ ಸೌಲಭ್ಯಗಳನ್ನೊಳಗೊಂಡ ಬಂಟರ ಸಂಘದ ಉನ್ನತ ಶಿಕ್ಷಣ ಕಾಲೇಜುಗಳ ಯಶಸ್ವಿಗಾಗಿ ಬಂಟರ ಸಂಘ ಹಾಗೂ ಉನ್ನತ ಶಿಕ್ಷಣ ಸಮಿತಿ ವಿಶೇಷ ಕಾಳಜಿ ವಹಿಸುತ್ತಿದೆ. ಸಮಿತಿಯನ್ನು ಅಭಿನಂದಿಸಿದರು. ರಮಾನಾಥ ಎಸ್‌. ಪಯ್ಯಡೆ ಆದರಾತಿಥ್ಯ ಕಾಲೇಜು ಪ್ರತೀ ವರ್ಷ ಉತ್ತಮ ಗುಣಮಟ್ಟದ ಫಲಿತಾಂಶ ಪಡೆಯುತ್ತಿರುವುದಕ್ಕೆ ಸಂತಸವಾಗುತ್ತಿದೆ.  ವಿದ್ಯಾರ್ಥಿಗಳ ಭವಿಷ್ಯ ಇನ್ನಷ್ಟು ಉತ್ತಮವಾಗಲಿ 
– ಡಾ| ಪಿ. ವಿ. ಶೆಟ್ಟಿ  (ಗೌರವ ಜತೆ ಕಾರ್ಯದರ್ಶಿ : ಮುಂಬಯಿ ಕ್ರಿಕೆಟ್‌ ಅಸೋಸಿಯೇಶನ್‌)

ಚಿತ್ರ-ವರದಿ:ಪ್ರೇಮನಾಥ್‌ ಶೆಟ್ಟಿ  ಮುಂಡ್ಕೂರು. 

Advertisement

Udayavani is now on Telegram. Click here to join our channel and stay updated with the latest news.

Next