Advertisement

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

11:20 AM Jan 31, 2019 | Team Udayavani |

ರಾಮದುರ್ಗ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ವರ್ಗದ ನೌಕರರಿಗೆ ಸೇವಾಭದ್ರತೆ, ವೇತನ ಶ್ರೇಣಿ, ಪಿಂಚಣಿ ಮತ್ತು ಇತರೆ ಸೌಲಭ್ಯಗಳ ಬೇಡಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನೌಕರರ ತಾಲೂಕಾ ಘಟಕದಿಂದ ಬುಧವಾರ ತಹಶೀಲ್ದಾರ ಮೂಲಕ ಸಹಕಾರ ಸಚಿವರಿಗೆ ಮನವಿ ಸಲ್ಲಿಸಿದರು.

Advertisement

ಈ ವೇಳೆ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಎನ್‌.ಬಿ. ದಂಡಿನದುರ್ಗಿ ಮಾತನಾಡಿ, ರಾಜ್ಯದಲ್ಲಿ ಕೃಷಿ ಪತ್ತಿನ ವ್ಯವಸ್ಥೆ ಮೂರು ಹಂತದಲ್ಲಿದ್ದು, ಬಹುತೇಕ ಕಷ್ಟ ನಷ್ಟ ಶೋಷಣೆಗಳಿಗೆ ಗುರಿಯಾಗಿ ಸಾಕಷ್ಟು ನಷ್ಟ ಹಾಗೂ ಅಪವಾದಗಳಿಗೆ ನೌಕರರೇ ದೋಷಿತರಾಗಿ ಕನಿಷ್ಠ ವೇತನ ಸೇವಾ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಚಾಲ್ತಿಯಲ್ಲಿರುವ ಸಹಕಾರ ಸಂಘಗಳ ಕಾಯ್ದೆ ಕಾನೂನಿನ ಅನ್ವಯ ದೊರೆಯಲಿದ್ದ ನಿವೃತ್ತಿ ಸೌಲಭ್ಯಗಳಿಂದಲೂ ಬಹುತೇಕರು ವಂಚಿತರಾಗಿದ್ದು, ಅಲ್ಲದೇ ನಿಯಮಾವಳಿಗಳ ಅನುಷ್ಠಾನದ ದ್ವಂದ್ವ ನೀತಿಗಳಿಂದ ಶಾಶ್ವತ ವೇತನ ಸೌಲಭ್ಯಗಳು ಜಾರಿಗೆ ಬಂದಿಲ್ಲ ಎಂದು ಆರೋಪಿಸಿದರು.

ಈ ಹಿಂದೆ 1984ರವರೆಗೆ ಜಾರಿಯಲ್ಲಿದ್ದ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 128ಎ ರಂತೆ ಸರಕಾರ ಹೊಂದಿದ ಅಧಿಕಾರವನ್ನು ಪುನರ್‌ ಸ್ಥಾಪಿಸಿ ಸರಕಾರದ ನೇರ ನಿಯಂತ್ರಣಕ್ಕೆ ಒಳಪಟ್ಟಂತೆ ಅವಶ್ಯವಿದ್ದರೆ ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಬೇಕು. ರಾಜ್ಯದ ಎಲ್ಲ ಪಿ.ಎ.ಸಿ.ಸಿ.ಎಸ್‌ಗಳ ನೌಕರರಿಗೆ ಶಾಶ್ವತ ವೇತನ ಸೇವಾ ಸೌಲಭ್ಯಗಳನ್ನು ಹಾಗೂ ನೆರೆಯ ಕೇರಳ ರಾಜ್ಯದ ಮಾದರಿಯಲ್ಲಿ ಕರ್ನಾಟಕ ರಾಜ್ಯದ ಸಹಕಾರ ಸಂಘಗಳ ಹಾಗೂ ನೌಕರರ ಹಿತರಕ್ಷಣೆಗೆ ಪೂರಕವಾದ ವಿವಿಧ ಸಮಿತಿಗಳನ್ನು ಕಾಯ್ದೆ ಕಾನೂನು ಬದ್ಧವಾಗಿ ಜಾರಿಗೆ ತಂದು ಸಾಮಾಜಿಕ ನ್ಯಾಯ ದೊರಕಿಸಿ ಕೊಡಬೇಕು ಎಂದು ಮನವಿ ಮೂಲಕ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಬಸವರಾಜ ಸೋಮಗೊಂಡ, ಬಸವರಾಜ ಗಾಣಗೇರ, ಬಸನಗೌಡ ದ್ಯಾವನಗೌಡ್ರ, ಶಬ್ಬಿರ ಮಹಾತ, ಮಾರುತಿ ರಡ್ರಟ್ಟಿ, ಚಂದ್ರ ಹಿರೇಮಠ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next