Advertisement

ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ

09:01 AM Jan 10, 2025 | Team Udayavani |

ಮುಧೋಳ: ಮದುವೆ ವಯಸ್ಸು ಮೀರಿ ಹೆಣ್ಣು ಸಿಗದ ಕೊರಗಿನಲ್ಲಿದ್ದ ಯುವಕನಿಗೆ ಮದುವೆ ಮಾಡಿಸುವುದಾಗಿ ಹೇಳಿ ಲಕ್ಷಾಂತರ ರೂ. ವಂಚಿಸಿರುವ ಘಟನೆ ಸಮೀಪದ ಬಿದರಿ ಗ್ರಾಮದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

Advertisement

ಯುವಕನಿಂದ 4ಲಕ್ಷ ರೂ. ಪಡೆದ ವಂಚಕರ ಗುಂಪು ಶಿವಮೊಗ್ಗ ಮೂಲದ ಮಹಿಳೆಯೊಂದಿಗೆ ಮದುವೆ ಮಾಡಿಸಿದ್ದಾರೆ. ಮದುವೆ ಬಳಿಕ ವಿವಾಹಿತ ಮಹಿಳೆ ಹಾಗೂ ಹಣ ಪಡೆದ ಬ್ರೋಕರ್ ಗಳು ಪರಾರಿಯಾಗಿದ್ದು, ಮೋಸಹೋಗಿರುವ ಯುವಕ ಮುಧೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ನ್ಯಾಯ ದೊರೆಕಿಸಿಕೊಡುವಂತೆ ಅಂಗಲಾಚುತ್ತಿದ್ದಾನೆ.

ಬಿದರಿ ಗ್ರಾಮದ ಸೋಮಶೇಖರ ಗುಲಗಾಲಜಂಬಗಿ ಎಂಬಾತ ಕಳೆದ ವರ್ಷ ತನ್ನ ಮದುವೆ ಮಾಡಿಸುವಂತೆ ಬ್ರೋಕರ್ ಗಳಿಗೆ ನಾಲ್ಕು ಲಕ್ಷ ರೂ. ನೀಡಿದ್ದ ಹಣ ಪಡರದ ಬ್ರೋಕರ್ ಗಳು ಶಿವಮೊಗ್ಗ ಮೂಲದ ಮಹಿಳೆಯೊಂದಿಗೆ ಸೋಮಶೇಖರನ‌ ಮದುವೆಯನ್ನು ನಗರದ ಕಾಳಿಕಾದೇವಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ಮಾಡಿದ್ದರು. ಆದರೆ ಮದುವೆಯಾದ ಒಂದೇ ತಿಂಗಳಿನಲ್ಲಿ ಮಹಿಳೆ ಸೋಮಶೇಖರನನ್ನು ಬಿಟ್ಟು ಹೊರಟುಹೋಗಿದ್ದಾಳೆ. ಈ ಬಗ್ಗೆ ವಿಚಾರಿಸಲು ಸೋಮಶೇಖರ ಬ್ರೋಕರ್ ಗಳನ್ನು ಸಂಪರ್ಕಿಸಲು ಮುಂದಾದಾಗ ಅವರು ನಾಪತ್ತೆಯಾಗಿದ್ದಾರೆ. ಪತ್ನಿ ಹಾಗೂ ಹಣ ಎರಡನ್ನೂ ಕಳೆದುಕೊಂಡು ಕಂಗಾಲಾಗಿರುವ ಸೋಮಶೇಖರ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

ಮಹಿಳೆಗೆ ಮೂರನೇ ಮದುವೆ : ಸೋಮಶೇಖರನನ್ನು ವಿವಾಹವಾಗಿರುವ ಮಹಿಳೆ ಶಿವಮೊಗ್ಗ ಮೂಲದವಳಿದ್ದು, ಈ ಹಿಂದಯೇ ಅವಳಿಗೆ ಎರಡು‌ ಮದುವೆಯಾಗಿ ಮಕ್ಕಳಿರುವುದಾಗಿ ತಿಳಿದುಬಂದಿದೆ. ಹಣ ಹಾಗೂ ಚಿನ್ನಾಭರಣದ ಆಸೆಗಾಗಿ ಯುವಕನ ಜೀವನದಲ್ಲಿ ಚೆಲ್ಲಾಟವಾಡಿರುವ ಮಹಿಳೆಗಾಗಿ ಬಲೆ ಬೀಸಿರುವ ಪೊಲೀಸರು ವಂಚಕರ ಪತ್ತೆಗೆ ಮುಂದಾಗಿದ್ದಾರೆ.

ಏಳು ಜನರ ವಿರುದ್ದ ದೂರು : ಮದುವೆ ಮಾಡಿಸುವುದಾಗಿ ಅಸೆ ಹುಟ್ಟಿಸಿ 4ಲಕ್ಷಕ್ಕೂ ಅಧಿಕ ಹಣವನ್ನು ಪಡೆದ ವಂಚಕರು ಹಣವನ್ನು ಮರಳಿ ಸೋಮಶೇಖರಿಗೆ ಇದೂವರೆಗೂ ಹಿಂದುರಿಗಿಸಿಲ್ಲ. ಘಟನೆ ನಡೆದು ಒಂದುವರ್ಷ ಕಳೆದರೂ ಆರೋಪಿತರು ಹಣ ಮರಳಿಸದಿದ್ದಾಗ ಸೋಮಶೇಖರ ಅವರು ಮದುವೆಯಾಗಿರುವ ಮಂಜುಳಾ ಎ., ಸತ್ಯಪ್ಪ ಶಿರೂರ, ಸಂಜು ಮಾಳಿ, ರವಿ ಅರಭಾವಿ, ಲಕ್ಷ್ಮಿ ಗೋಲಭಾವಿ, ನಾಗವ್ವ ಆಚಾರಿ, ಸಿದ್ದಪ್ಪ ಸೂರ್ಯವಂಶಿ ಅವರ ವಿರುದ್ದ ದೂರು ದಾಖಲಿಸಿದ್ದಾರೆ.

Advertisement

ಸಾಲ ಮಾಡಿ ಹಣ ನೀಡಿರುವೆ : ಮದುವೆಯಾಗಿ ಹೊಸ ಜೀವನ ರೂಪಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಸಾಲಸೋಲ ಮಾಡಿ ಹಣ ನೀಡಿರುವೆ ಇದೀಗ ವಂಚನೆಗೊಳಗಾಗಿ ಆಕಾಶವೇ ಕಳಚಿ ಬಿದ್ದಂತಾಗಿದೆ ಎಂದು ಯುವಕನ ಪೋಷಕರು ತಮ್ಮ ಅಸಾಯಕತೆ ಹೊರಹಾಕಿದರು.

ಅರಿವಿಲ್ಲದೆ ಟ್ರ್ಯಾಪ್ ಆದನಾ ಯುವಕ ?: ಹೇಗಾದರೂ ಮಾಡಿ ಮದುವೆಯಾಗಿ ಸುಂದರ ಜೀವನದ ಕನಸ್ಸು ಕಂಡಿದ್ದ ಯುವಕ‌‌ ತನ್ನ ಸಂಬಂಧಿಕರನ್ನು‌ ನಂಬಿ ತನಗರಿವಿಲ್ಲದಂತೆ ಟ್ರ್ಯಾಪ್‌ ಬಲೆಗೆ ಬಿದ್ದಿರುವ ಶಂಕೆ ವ್ಯಕ್ತವಾಗುತ್ತಿದೆ. ಆರೋಪಿತರಲ್ಲಿ ಸಂಜು ಮಾಳಿ ಎಂಬಾತ ಸೋಮಶೇಖರನ ದೂರದ ಸಂಬಂಧಿ‌‌. ಸಂಬಂಧಿಕರನ್ನು ನಂಬಿ ಹಣ ನೀಡಿರುವ ಯುವಕನಿಗೆ ಇತ್ತ ಮಡದಿಯೂ ಇಲ್ಲ ಅತ್ತ ಹಣವೂ ಇಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
**
ಹೆಣ್ಣು ಸಿಗದೆ ವಯಸ್ಸಾದವರನ್ನು ಗುರಿಯಾಗಿಸಿಕೊಂಡು ವಂಚಿಸುವ ಗುಂಪಿನಿಂದ ಈ ಕೃತ್ಯ ನಡೆದಿರುವ ಶಂಕೆ ಇದೆ. ಜೊಲ್ಲೆಯಲ್ಲಿಯೇ ಮೊದಲ ಇದು ಮೊದಲ ಪ್ರಕರಣವಾಗಿದ್ದು, ಇಂತಹ ವಂಚನೆ ಗುಂಪಿನಿಂದ ಇದೇ ರೀತಿ ಪಕ್ಕದ ಜಿಲ್ಲೆಗಳಲ್ಲೂ ಕೃತ್ಯಗಳು ನಡೆದಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುವುದು.
– ಅಮರನಾಥ ರೆಡ್ಡಿ ಜಿಲ್ಲಾ‌ ಪೊಲೀಸ್ ವರಿಷ್ಠಾಧಿಕಾರಿ ಬಾಗಲಕೋಟೆ
**
ಮದುವೆಯಾಗಿ ಜೀವನ ನಡೆಸಬೇಕು ಎನ್ನುವ ಉದ್ದೇಶದಿಂದ ಸಾಲಸೋಲ ಮಾಡಿ ಹಣ ನೀಡಿ ಮದುವೆಯಾಗಿರುವೆ. ಈಗ ಚನೆಯಿಂದ ಕಂಗಾಲಾಗಿರುವ ನಾವು ನೀಡಿರುವ ಹಣವೂ ಇಲ್ಲ. ಮದುವೆಯಾದ ಮಡದಿಯೂ ಇಲ್ಲ. ನಮಗೆ ನ್ಯಾಯ ದೊರೆಕಿಸಿಕೊಡಬೇಕು ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿರುವೆ.
– ಸೋಮಶೇಖರ ಗುಲಗಾಲಜಂಬಗಿ ವಂಚನೆಗೊಳಗಾದ ವ್ಯಕ್ತಿ

ಇದನ್ನೂ ಓದಿ: Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Advertisement

Udayavani is now on Telegram. Click here to join our channel and stay updated with the latest news.

Next