ಬೆಂಗಳೂರು: ರಾಜ್ಯಸಭಾ ಚುನಾವಣೆಯ ಎರಡನೇ ಅಭ್ಯರ್ಥಿಯನ್ನು ವಾಪಾಸ್ ಪಡೆಯುವ ಬಗ್ಗೆ ಈಗ ಕಾಂಗ್ರೆಸ್ ನಲ್ಲೇ ಒತ್ತಾಯ ಆರಂಭವಾಗಿದೆ. ಇದೊಂದು ಗಾಳಿಯಲ್ಲಿ ಗುದ್ದಾಡುವ ವ್ಯರ್ಥ ಪ್ರಯತ್ನ ಎಂಬ ಚರ್ಚೆ ಪ್ರಾರಂಭವಾಗಿದೆ.
ಸಿದ್ದರಾಮಯ್ಯ ಒತ್ತಾಸೆ ಮೇರೆಗೆ ಮನ್ಸೂರ್ ಅಲಿ ಖಾನ್ ಅವರನ್ನು ಎರಡನೇ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಲಾಗಿದೆ. ಆದರೆ ಎರಡನೇ ಪ್ರಾಶಸ್ತ್ಯದ ಮತಗಳ ಮೂಲಕವೂ ಗೆಲ್ಲುವ ಸಂಖ್ಯೆ ಲಭಿಸುವುದಿಲ್ಲ. ಹೀಗಾಗಿ ತಮಗೆ ಬೆಂಬಲಿಸಿ ಎಂದು ಜೆಡಿಎಸ್ ನಾಯಕರು ಖುದ್ದು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಆದರೆ ಮಾತುಕತೆಯ ಬದಲು “ನಿಮ್ಮ ಅಭ್ಯರ್ಥಿಯನ್ನೇ ವಾಪಾಸ್ ಪಡೆಯಿರಿ” ಎಂದು ಸಿದ್ದರಾಮಯ್ಯ ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿ ಕಳುಹಿಸಿದ್ದಾರೆ.
ಇದನ್ನೂ ಓದಿ:ಸೌದಿಯಲ್ಲಿ ಅವಳಿ ಗಗನಚುಂಬಿ ಕಟ್ಟಡ! ಅರೇಬಿಯಾದ ಜೆಡ್ಡಾದಲ್ಲಿ ನಿರ್ಮಿಸಲಾಗುವ ದೈತ್ಯ ಕಟ್ಟಡಗಳು
ಆದರೆ ಕಾಂಗ್ರೆಸ್ ಒಳಮನೆಯಲ್ಲಿ ಬೇರೆಯದೇ ಲೆಕ್ಕಾಚಾರಗಳು ನಡೆಯುತ್ತಿವೆ. ಕುಪ್ಪೇಂದ್ರ ರೆಡ್ಡಿ ಹಾಗೂ ಅವರ ಆಪ್ತರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ವಸ್ತುಸ್ಥಿತಿ ವಿವರಿಸಿದ್ದಾರೆ. ಎರಡನೇ ಅಭ್ಯರ್ಥಿ ವಾಪಾಸ್ ಪಡೆಯದೇ ಇದ್ದರೆ ಬಿಜೆಪಿಗೆ ಗೆಲುವು ಸುಲಭವಾಗುತ್ತದೆ. ಈ ಗೆಲುವಿಗೆ ಕಾಂಗ್ರೆಸ್ ಕಾರಣ ಎಂದು ವ್ಯಾಖ್ಯಾನಿಸಲಾಗುತ್ತದೆ. ಸೋಲುವ ಕಡೆ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಟ್ಟರು ಎಂಬ ಸಂದೇಶ ರವಾನೆಯಾಗುತ್ತದೆ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಗೆ ಬಿಜೆಪಿಯೇ ಎದುರಾಳಿ. ರಾಜ್ಯದಲ್ಲಿ ಯಾವಾಗ ಯಾವ ರೀತಿ ಸಂದರ್ಭ ಸೃಷ್ಟಿಯಾಗುತ್ತದೆ ಎಂಬ ಬಗ್ಗೆ ಯಾರಿಗೂ ಗೊತ್ತಿಲ್ಲ ಎಂಬ ಚರ್ಚೆ ಕಾಂಗ್ರೆಸ್ ನಲ್ಲಿ ಆರಂಭವಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಬಿ.ಕೆ.ಹರಿಪ್ರಸಾದ್ ಎರಡನೇ ಅಭ್ಯರ್ಥಿ ವಾಪಾಸ್ ಪಡೆಯುವ ಬಗ್ಗೆ ಉತ್ಸುಕರಾಗಿದ್ದು, ನಾಳೆ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.