Advertisement
ರಾಜ್ಯಸಭೆ ಸದಸ್ಯ ಪ್ರಭಾಕರ ಕೋರೆ ಮರು ಆಯ್ಕೆ ಬಯಸಿದ್ದರೆ, ಮಾಜಿ ಸಂಸದ ರಮೇಶ್ ಕತ್ತಿ ಆಕಾಂಕ್ಷಿಯಾಗಿ ದ್ದಾರೆ. ರಾಜ್ಯ ಬಿಜೆಪಿ ಉಪಾಧ್ಯಕ್ಷ ಡಾ| ಎಂ. ನಾಗರಾಜ್, ಉದ್ಯಮಿ ಪ್ರಕಾಶ್ ಶೆಟ್ಟಿ ಬಿಜೆಪಿಯಿಂದ ರಾಜ್ಯಸಭೆ ಪ್ರವೇಶಿ ಸುವ ಬಯಕೆಯಲ್ಲಿದ್ದಾರೆ. ಈ ನಡುವೆ ಇನ್ಫೋಸಿಸ್‌ನ ಮಾಜಿ ಅಧ್ಯಕ್ಷ ಕೆ.ವಿ. ಕಾಮತ್ ಅವರ ಹೆಸರನ್ನು ಕೇಂದ್ರ ನಾಯಕರು ಸೂಚಿಸಿದರೂ ಅಚ್ಚರಿಯಲ್ಲ ಎಂಬ ಮಾತುಗಳಿವೆ.ನಾಮಪತ್ರ ಸಲ್ಲಿಕೆಗೆ ಜೂ. 9 ಕೊನೆಯ ದಿನವಾಗಿದ್ದು,ಬಿಜೆಪಿಯಲ್ಲೂ ಟಿಕೆಟ್‌ಗಾಗಿ ಲಾಬಿ ಚುರುಕುಗೊಂಡಿದೆ.
Related Articles
Advertisement
ಶನಿವಾರ ಕೋರ್ ಕಮಿಟಿ ಸಭೆರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಭಾಕರ ಕೋರೆ, ರಮೇಶ್ ಕತ್ತಿ, ಡಾ| ಎಂ. ನಾಗರಾಜ್, ಪ್ರಕಾಶ್ ಶೆಟ್ಟಿ ಅವರು ಪಕ್ಷದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಶನಿವಾರ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯಾಗಲಿದೆ. ಬಳಿಕ ಸಂಭಾವ್ಯರ ಪಟ್ಟಿ ವರಿಷ್ಠರಿಗೆ ರವಾನೆಯಾಗಲಿದೆ. ಈ ನಡುವೆ ವರಿಷ್ಠರು ನಿರ್ದಿಷ್ಟ ಹೆಸರು ಸೂಚಿಸಿದರೂ ಅಚ್ಚರಿ ಇಲ್ಲ.