Advertisement

ರಾಜ್ಯಸಭೆ: ಗುಜರಾತ್‌ ಬಿಜೆಪಿಗೆ ಆಯ್ಕೆ ಗೊಂದಲ

11:00 AM Mar 05, 2018 | Harsha Rao |

ಅಹಮದಾಬಾದ್‌: ರಾಜ್ಯಸಭೆಯ 58 ಸ್ಥಾನಗಳಿಗೆ ಘೋಷಣೆಯಾಗಿರುವ ಚುನಾವಣೆಯಲ್ಲಿ, ಗುಜರಾತ್‌ನಲ್ಲಿ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ ಮತ್ತು ಬಿಜೆಪಿ ತಲಾ ಎರಡು ಕ್ಷೇತ್ರಗಳಲ್ಲಿ ಗೆಲ್ಲುವ ಅವಕಾಶ ಹೊಂದಿದೆ. ಈ ಹಿಂದೆ ನಾಲ್ಕೂ ಸ್ಥಾನಗಳು ಬಿಜೆಪಿ ತೆಕ್ಕೆಯಲ್ಲಿದ್ದವು. ಹೀಗಾಗಿ ನಿವೃತ್ತರಾಗಲಿರುವ ಅರುಣ್‌ ಜೇಟಿÉ, ಪುರುಷೋತ್ತಮ ರುಪಾಲಾ, ಮನಸುಖ ಮಾಂಡವಿಯಾ ಮತ್ತು ದಲಿತ ಮುಖಂಡ ಶಂಕರಭಾಯಿ ವೇಗಡ ಪೈಕಿ ಯಾರನ್ನು ಕಣಕ್ಕಿಳಿಸಬೇಕು ಮತ್ತು ಯಾರನ್ನು ಕೈಬಿಡಬೇಕು ಎಂಬ ಗೊಂದಲ ಉಂಟಾಗಿದೆ. ಈ ಬಗ್ಗೆ ಪಕ್ಷದೊಳಗೆ ಭಾರೀ ಪ್ರಮಾಣದ ಲಾಬಿ ಕೂಡ ನಡೆದಿದೆ ಎನ್ನಲಾಗಿದೆ.

Advertisement

2012ರಲ್ಲಿ 115 ಸ್ಥಾನ ಗಳಿಸಿದ್ದ ಬಿಜೆಪಿ ಗುಜರಾತ್‌ ವಿಧಾನಸಭೆಯಲ್ಲಿ 99 ಸ್ಥಾನಕ್ಕೆ ತೃಪ್ತಿಪಟ್ಟು ಕೊಂಡಿತ್ತು. ಇನ್ನೊಂದೆಡೆ ಕಾಂಗ್ರೆಸ್‌ 60ರಿಂದ 77ಕ್ಕೆ ತನ್ನ ಸಂಖ್ಯಾಬಲವನ್ನು ಹೆಚ್ಚಿಸಿಕೊಂಡಿದ್ದರಿಂದ, ರಾಜ್ಯಸಭೆಗೆ ಇಬ್ಬರನ್ನು ಹೆಚ್ಚುವರಿಯಾಗಿ ಕಳುಹಿಸಲು ಸಾಮರ್ಥ್ಯ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next