Advertisement
ಅಡ್ಡಮತದಾನದ ಭೀತಿ ಎದುರಾಗಿರುವುದರಿಂದ ಆಡಳಿತಾರೂಢ ಕಾಂಗ್ರೆಸ್ ತನ್ನ ಶಾಸಕರನ್ನು ಮತದಾನ ದಿನದ (ಫೆ.27) ತನಕ ರೆಸಾರ್ಟ್‌ಗೆ ಸ್ಥಳಾಂತರಿಸುವ ಆಲೋಚನೆಯಲ್ಲಿದೆ.
ಜೆಡಿಎಸ್‌ಗೂ ಅಡ್ಡ ಮತದಾನದ ಭೀತಿಯಿದೆ. ತನ್ನ 6 ಮಂದಿ ಶಾಸಕರು ಅಡ್ಡ ಮತದಾನ ಮಾಡಬಹುದೆಂಬ ವದಂತಿ ದಟ್ಟವಾಗಿದ್ದು, ಆ ಪಕ್ಷವೂ ತನ್ನ ಶಾಸಕರನ್ನು ರೆಸಾರ್ಟ್‌ಗೆ ಸಾಗಿಸುವ ಸಾಧ್ಯತೆಯೂ ಇದೆ!
Related Articles
Advertisement
ಈ ಹಿನ್ನೆಲೆಯಲ್ಲಿ ತನ್ನ 135 ಶಾಸಕರ ಜತೆಗೆ ಪಕ್ಷೇತರರಾದ ಲತಾ ಮಲ್ಲಿಕಾರ್ಜುನ್, ಪುಟ್ಟಸ್ವಾಮಿ ಗೌಡ ಹಾಗೂ ದರ್ಶನ್ ಪುಟ್ಟಣ್ಣಯ್ಯ ಜತೆಗೆ ರೆಸಾರ್ಟ್‌ಗೆ ತೆರಳಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ.
ಸುಮಾರು 200 ಮಂದಿಗೆ ವಾಸ್ತವ್ಯವುಳ್ಳ ಹೊಟೇಲ್ ಅಥವಾ ರೆಸಾರ್ಟ್ ಹುಡುಕುವ ಕೆಲಸ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮೊಗಸಾಲೆಯಲ್ಲಿ ಮಾಕೆನ್ಈ ಮಧ್ಯೆ ಕಾಂಗ್ರೆಸ್ ಅಭ್ಯರ್ಥಿ ಅಜಯ್ ಮಾಕೆನ್ ವಿಧಾನಸಭೆಯ ಮೊಗಸಾಲೆಯಲ್ಲಿ ಆಡಳಿತ ಪಕ್ಷದ ಶಾಸಕರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಸರಕಾರಿ ಮುಖ್ಯ ಸಚೇತಕ ಪಿ.ಎಂ.ಅಶೋಕ್ ಅವರು ಶಾಸಕರನ್ನು ಪರಿಚಯ ಮಾಡಿಕೊಟ್ಟರು. ಮಂಗಳವಾರ ಮತ್ತೂಬ್ಬ ಅಭ್ಯರ್ಥಿ ಜಿ.ಸಿ.ಚಂದ್ರಶೇಖರ್ ಆಗಮಿಸಿದ್ದರು. ಅಧಿವೇಶನ ವಿಸ್ತರಣೆಗೂ ಕಸರತ್ತು
ಶುಕ್ರವಾರ ಅಂತ್ಯಗೊಳ್ಳಲಿರುವ ವಿಧಾನಮಂಡಲದ ಅಧಿವೇಶನವನ್ನು ಬುಧವಾರದವರೆಗೂ ವಿಸ್ತರಿಸುವ ಚಿಂತನೆಯನ್ನೂ ಸರಕಾರ ಮಾಡಿದೆ ಎನ್ನಲಾಗಿದೆ. ಸೋಮವಾರದಿಂದ ಬುಧವಾರದ ಕಲಾಪಕ್ಕೆ ಮೂರು ದಿನ ವಿಪ್ ಜಾರಿಗೊಳಿಸಿ ಅಧಿವೇಶನ ನಡೆಸಬಹುದೇ ಎಂಬ ಲೆಕ್ಕಾಚಾರ ಸಾಗಿದೆ. ಆದರೆ ಈ ಬಗ್ಗೆ ಸ್ಪೀಕರ್ ಯು.ಟಿ.ಖಾದರ್ ಒಲವು ತೋರಿಲ್ಲ ಎನ್ನಲಾಗಿದೆ. ಹೀಗಾಗಿ ರೆಸಾರ್ಟ್‌ಗೆ ಹೋಗುವುದು ಅನಿವಾರ್ಯವಾಗಲಿದೆ. ಬಿಜೆಪಿ ನಡೆ ಇನ್ನೂ ನಿಗೂಢ
ಇಂದು ಬೆಂಗಳೂರಿನಲ್ಲಿ ಶಾಸಕಾಂಗ ಪಕ್ಷದ ಸಭೆ
ಬೆಂಗಳೂರು: ರಾಜ್ಯಸಭೆ ಚುನಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿ ನಡೆ ನಿಗೂಢವಾಗಿದ್ದು, ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಗೆಲುವಿಗೆ ಕಾರ್ಯತಂತ್ರವೇನು ಎಂಬುದು ಗುಟ್ಟಾಗಿಯೇ ಉಳಿದಿದೆ. ಅಭ್ಯರ್ಥಿಯನ್ನು ಗೆಲ್ಲಿಸಿ ಆಡಳಿತ ಪಕ್ಷಕ್ಕೆ ಮುಜುಗರ ಸೃಷ್ಟಿಸಬೇಕೆಂಬ ಆಸೆಯನ್ನು ಉಭಯ ಪಕ್ಷಗಳು ಹೊಂದಿವೆಯಾದರೂ, ಕಾರ್ಯತಂತ್ರದ ಬಗ್ಗೆ ಇದುವರೆಗೆ ಜಂಟಿಯಾಗಿ ಸಭೆ ನಡೆಸಿ ಚರ್ಚಿಸಿಲ್ಲ. ಎರಡು ದಿನಗಳಿಂದ ಸದನದಲ್ಲಿ ಕಾಣಿಸಿಕೊಳ್ಳದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಬುಧವಾರ ಪುತ್ರ ನಿಖೀಲ್ ಜತೆ ದಿಲ್ಲಿಗೆ ಪ್ರಯಾಣ ಬೆಳೆಸಿದ್ದರೆ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಇಂದು ಸ್ವಲ್ಪ ಹೊತ್ತು ಮಾತ್ರ ಕಲಾಪದಲ್ಲಿ ಕಾಣಿಸಿಕೊಂಡರು. ಸಾಯಂಕಾಲದ ಬಳಿಕ ಅವರು ರಹಸ್ಯ ಸ್ಥಳದಲ್ಲಿ ಆಪ್ತರ ಜತೆಗೆ ಚರ್ಚೆ ನಡೆಸಿದರು ಎಂದು ತಿಳಿದು ಬಂದಿದೆ. ಈ ಮಧ್ಯೆ ಗುರುವಾರ ಸಂಜೆ ಏಳು ಗಂಟೆಗೆ ಬೆಂಗಳೂರಿನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗಿದೆ. ಇಲ್ಲಿ ಚುನಾವಣ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಕಡಿಮೆ.