Advertisement

ರಾಜ್ಯಸಭಾ ಚುನಾವಣೆ: ಬಿಜೆಪಿ ಶಾಸಕರಿಗೆ ಮತದಾನದ ಟ್ರೈನಿಂಗ್

10:19 AM Jun 08, 2022 | Team Udayavani |

ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಪ್ರತಿಯೊಂದು ಮತವೂ ಮಹತ್ವದ್ದಾಗಿರುವುದರಿಂದ ಬಿಜೆಪಿಯ ಶಾಸಕರಿಗೆ ಮತದಾನದ ತರಬೇತಿ ನೀಡಲು ನಿರ್ಧರಿಸಲಾಗಿದೆ. ಇಂದು ಸಂಜೆ ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ನಡೆಯುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ಸಂದರ್ಭದಲ್ಲಿ ಈ ತಾಲೀಮು ನಡೆಸಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

Advertisement

ಪ್ರತಿಯೊಂದು ಮತವೂ ಮಹತ್ವದ್ದಾಗಿದೆ. ಒಂದು ಮತ ಕುಲಗೆಟ್ಟರೂ ಅಭ್ಯರ್ಥಿಗೆ ಹಿನ್ನಡೆಯಾಗುತ್ತದೆ. ಹೀಗಾಗಿ ಅಸಿಂಧುವಾಗದ ರೀತಿಯಲ್ಲಿ ಹಕ್ಕು ಚಲಾಯಿಸುವುದಕ್ಕೆ ತರಬೇತಿ ನೀಡಲಾಗುತ್ತದೆ. ಪಕ್ಷದ ಹಿರಿಯ ಸದಸ್ಯರ ಜತೆಗೆ ವಿಧಾನಸಭೆ ಸಚಿವಾಲಯದ ಕೆಲ ನಿವೃತ್ತ ಅಧಿಕಾರಿಗಳ ಮೂಲಕ ಈ ತಾಲೀಮು ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ವಿಧಾನಸಭೆಗೆ ವಿಜಯೇಂದ್ರ ಸ್ಪರ್ಧೆ ಖಚಿತ: ಸಾಮೂಹಿಕ ನಾಯಕತ್ವದಲ್ಲಿ ಪ್ರಚಾರ:  ಬಿಎಸ್‌ವೈ

ಮೊದಲ ಬಾರಿಗೆ ಶಾಸಕರಾದ ಹಲವರಿಗೆ ರಾಜ್ಯಸಭಾ ಚುನಾವಣೆ ಇದೇ ಮೊದಲು. ಹೀಗಾಗಿ ಇಂಥವರಿಗೆ ತರಬೇತಿ ನೀಡುವುದು ಸೂಕ್ತ ಎಂದು ತೀರ್ಮಾನಿಸಲಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಸಂಜೆ 7 ಗಂಟೆಗೆ ಬಿಜೆಪಿಯ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next