Advertisement

ದೇಶಕ್ಕೆ ರಾಜೀವ ಗಾಂಧಿ ಕೊಡುಗೆ ಅಪಾರ

04:16 PM May 22, 2018 | Team Udayavani |

ಶೃಂಗೇರಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವವನ್ನು ಎತ್ತಿ ಹಿಡಿದಿದ್ದರು.ದೂರ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಕ್ರಾಂತಿ ಉಂಟು ಮಾಡಿ ಸಂಪರ್ಕ ಸೇವೆಯನ್ನು ಅಭಿವೃದ್ಧಿ ಪಡಿಸಿದ ಕೀರ್ತಿ ರಾಜೀವ್‌ ಗಾಂಧಿ ಅವರಿಗೆ ಸಲ್ಲುತ್ತದೆ ಎಂದು ಕಾಂಗ್ರೆಸ್‌ ಮುಖಂಡ ಕೆ.ಎನ್‌.ಗೋಪಾಲಹೆಗ್ಡೆ ಹೇಳಿದರು.

Advertisement

ಪಟ್ಟಣದಲ್ಲಿ ರಾಜೀವ್‌ ಗಾಂಧಿಪುಣ್ಯ ತಿಥಿ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ರೀ ಮಠದ ಭಕ್ತರಾಗಿದ್ದ ರಾಜೀವ್‌ಗಾಂಧಿ, ಪೀಠಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದು, ಜಗದ್ಗುರುಗಳ ಆಶೀರ್ವಾದ ಪಡೆದಿದ್ದರು ಎಂದರು.

ಬ್ಲಾಕ್‌ ಕಾಂಗ್ರೆಸ್‌ ಮಹಿಳಾ ಕಾರ್ಯಧ್ಯಕ್ಷೆ ಸೌಮ್ಯ ಮಾತನಾಡಿ, ಶತಮಾನ ಇತಿಹಾಸವಿರುವ ಕಾಂಗ್ರೆಸ್‌ ಪಕ್ಷದಲ್ಲಿ ನೆಹರೂ ಕುಟುಂಬವು ದೇಶಕ್ಕಾಗಿ ತಮ್ಮ ಜೀವವನ್ನೇ ಒತ್ತೆ ಇಟ್ಟಿದ್ದಾರೆ. ದೇಶ ಕಂಡ ಅಪ್ರತಿಮ ನಾಯಕರಲ್ಲಿ ರಾಜೀವ್‌ ಗಾಂಧಿ ಒಬ್ಬರಾಗಿದ್ದು, ಹಂತಕರ ದಾಳಿಗೆ ಬಲಿಯಾದರು. ಆದರೆ ಅವರು ಹಾಕಿಕೊಟ್ಟ ಮಾರ್ಗವು ದೇಶದ ಪ್ರಗತಿಗೆ ಪೂರಕವಾಗಿದೆ ಎಂದರು.

ಕಾಂಗ್ರೆಸ್‌ ವಕ್ತಾರ ಉಮೇಶ್‌ ಪುದುವಾಳ್‌ ಮಾತನಾಡಿ, ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ರಾಜೀವ್‌ ಗಾಂಧಿ ಯವರ ಕೊಡುಗೆ ಅಪಾರ. ಅತಿ ಚಿಕ್ಕ ವಯಸ್ಸಿನಲ್ಲಿ ದೇಶದ ಪ್ರಧಾನಿಯಾಗಿ, ಹಲವಾರು ಅಭೂತಪೂರ್ವ ಯೋಜನೆ ಅನುಷ್ಠಾನಗೊಳಿಸಿದರು. ತಾಯಿ ಇಂದಿರಾ ಗಾಂಧಿ ಮಾರ್ಗದರ್ಶನದಲ್ಲಿ ದೇಶದ ಬಡ ಜನರ ಕಷ್ಟವನ್ನು ಅರಿತು ಅವರ ಸೇವೆಗಾಗಿ ಸದಾ ದುಡಿದಿದ್ದರು ಎಂದರು.

ಇದೇ ಸಂದರ್ಭದಲ್ಲಿ ರಾಜೀವ್‌ ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಮುಖಂಡರಾದ ವಿದ್ಯಾರಣ್ಯಪುರ ಗ್ರಾ.ಪಂ.ಅಧ್ಯಕ್ಷ ರಾಜೇಶ್‌ ಶೆಟ್ಟಿ,ನಾಗರಾಜ ಶ್ರೇಷ್ಠಿ, ಮುರುಳಿಧರ ಪೈ, ವಿಜಯಕುಮಾರ್‌, ಪ್ರಕಾಶ್‌, ನಾಗೇಶ್‌ ಮತ್ತಿತರರು ಇದ್ದರು.

Advertisement

ಯುವಸಮೂಹಕ್ಕೆ ರಾಜೀವ ಗಾಂಧಿ ಮಾದರಿ
ಚಿಕ್ಕಮಗಳೂರು: ಜಿಲ್ಲಾ ಕಾಂಗ್ರೆಸ್‌ ಕಾರ್ಯಲಯದಲ್ಲಿ ಸೋಮವಾರ ದಿವಂಗತ ರಾಜೀವ್‌ ಗಾಂಧಿಯವರ ಪುಣ್ಯ ಸಂಸ್ಮರಣೆ ಕಾರ್ಯಕ್ರಮ ನಡೆಯಿತು. ರಾಜೀವ್‌ ಗಾಂಧಿಯವರ ಭಾವಚಿತ್ರಕ್ಕೆ ಪಕ್ಷದ ಮುಖಂಡರು, ಕಾರ್ಯಕರ್ತರು ಪುಷ್ಪಾರ್ಚನೆ ಮಾಡಿದರು. ಇದೇ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ| ಡಿ.ಎಲ್‌. ವಿಜಯಕುಮಾರ್‌, ರಾಜೀವ್‌ ಗಾಂಧಿಯವರು ಪ್ರಧಾನಮಂತ್ರಿಯಾಗಿದ್ದಾಗ ಈ ದೇಶಕ್ಕೆ ಅದರಲ್ಲೂ ಯುವ ಸಮೂಹವನ್ನು ಗಮನದಲ್ಲಿಟ್ಟು ಹಲವಾರು ಯೋಜನೆಯನ್ನು ಜಾರಿಗೆ ತಂದಿದ್ದರು ಎಂದು ಹೇಳಿದರು.

ಯುವಕರು ಮತದಾನದಲ್ಲಿ ತೊಡಗಬೇಕು. ಈ ಮೂಲಕ ಅವರಿಗೆ ಪ್ರಜಾಪ್ರಭುತ್ವದ ಮಹತ್ವ ತಿಳಿಸಿಕೊಡಬೇಕೆಂಬ ಸದುದ್ದೇಶದಿಂದ 18 ವರ್ಷ ತುಂಬಿದವರಿಗೆ ಮತದಾನದ ಹಕ್ಕನ್ನು ನೀಡಿದರು. ಮಾಹಿತಿ ತಂತ್ರಜ್ಞಾನವನ್ನು ದೇಶದಲ್ಲಿ ಮಿಂಚಿನ ರೀತಿಯಲ್ಲಿ ಪಸರಿಸುವ ಕೆಲಸ ಮಾಡಿದ್ದರು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಎಐಸಿಸಿ ಸದಸ್ಯ ಬಿ.ಎಂ. ಸಂದೀಪ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್‌. ಮೂರ್ತಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಂಜೇಗೌಡ, ಯುವಘಟಕದ ಜಿಲ್ಲಾಧ್ಯಕ್ಷ ಶಿವಕುಮಾರ್‌, ಜಿಲ್ಲಾ ವಕ್ತಾರ ಎಂ.ಸಿ.ಶಿವಾನಂದಸ್ವಾಮಿ, ಮುಖಂಡರಾದ ಎ.ಎನ್‌.ಮಹೇಶ್‌, ರೂಬಿನ್‌ ಮೋಸಸ್‌, ಚೇತನಾ, ಕಾರ್ತಿಕ್‌ ಚೆಟ್ಟಿಯಾರ್‌, ಓಂಕಾರೇಗೌಡ ಹಾಗೂ ಪಕ್ಷದ ಕಾರ್ಯಕರ್ತರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next