Advertisement

ರಾಯಲ್ಸ್ ಪರಾಕ್ರಮಕ್ಕೆ ತಲೆಬಾಗಿದ ಸೂಪರ್ ಕಿಂಗ್ಸ್

11:52 PM Sep 22, 2020 | Hari Prasad |

ಶಾರ್ಜಾ: ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಇಂದಿನ IPL T20 ಹಣಾಹಣಿಯಲ್ಲಿ ಧೋನಿ ಪಡೆಯನ್ನು ಭರ್ಜರಿಯಾಗಿ ಮಣಿಸಿದ ಸ್ಮಿತ್ ಬಾಯ್ಸ್ ಗೆಲುವಿನ ನಗೆ ಬೀರಿದ್ದಾರೆ.

Advertisement

ರಾಜಸ್ಥಾನ ರಾಯಲ್ಸ್ ನೀಡಿದ 217 ರನ್ ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ ಗಳಲ್ಲಿ 6 ವಿಕೆಟ್ ಗಳನ್ನು ಕಳೆದುಕೊಂಡು 200 ರನ್ ಗಳಷ್ಟನ್ನೇ ಕಲೆ ಹಾಕಲು ಶಕ್ತವಾಯಿತು. ಆ ಮೂಲಕ 16 ರನ್ ಗಳಿಂದ ರಾಯಲ್ಸ್ ಗೆ ಶರಣಾಯಿತು.

ಇದನ್ನೂ ಓದಿ: ಶಾರ್ಜಾ ಮೈದಾನದಲ್ಲಿ ಸ್ಯಾಮ್ಸನ್-ಸ್ಮಿತ್ ಸ್ಪೋಟಕ ಜೊತೆಯಾಟ ; ಚೆನ್ನೈಗೆ 217 ರನ್ ಟಾರ್ಗೆಟ್

ಭಾರೀ ಮೊತ್ತವನ್ನು ಬೆನ್ನಟ್ಟಲಾರಂಭಿಸಿದ ಚೆನ್ನೈಗೆ ಮುರಳಿ ವಿಜಯ್ (21) ಹಾಗೂ ಶೇನ್ ವಾಟ್ಸನ್ (33) ಉತ್ತಮ ಆರಂಭ ಒದಗಿಸಿದರು. ಪ್ರಥಮ ವಿಕೆಟ್ ಜೊತೆಯಾಟದಲ್ಲಿ 56 ರನ್ ಹರಿದುಬಂತು.

ಆದರೆ, 2 ರನ್ ಗಳ ಅಂತರದಲ್ಲಿ ವಿಜಯ್ ಮತ್ತು ವಾಟ್ಸನ್ ಔಟಾದರು. ಬಳಿಕ ಸ್ಯಾಮ್ ಕರನ್ (17) ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ.

Advertisement


ಈ ಹಂತದಲ್ಲಿ ಆಸೀಸ್ ಹಿರಿಯ ಆಟಗಾರ ಫಾ ಡುಪ್ಲೆಸಿಸ್ (72) ಧೋನಿ ಬಳಗದ ನೆರವಿಗೆ ನಿಂತರು. ಸ್ಯಾಮ್ಸನ್ ರೀತಿಯಲ್ಲೇ ಬ್ಯಾಟ್ ಬೀಸಿದ ಡುಪ್ಲೆಸಿಸ್ 19ನೇ ಓವರ್ ವರೆಗೂ ತಂಡದ ಗೆಲುವಿಗೆ ಹೋರಾಡಿದರು.

37 ಎಸೆತಗಳಲ್ಲಿ 72 ರನ್ ಗಳಿಸಿದ ಡುಪ್ಲೆಸಿಸ್ ಅವರ ಈ ಸ್ಪೋಟಕ ಇನ್ನಿಂಗ್ಸ್ ನಲ್ಲಿ 7 ಭರ್ಜರಿ ಸಿಕ್ಸರ್ ಗಳಿದ್ದವು ಮತ್ತು ಬಾರಿಸಿದ್ದು ಕೇವಲ ಒಂದು ಬೌಂಡರಿ.

ಚೆನ್ನೈ ಬ್ಯಾಟಿಂಗ್ ಸರದಿಯ ಕೊನೆಯಲ್ಲಿ ಕಪ್ತಾನ ಧೋನಿ (29) ಸಿಡಿದರಾದರೂ ಅಷ್ಟು ಹೊತ್ತಿಗಾಗಲೇ ಪಂದ್ಯ ಸೂಪರ್ ಕಿಂಗ್ಸ್ ಕೈಜಾರಿಯಾಗಿತ್ತು.

ರಾಜಸ್ಥಾನ ಪರ ರಾಹುಲ್ ತೆವಾಟಿಯ 3 ವಿಕೆಟ್ ಪಡೆದು ಮಿಂಚಿದರು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next