Advertisement
ಹೀಗೆ ಮಾಡಿರುವುದು ಪುಷ್ಕರ್ ಕ್ಷೇತ್ರದ ಶಾಸಕ ಸುರೇಶ್ ಸಿಂಗ್ ರಾವತ್. ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ವೇಳೆ, ಹಸು ಗಾಬರಿಗೊಂಡ ಅಲ್ಲಿಂದ ಓಡಿ ಹೋಗಿದೆ.
ಈ ವೇಳೆ ಮಾತನಾಡಿದ ಅವರು, “ರಾಜ್ಯದಲ್ಲಿ ಚರ್ಮಗಂಟು ರೋಗದಿಂದ ಹಸುಗಳು ಸಾವನ್ನಪ್ಪುತ್ತಿವೆ. ಆದರೆ ನಮ್ಮ ಸರ್ಕಾರ ಮಾತ್ರ ನಿದ್ರೆಯಲ್ಲಿದೆ. ಗೋ ಮಾತೆಯೂ ಸರ್ಕಾರದ ಬಗ್ಗೆ ಕೋಪಗೊಂಡಿದ್ದಾಳೆ. ಅದಕ್ಕೇ ಹಸು ಕೂಡ ನಿಲ್ಲದೆ, ಓಡಿ ಹೋಯಿತು’ ಎಂದು ಹೇಳಿದ್ದಾರೆ.