Advertisement

Times Influential List: ಟೈಮ್ಸ್‌ ಪ್ರಭಾವಿ ಪಟ್ಟಿಯಲ್ಲಿ ರಾಜಮೌಳಿ

08:57 PM Apr 14, 2023 | Team Udayavani |

ನವದೆಹಲಿ: ಆರ್‌ಆರ್‌ಆರ್‌, ಬಾಹುಬಲಿಯಂಥ ಸೂಪರ್‌ ಹಿಟ್‌ ಸಿನಿಮಾಗಳ ಮೂಲಕ ಜಗತ್ತನ್ನೇ ಭಾರತದತ್ತ ತಿರುಗಿನೋಡುವಂತೆ ಮಾಡಿದ ನಿರ್ದೇಶಕ ರಾಜಮೌಳಿ, ಇದೀಗ ಟೈಮ್ಸ್‌ ನಿಯತಕಾಲಿಕೆಯ 2023ರ ವಿಶ್ವದ 100 ಅತ್ಯಂತ ಪ್ರಭಾವಿ ವ್ಯಕ್ತಿಗಳ ಸಾಲಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

Advertisement

ಎಲಾನ್‌ ಮಸ್ಕ್, ಜೋ ಬೈಡನ್‌ರಂಥ ಖ್ಯಾತನಾಮರ ಜತೆಯಲ್ಲಿ ಭಾರತದ ಖ್ಯಾತ ನಿರ್ದೇಶಕ ರಾಜಮೌಳಿ ಹಾಗೂ ನಟ ಶಾರುಖ್‌ ಖಾನ್‌ಗೂ ಸ್ಥಾನ ದೊರೆತಿದೆ. ವಿಶೇಷವೆಂದರೆ, ರಾಜಮೌಳಿ ಅವರ ಪ್ರೊಫೈಲ್‌ನಲ್ಲಿ ಅವರನ್ನು ಕರ್ನಾಟಕದ ರಾಯಚೂರಿನ ಮೂಲದವರೆಂದು ಉಲ್ಲೇಖೀಸಿದ್ದು, ಈ ಮೂಲಕ ಕರ್ನಾಟಕದ ಗೌರವಕ್ಕೆ ಮತ್ತೂಂದು ಗರಿ ಮೂಡಿದಂತಾಗಿದೆ.

ಬಾಲಿವುಡ್‌ ನಟಿ ಆಲಿಯಾ ಭಟ್‌ ಅವರೇ ರಾಜಮೌಳಿ ಬಗ್ಗೆ ಪರಿಚಯ ಬರೆದಿದ್ದಾರೆ. “ಪ್ರೇಕ್ಷಕರ ನಾಡಿಮಿಡಿತ ಅರಿತು ಅದಕ್ಕೆ ತಕ್ಕಂತೆ ಸಿನಿಮಾ ಮಾಡುವ ಕಲೆ ರಾಜಮೌಳಿ ಅವರದ್ದು. ನೀನು ಮಾಡುವ ಕೆಲಸವನ್ನು ಪ್ರೀತಿಯಿಂದ ಮಾಡು. ಆ ಪ್ರೀತಿಯನ್ನು ಜನರಿಗೆ ಸಿನಿಮಾ ತಲುಪಿಸುತ್ತೆ. ಒಂದು ವೇಳೆ ಹಾಗಾಗದಿದ್ದರೂ, ಆ ಸಿನಿಮಾ ಪ್ರೀತಿಯನ್ನು ಜನರೇ ನಿನ್ನ ಕಂಗಳಲ್ಲಿ ಕಾಣುತ್ತಾರೆ ಎನ್ನುವ ನಿಯಮ ಅವರದ್ದು’ ಎಂದು ಆಲಿಯಾ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next