Advertisement

ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’ಬಿಡುಗಡೆ ಮತ್ತೆ ಮುಂದೂಡಿಕೆ?

08:27 PM Dec 27, 2021 | Team Udayavani |

ಮುಂಬೈ : ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ “ಆರ್‌ಆರ್‌ಆರ್‌’ಗೆ ಒಮಿಕ್ರಾನ್‌ ಕಾಟ ಆರಂಭವಾದಂತಿದೆ. ಜ.7ರಂದು ತೆರೆ ಕಾಣಬೇಕಿದ್ದ ಸಿನಿಮಾ ಈಗ ಮತ್ತೂಮ್ಮೆ ಬಿಡುಗಡೆ ದಿನಾಂಕ ಮುಂದುಹಾಕಲಿದೆ ಎನ್ನಲಾಗುತ್ತಿದೆ.

Advertisement

ಮಹಾರಾಷ್ಟ್ರದಲ್ಲಿ ಸೋಂಕು ನಿಯಂತ್ರಣ ಹಿನ್ನೆಲೆಯಲ್ಲಿ ಸಿನಿಮಾ ಮಂದಿರಗಳಲ್ಲಿ ಆಸನ ಸಾಮರ್ಥ್ಯ ಶೇ.50ಕ್ಕೆ ಇಳಿಸಿರುವುದರಿಂದ ಅಲ್ಲಿನ ಸಿನಿ ವಿತರಕರು ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಲು ಕೋರಿದ್ದಾರೆ. ಸಿನಿಮಾ ತಂಡ ಮುಂದೂಡಿಕೆ ಇಲ್ಲವೆಂದಿದೆ.

ಆದರೆ ಬಾಲಿವುಡ್‌ ತಾರೆಗಳೂ ಸಿನಿಮಾದಲ್ಲಿ ಇರುವುದರಿಂದಾಗಿ ಮುಂದೂಡಿಕೆ ಸಾಧ್ಯತೆ ಹೆಚ್ಚಿದೆ. ಆಲಿಯಾ ಭಟ್‌, ಜೂನಿಯರ್‌ ಎನ್‌ಟಿಆರ್‌ ಸೇರಿ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ.

ಇದನ್ನೂ ಓದಿ : ಕಾವೇರಿ ತಾಯಿ ಮುಂದೆ ನಿಂತು ನಾಟಕ: ಡಿಕೆಶಿ ವಿರುದ್ಧ ಹೆಚ್ ಡಿಕೆ ತೀವ್ರ ವಾಗ್ದಾಳಿ

Advertisement

Udayavani is now on Telegram. Click here to join our channel and stay updated with the latest news.

Next