Advertisement
ಪಾಲಿಕೆಯ ಅವ್ಯವಸ್ಥೆಯ ಕಾಮಗಾರಿಯೇ ಇದಕ್ಕೆ ಪ್ರಮುಖ ಕಾರಣವಾಗಿದ್ದು, ಕಾಂಕ್ರೀಟ್ ರಸ್ತೆಯ ಕೆಲಸವನ್ನು ಅರ್ಧಕ್ಕೆ ಬಿಟ್ಟ ಪರಿಣಾಮ ನೀರು ನುಗ್ಗಿದೆ ಎಂದು ಅಂಗಡಿ ಮಾಲಕರು ಆರೋಪಿಸಿದರೆ, ಸ್ಥಳೀಯ ಅಂಗಡಿಯವರು ಜಾಗ ಬಿಟ್ಟುಕೊಡದ ಪರಿಣಾಮ ಚರಂಡಿ ಮಾಡಲಾಗದೆ ಅಂಗಡಿಗಳಿಗೆ ನೀರು ನುಗ್ಗಿದೆ ಎಂದು ಪಾಲಿಕೆ ಹೇಳುತ್ತಿದೆ. ಪ್ರಸ್ತುತ ಅಂಗಡಿಯವರು ಮತ್ತೆ ಮಳೆನೀರು ನುಗ್ಗದಂತೆ ತಾತ್ಕಾಲಿಕ ವ್ಯವಸ್ಥೆಯೊಂದನ್ನು ಮಾಡಿದ್ದಾರೆ. ಆದರೆ ಜೋರಾಗಿ ಮಳೆ ಬಂದರೆ ಮತ್ತೆ ನೀರು ನುಗ್ಗದು ಎಂದು ಹೇಳುವಂತಿಲ್ಲ.
ಭವಂತಿಸೀrÅಟ್‌ನಲ್ಲಿ ಜಾಗದ ವಿವಾದ ಮುಗಿಯದೇ ಕಾಮಗಾರಿ ಆರಂಭಿಸಿದ ಹಿನ್ನೆಲೆಯಲ್ಲಿ ಪ್ರಸ್ತುತ ಕಾಂಕ್ರೀಟ್ ಕಾಮಗಾರಿಯನ್ನು ಅರ್ಧಕ್ಕೆ ಬಿಡಲಾಗಿದೆ. ಜತೆಗೆ ಹಿಂದೆ ಇದ್ದ ಡಾಮಾರು ರಸ್ತೆಗಿಂತ ಪ್ರಸ್ತುತ ಕಾಂಕ್ರೀಟ್ ರಸ್ತೆ ಎತ್ತರವಾಗಿದೆ. ಹೀಗಾಗಿ ಅಂಗಡಿ ಮುಂಗಟ್ಟುಗಳು ತಗ್ಗಿನಲ್ಲಿದ್ದು, ರಸ್ತೆಯ ನೀರು ಒಳನುಗ್ಗುತ್ತಿದೆ.
Related Articles
Advertisement
ಬಿಟ್ಟು ಕೊಡದೆ ಕೆಲಸ ಅಸಾಧ್ಯಸ್ಥಳೀಯ ಅಂಗಡಿಯವರು ಜಾಗ ಬಿಟ್ಟುಕೊಡದ ಪರಿಣಾಮ ನೀರು ನುಗ್ಗುತ್ತಿದೆ. ಪ್ರಸ್ತುತ ಈ ರಸ್ತೆಯಲ್ಲಿ ಚರಂಡಿ ಮಾಡಲು ಜಾಗವಿಲ್ಲ. ಜತೆಗೆ ಅಂಗಡಿಯವರೇ ಮಣ್ಣನ್ನು ತಂದು ರಾಶಿ ಹಾಕಿದ್ದರು. ಜಾಗ ಬಿಟ್ಟು ಕೊಡದೆ ನಾವು ಏನು ಮಾಡುವಂತಿಲ್ಲ. ಈಗಾಗಲೇ ಪಾಲಿಕೆಯ ವತಿಯಿಂದ ಜಾಗ ಬಿಟ್ಟುಕೊಡಲು ತಿಳಿಸಲಾಗಿದೆ.
– ಪೂರ್ಣಿಮಾ, ಸ್ಥಳೀಯ ಕಾರ್ಪೊರೇಟರ್ ನೀರು ಹೋಗಲು ವ್ಯವಸ್ಥೆ ಮಾಡಲಿ
ಜಾಗದ ವಿವಾದ ಇರುವಾಗಲೇ ಪಾಲಿಕೆಯವರು ಕಾಮಗಾರಿ ಆರಂಭಿಸಿದ ಪರಿಣಾಮ ಈ ರೀತಿ ಅಂಗಡಿಗಳಿಗೆ ನೀರು ನುಗ್ಗಿದೆ. ಪ್ರಸ್ತುತ ನಾವು ನೀರು ಬರದಂತೆ ನಾವು ತಾತ್ಕಾಲಿಕ ವ್ಯವಸ್ಥೆ ಮಾಡಿದ್ದೇವೆ. ಆದರೆ ಜೋರು ಮಳೆಬಂದರೆ ಮತ್ತೆ ನೀರು ನುಗ್ಗುವ ಸಾಧ್ಯತೆ ಇದೆ. ಹೀಗಾಗಿ ಅರ್ಧದಲ್ಲಿ ಬಿಟ್ಟಿರುವ ಕಾಮಗಾರಿಯನ್ನು ಪೂರ್ತಿಗೊಳಿಸಿ ನೀರು ಹೋಗಲು ವ್ಯವಸ್ಥೆ ಮಾಡಬೇಕಿದೆ.
– ಅನಿಲ್ ಶೇಟ್, ಮಾಲಕರು, ಅರುಣ್ ಜ್ಯುವೆಲ್ಲರ್