ಮೂರು ಜಿಲ್ಲೆಗಳಲ್ಲಿ ಕಳೆದ ಏಳು ದಿನಗಳಲ್ಲಿ ಸರಾಸರಿ 516 ಮಿ.ಮೀ. ಮಳೆ ಸುರಿದಿದೆ. ಇದು ಇಡೀ ರಾಜ್ಯದಲ್ಲಿ ಈವರೆಗಿನ ಮುಂಗಾರು ಹಂಗಾಮಿನಲ್ಲಿ (ಜೂನ್‌ನಿಂದ ಆಗಸ್ಟ್ 12ರವರೆಗೆ) ಸುರಿಯುವ
ವಾಡಿಕೆ ಮಳೆಗೆ ಸರಿಸಮ.
Advertisement
ಬೆಳಗಾವಿ, ಧಾರವಾಡ, ಹಾವೇರಿ ಸುತ್ತಲಿನ ಪ್ರದೇಶ ಹಾಗೂ ಮಲೆನಾಡಿನ ಕೊಡಗು, ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಸುತ್ತಲಿನ ಭಾಗಗಳಿಗೆ ಸರಾಸರಿ ವಾಡಿಕೆ ಲೆಕ್ಕಹಾಕಿದರೆ, ಪ್ರಸಕ್ತ ಮುಂಗಾರಿನಲ್ಲಿ ಇದುವರೆಗೆ 107 ಮಿ.ಮೀ. ಮಳೆ ಬೀಳಬೇಕಾಗಿತ್ತು.ಆದರೆ, ಐದುಪಟ್ಟು ಸುರಿದಿದೆ. ಇದೇ ಅವಧಿಯಲ್ಲಿ ಒಟ್ಟಾರೆ ರಾಜ್ಯದಲ್ಲಿ ಸುರಿಯಬೇಕಾದ ಮಳೆಗೆ (560 ಮಿ.ಮೀ.) ಹೆಚ್ಚು-ಕಡಿಮೆ ಸರಿಸಮವಾಗಿದೆ ಎಂದು ಹವಾಮಾನ ಇಲಾಖೆ ಅಂಕಿ-ಸಂಖ್ಯೆಗಳು
ಸ್ಪಷ್ಟಪಡಿಸುತ್ತವೆ.
ಶೇ. 70ರಷ್ಟು ಮಳೆ ಬಿದ್ದಿದೆ! ಇದರರ್ಥ 30 ಜಿಲ್ಲೆಗಳ ಭೌಗೋಳಿಕ ಪ್ರದೇಶದಲ್ಲಿ ಸುರಿಯುವ ವಾಡಿಕೆ ಮಳೆ ಕೇವಲ ಏಳು ಜಿಲ್ಲೆಗಳ
ಭೌಗೋಳಿಕ ವ್ಯಾಪ್ತಿಯಲ್ಲಿ ಬಿದ್ದಿದೆ. ರಾಜ್ಯದ ಮಳೆ ಜಿಲ್ಲೆಗೆ ಸೀಮಿತ: ರಾಜ್ಯಾದ್ಯಂತ ಹಂಚಿಕೆ ಆಗಬೇಕಾದ ಮಳೆ ಕೆಲವೇ ಪ್ರದೇಶಗಳಿಗೆ ಸೀಮಿತವಾಗಿದೆ. ಅದರ ಪ್ರಮಾಣ ರಾಜ್ಯದ ಪ್ರಸಕ್ತ ಮುಂಗಾರಿನ ವಾಡಿಕೆ ಮಳೆಗೆ ಹತ್ತಿರದಲ್ಲಿದ್ದರೂ ಅಚ್ಚರಿ ಇಲ್ಲ. ಇನ್ನು ಹೆಚ್ಚು ಮಳೆ ಬಿದ್ದ ಕಡೆಗಳಲ್ಲೆಲ್ಲಾ ಬೆಟ್ಟ ಗುಡ್ಡಗಳು ಇರುವುದನ್ನು
ಕಾಣಬಹುದು. ಅವು ಮಾರುತ ಗಳನ್ನು ತಡೆದು, ಅಧಿಕ ಮಳೆ ಸುರಿಸುತ್ತವೆ. ಇದರ ಜತೆಗೆ ಮಹಾರಾಷ್ಟ್ರದ ಜಲಾಶಯದಿಂದಲೂ ನೀರನ್ನು ಬಿಡುಗಡೆ ಮಾಡಲಾಯಿತು. ಇವೆರಡೂ ಕಾರಣದಿಂದ ಕರ್ನಾಟ
ಕವು ಮತ್ತೂಮ್ಮೆ ನೆರೆಗೆ ತುತ್ತಾಗಬೇಕಾಯಿತು ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ಪ್ರಭಾರ ನಿರ್ದೇಶಕ ಸಿ.ಎಸ್. ಪಾಟೀಲ “ಉದಯವಾಣಿ’ಗೆ ತಿಳಿಸಿದರು.
Related Articles
ಆ. 5ರಿಂದ 11ರವರೆಗೆ ಆಯ್ದ 7 ಜಿಲ್ಲೆಗಳಲ್ಲಿ ಸುರಿದ
ಮಳೆ ಪ್ರಮಾಣ ಹೀಗಿದೆ (ಮಿ.ಮೀ.ಗಳಲ್ಲಿ).
ಜಿಲ್ಲೆ ಮಳೆ
ಬೆಳಗಾವಿ 382.1
ಹಾವೇರಿ 313.3
ಧಾರವಾಡ 266
ಕೊಡಗು 893.8
ಚಿಕ್ಕಮಗಳೂರು 718
ಶಿವಮೊಗ್ಗ 729.4
ಹಾಸನ 312.4
Advertisement
ವಿಜಯಕುಮಾರ್ ಚಂದರಗಿ