Advertisement

ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿ: ಕೇವಲ 17.4 ಓವರ್ ಗೆ ಮುಗಿದ ಮೊದಲ ದಿನದ ಪಂದ್ಯ

03:28 PM Jul 09, 2020 | keerthan |

ಸೌಥಂಪ್ಟನ್: ಕೋವಿಡ್-19 ಸೋಂಕು ಕಾರಣದಿಂದ ಸ್ಥಬ್ಧವಾಗಿದ್ದ ಕ್ರಿಕೆಟ್ ಎಚ್ಚೆತ್ತಿದೆ. ಆದರೆ ವಿಶ್ವ ಕ್ರಿಕೆಟ್ ಕಾತರದಿಂದ ಕಾಯುತ್ತಿದ್ದ ಟೆಸ್ಟ್ ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸಿದ್ದಾನೆ. ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದ ಆಟ ಕೇವಲ 17.4 ಓವರ್ ಗೆ ಸೀಮಿತವಾಯಿತು.

Advertisement

ಸೌಥಂಪ್ಟನ್ ನ ಏಜಸ್ ಬೌಲ್ ಕ್ರೀಡಾಂಗಣದಲ್ಲಿ ಟೆಸ್ಟ್ ಪಂದ್ಯ ಆರಂಭಕ್ಕೂ ಮೊದಲೇ ಮಳೆ ಆರಂಭವಾಗಿತ್ತು. ಸ್ವಲ್ಪ ತಡವಾಗಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ನಡೆಸುವ ತೀರ್ಮಾನಿಸಿತು. ಪರ್ಯಾಯ ನಾಯಕ ಬೆನ್ ಸ್ಟೋಕ್ಸ್ ರ ಬ್ಯಾಟಿಂಗ್ ಮಾಡುವ ತೀರ್ಮಾನಕ್ಕೆ ಮೊದಲ ಶಾಕ್ ನೀಡಿದ್ದು ವಿಂಡೀಸ್ ಬೌಲರ್ ಶೆನಾನ್ ಗ್ಯಾಬ್ರಿಯಲ್. ಪಂದ್ಯದ ಎರಡನೇ ಓವರ್ ನಲ್ಲೇ ಡೊಮಿನಿಕ್ ಸಿಬ್ಲೆ ಅವರನ್ನು ಬೌಲ್ಡ್ ಮಾಡಿದರು.

ಆದರೆ 17.4 ಓವರ್ ಮುಗಿಯುತ್ತಿದ್ದಂತೆ ಮತ್ತೆ ಬಂದ ಮಳೆಯಿಂದ ಪಂದ್ಯಕ್ಕೆ ತಡೆಯಾಯಿತು. ರೋರಿ ಬರ್ನ್ಸ್ 20 ರನ್, ಜೋ ಡೆನ್ಲಿ 14 ರನ್ ಗಳಿಸಿ ಆಡುತ್ತಿದ್ದಾರೆ. ಇಂಗ್ಲೆಂಡ್ ಒಂದು ವಿಕೆಟ್ ನಷ್ಟಕ್ಕೆ 35 ರನ್ ಗಳಿಸಿದೆ.

ಖಾಲಿ ಕ್ರೀಡಾಂಗಣದಲ್ಲಿ ಪಂದ್ಯ: ಕೋವಿಡ್-19 ಭೀತಿಯ ನಡುವೆಯೆ ನಡೆಯುತ್ತಿರುವ ಪಂದ್ಯ ಇದಾದ ಕಾರಣ ಪ್ರೇಕ್ಷಕರಿಗೆ ಕ್ರಿಡಾಂಗಣಕ್ಕೆ ಅನುಮತಿ ಇರಲಿಲ್ಲ. ಆದರೆ ಟಿವಿಯಲ್ಲಿ ನೋಡುವ ಪ್ರೇಕ್ಷಕರಿಗೆ ಪ್ರೇಕ್ಷಕರ ಕರಾಡತನದ ಕೃತಕ ಶಬ್ಧ ಅಳವಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next