Advertisement
ಉಜಿರೆ, ಬೆಳ್ತಂಗಡಿ, ಧರ್ಮಸ್ಥಳ, ಸುಳ್ಯ, ಸುಬ್ರಹ್ಮಣ್ಯ, ಪುತ್ತೂರು, ಕಡಬ, ಮಡಂತ್ಯಾರು, ಉಳ್ಳಾಲ ಸಹಿತ ಜಿಲ್ಲೆಯ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಮಂಗಳೂರಿನಲ್ಲಿ ಶನಿವಾರ ತಡರಾತ್ರಿ ಗುಡುಗು ಸಹಿತ ಧಾರಾಕಾರ ಮಳೆಯಾಗಿತ್ತು.
ಬೆಳ್ತಂಗಡಿ: ಬೆಳ್ತಂಗಡಿಯ ವಿವಿಧ ಕಡೆ ಸಂಜೆ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗಿದೆ. ಸಂಜೆ ಧರ್ಮಸ್ಥಳ, ಮುಂಡಾಜೆ, ಚಾರ್ಮಾಡಿ, ಉಜಿರೆ, ಬೆಳ್ತಂಗಡಿ, ನಾರಾವಿ, ಮಡಂತ್ಯಾರು, ಗೇರುಕಟ್ಟೆ ಸಹಿತ ಇತರೆಡೆ ಭಾರಿ ಮಳೆಯಾಗಿದೆ. ಗೇರುಕಟ್ಟೆ ಕೊರಂಜ ಶಾಲಾ ಬಳಿ ಕಾಂಪ್ಲೆಕ್ಸ್ ನಿರ್ಮಾಣವಾಗುತ್ತಿದ್ದು, ಇಲ್ಲಿ ಚರಂಡಿ ಮುಚ್ಚಿದ ಪರಿಣಾಮ ರಸ್ತೆಯಲ್ಲೇ ನೀರು ನಿಂತಿತ್ತು. ವಾಹನ ಸಂಚಾರಕ್ಕೆ ಕಷ್ಟವಾಯಿತು. ರಾ. ಹೆ. ಕಾಮಗಾರಿ ನಡೆಯುತ್ತಿದ್ದು, ರಸ್ತೆ ಕೆಸರುಮಯವಾಗಿದೆ.
Related Articles
ಬಂಟ್ವಾಳ: ಬುಡೋಳಿ ಜಂಕ್ಷನ್ ಸಮೀಪ ಸಿದ್ದೀಕ್ ಅವರ ಮನೆಯ ಅಂಗಳದಲ್ಲಿದ್ದ ತೆಂಗಿನಮರಕ್ಕೆ ಬಡಿದು ಹೊತ್ತಿ ಉರಿದ ಘಟನೆ ರವಿವಾರ ಸಂಜೆ ನಡೆದಿದೆ.
Advertisement
ಉಡುಪಿ: ಗುಡುಗು ಸಹಿತ ಮಳೆಉಡುಪಿ: ಉಡುಪಿಯಲ್ಲಿ ರವಿವಾರ ಸಂಜೆ ಹಲವೆಡೆ ಗುಡುಗು ಸಹಿತ ಸಾಧಾರಣ ಮಳೆ ಸುರಿದಿದೆ. ಸಂಜೆ ಏಳು ಗಂಟೆಯ ಅನಂತರ ಕೆಲಹೊತ್ತು ಮಳೆ ಸುರಿದಿದೆ. ಉಡುಪಿ, ಮಣಿಪಾಲ, ಮಲ್ಪೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲಕಾಲ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಯಿತು. ಪಡುಬಿದ್ರಿ, ಶಿರ್ವ, ಕಾಪು, ಕಟಪಾಡಿ, ಬ್ರಹ್ಮಾವರ, ಕುಂದಾಪುರ, ಹೆಬ್ರಿ, ಕಾರ್ಕಳದ ವಿವಿಧೆಡೆ ಗುಡುಗು ಸಹಿತ ಸಾಧಾರಣ ಮಳೆ ಸುರಿಯಿತು. ರಸ್ತೆಗೆ ಉರುಳಿದ ತೆಂಗಿನ ಮರ
ಉದ್ಯಾವರ ಗುರುಕೃಪಾ ಬಿಲ್ಡಿಂಗ್ ಎದುರು ಎಸ್‌ಬಿಐ ಬ್ಯಾಂಕ್ ಬಳಿ ತೆಂಗಿನ ಮರ ರಸ್ತೆಗೆ ಉರುಳಿ ಬಿದ್ದಿದೆ. ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿದ್ದು, ವಾಹನಗಳ ಸುಗಮ ಸಂಚಾರಕ್ಕೆ ತೊಡಕಾಗಿತ್ತು. ಅಲೆವೂರು ಜೋಡುರಸ್ತೆಗೆ ಮರಬಿದ್ದು, ವಿದ್ಯುತ್ ತಂತಿಗಳಿಗೆ ಹಾನಿ ಉಂಟಾಗಿದೆ.