Advertisement

ಮೈಸೂರು-ಬೆಂಗಳೂರು ರೈಲ್ವೆ ಡಬ್ಲಿಂಗ್‌ ಕಾಮಗಾರಿ ಮುಂದಿನ ವರ್ಷ ಮುಕ್ತಾಯ

03:45 AM Feb 17, 2017 | Team Udayavani |

ಉದಯವಾಣಿ ದೆಹಲಿ ಪ್ರತಿನಿಧಿ: ರಾಜ್ಯದಲ್ಲಿ ಪ್ರಸ್ತುತ 59,970.72 ಕೋಟಿ ರೂ.ವೆಚ್ಚದ ರೈಲ್ವೆ ಯೋಜನೆಗಳು ಪ್ರಗತಿ
ಯಲ್ಲಿದ್ದು, 2017-18ರ ಸಾಲಿನ ಬಜೆಟ್‌ನಲ್ಲಿ ರಾಜ್ಯದ ರೈಲ್ವೆ ಯೋಜನೆಗಳಿಗಾಗಿ 3,174 ಕೋಟಿ ರೂ.ಗಳನ್ನು ನೀಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ದೆಹಲಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ರೈಲ್ವೆಯ ಹಿರಿಯ ಅಧಿಕಾರಿಗಳಾದ ರಾಜೇಶ್‌ ಅಗರ್ವಾಲ್‌, ಪಿ.ಪಿ.ಆವಸ್ಥಿ, ಮೋಹಿತ್‌ ಲೀಲಾ, ವೇದ ಪ್ರಕಾಶ್‌, ಅನಿಲ್‌ ಸಕ್ಸೆನಾ ಈ ಕುರಿತು ಮಾಹಿತಿ ನೀಡಿದರು.

Advertisement

ರಾಜ್ಯದಲ್ಲಿನ ರೈಲ್ವೆ ಯೋಜನೆಗಳ ಕಾಮಗಾರಿಗಳನ್ನು 3-4 ವರ್ಷದೊಳಗೆ ಮುಕ್ತಾಯಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಗರಿಷ್ಠ 6 ವರ್ಷದೊಳಗೆ ಯೋಜನೆ ಮುಗಿಯಲೇಬೇಕೆಂಬ ನಿರ್ಧಾರಕ್ಕೆ ಬರಲಾಗಿದೆ. ಮೈಸೂರು-ಬೆಂಗಳೂರು ಡಬ್ಲಿಂಗ್‌ ಕಾಮಗಾರಿ 2017-18ರೊಳಗೆ ಮುಕ್ತಾಯಗೊಳ್ಳಲಿದೆ ಎಂದರು. ಖಾಸಗಿ ಸಹಭಾಗಿತ್ವದಲ್ಲಿ ರೈಲ್ವೆ ಯೋಜನೆಗಳನ್ನು ಜಾರಿಗೊಳಿ ಸುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಕರ್ನಾಟಕ 2000ರಲ್ಲಿಯೇ ಕೆ-ರೈಡ್‌ (ಕರ್ನಾಟಕ ರೈಲ್ವೆ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ) ಮೂಲಕ ಜಂಟಿ ಯೋಜನೆಗಳನ್ನು ಪ್ರಾರಂಭಿಸಿತ್ತು. ಯೋಜನೆಗಳ ವೆಚ್ಚದಲ್ಲಿ ಶೇ.26 ರಾಜ್ಯ ಮತ್ತು ಶೇ.26 ರಷ್ಟನ್ನು ಐಡಿಎಫ್ಸಿ ಭರಿಸಿದರೆ, ಶೇ.48ರಷ್ಟನ್ನು ರೈಲ್ವೆ ಇಲಾಖೆ
ಭರಿಸುತ್ತಿತ್ತು. ಆದರೆ, ಈಗ ಕೆ-ರೈಡ್‌ನ‌ಲ್ಲಿ ಶೇ.51 ಅಥವಾ ಅದಕ್ಕಿಂತಲೂ ಹೆಚ್ಚಿನ ಹಣವನ್ನು ಭರಿಸಲು ರಾಜ್ಯ ಮುಂದೆ ಬಂದಿದೆ.

ಇದಕ್ಕಾಗಿ ಕೆ-ರೈಡ್‌ನ‌ ಸಾಂಸ್ಥಿಕತೆ ಮತ್ತು ಷೇರು ಹಿಡಿತದಲ್ಲಿ ಸ್ವಲ್ಪ ಬದಲಾವಣೆ ಆಗಬೇಕಿದ್ದು, ಪ್ರಕ್ರಿಯೆ ಜಾರಿಯಲ್ಲಿದೆ. ಶೇ.50 ಕ್ಕಿಂತ ಹೆಚ್ಚಿನ ಪಾಲನ್ನು ರಾಜ್ಯ ಹೊಂದಿದ್ದೆ ಆದರೆ ಆಯಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಕಂಪನಿ ಕಾರ್ಯನಿರ್ವಹಿಸಲಿದೆ. ಇದರಿಂದ ರಾಜ್ಯದ ರೈಲ್ವೆ ಬೇಡಿಕೆಗಳಿಗೆ ಬಜೆಟ್‌ನಲ್ಲಿ ಹೆಚ್ಚಿನ ಮನ್ನಣೆ ಸಿಗಲಿದೆ ಎಂದು ತಿಳಿಸಿದರು. ರೈಲ್ವೆಯಲ್ಲಿ ಶುಚಿತ್ವ, ಸುರಕ್ಷತೆ ಸೇರಿ ಯಾವುದೇ ಕುಂದು ಕೊರತೆಗಳಿದ್ದರೆ ರೈಲ್ವೆ ಇಲಾಖೆಗೆ ಟ್ವಿಟ್ಟರ್‌, ಎಸ್‌ಎಂಎಸ್‌, ಮೂಲಕ ದೂರು ನೀಡಬಹುದು. ತಕ್ಷಣವೇ ಇಲಾಖೆ ಸ್ಪಂದಿಸಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next