Advertisement
ರಸ್ತೆ ದುರಸ್ತಿ ನಿರ್ವಹಣೆ ಕಾಮಗಾರಿಯಲ್ಲಿ ರಸ್ತೆ ಬದಿಯ ಮುಳ್ಳು ಕಂಟಿ ಕಿತ್ತು ವಾಹನ ಸಂಚಾರ ಸವಾರರಿಗೆ ಅನುಕೂಲ ಮಾಡಲು ಲೋಕೋಪಯೋಗಿ ಇಲಾಖೆಯಿಂದ ಪ್ರತೀ ವರ್ಷವೂ ಜಿಲ್ಲಾ ವ್ಯಾಪ್ತಿಯ ಒಳ ರಸ್ತೆಗಳ ನಿರ್ವಹಣೆ ದುರಸ್ತಿ ಕಾರ್ಯ ನಡೆಯುತ್ತದೆ, ಈ ವರ್ಷವೂ ಕಲಾದಗಿ ಉದಗಟ್ಟಿ ರಸ್ತೆ ನಿರ್ವಹಣೆ ಕಾಮಗಾರಿ ಮಾಡುವ ವೇಳೆ ಜೆಸಿಬಿ ಚಾಲಕ ಮಿಡ್ಚಿ ಹಳ್ಳ ಬಳಿ ಬಹುಗ್ರಾಮ ಕುಡಿಯುವ ನೀರಿನ ಪೈಪಲೈನ್ ಒಡೆದು ಸಾಕಷ್ಟು ಪ್ರಮಾಣದ ನೀರು ಪೋಲಾಗುವಂತೆ ಮಾಡಿದ್ದಲ್ಲದೆ, ಸಂಬಂಧಿಸಿದ ಇಲಾಖೆಗೆ, ಸ್ಥಳೀಯ ಗ್ರಾಮಸ್ಥರಿಗೂ ತಿಳಸದೆ ಹಾಗೇ ತೆರಳಿದ್ದಾನೆ ಎಂದು ಗ್ರಾಮಸ್ಥರು ದೂರಿದ್ದು, ರಸ್ತೆಯಲ್ಲಿ ಸಂಚಾರಿಸುತ್ತಿದ್ದ ಶಾರದಾಳ ಗ್ರಾಮಸ್ಥರು ವೀಕ್ಷಣೆ ಮಾಡಿ ನೀರು ಸರಬರಾಜು ವಾಲ್ ತಿರುವಿ ನೀರು ಹರಿಯದಂತೆ ನಿಲ್ಲಿಸಿದ್ದಾರೆ, ನಿರ್ಲಕ್ಷ ತೋರಿದ ಚಾಲಕ ವಿರುದ್ದ ಹಾಗೂ ರಸ್ತೆ ದುರಸ್ತಿ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರ ವಿರುದ್ದ ಸೂಕ್ತಕ್ರಮ ಕೈಗೊಳ್ಳಬೇಕು ಜೊತೆಗೆ ಒಡೆದು ಹೋದ ಪೈಪ್ ಲೈನ್ ಜೋಡಣೆ ಮಾಡಿಸಿಕೊಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಶಾರದಾಳ ಗ್ರಾಮದ ಲಕ್ಷ್ಮಣ ಶಿರಬೂರ ಆಗ್ರಹಿಸಿದ್ದಾರೆ.
ಲಕ್ಷ್ಮಣ ಶಿರಬೂರ, ಶಾರದಾಳ ಗ್ರಾಮಸ್ಥ ಪೈಪ್ ಲೈನ್ ಒಡೆದದ್ದು ನಮ್ಮ ಗಮನಕ್ಕೆ ಬಂದಿಲ್ಲ ಹಾಗೇನಾದರೂ ಒಡೆದಿದ್ದರೆ ಯಾರು ಒಡೆದಿದ್ದಾರೆ ಅವರಿಂದಲೇ ಅದನ್ನು ಸರಿಮಾಡಿಕೊಡಲು ಆದೇಶಿಸಲಾಗುವುದು ಒಂದು ವೇಳೆ ಮಾಡದೇ ನಿರ್ಲಕ್ಷ್ಯ ವಹಿಸಿದರೆ ಇಲಾಖೆಯಿಂದ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು.
ಆಕಾಶ್ ವಂದೆ, ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬಾಗಲಕೋಟೆ
Related Articles
ಅರ್ಜುನ್ ಹಿರೇಮಠ, ಗುತ್ತಿಗೆದಾರರ ಪರವಾಗಿ ಕೆಲಸಗಾರ
Advertisement