Advertisement

Grant Fight: ರಾಜ್ಯ ಸರಕಾರದ ಅನುದಾನದಿಂದಲೇ ಕ್ಷೇತ್ರದ ಅಭಿವೃದ್ಧಿ ಕಾರ್ಯ: ಭೀಮಾನಾಯ್ಕ್‌

09:35 PM Oct 07, 2024 | Team Udayavani |

ಹಗರಿಬೊಮ್ಮನಹಳ್ಳಿ: ಕ್ಷೇತ್ರದಲ್ಲಿ ಹತ್ತಾರು ಅಭಿವೃದ್ಧಿ ಕೆಲಸಗಳು ನಡೆಯುತ್ತಿದೆ ಇಲ್ಲಿನ ಶಾಸಕರು ಅದರಲ್ಲಿ ಭಾಗಿಯಾಗಿ ರಾಜ್ಯ ಸರ್ಕಾರದಿಂದ ಶೂನ್ಯ ಅನುದಾನ ಅಂತಾರೆ, ಇವೆಲ್ಲ ಕೇಂದ್ರ ಅಥವಾ ಜೆಡಿಎಸ್ ಪಕ್ಷವೇನಾದರೂ ನೀಡಿವೆಯಾ? ಎಚ್ ಕೆ ಆರ್ ಡಿಬಿಯಲ್ಲಿ 30 ಕೋಟಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಹೆಬಿಟೈಟ್ ಕಂಪನಿಗೆ ಗುತ್ತಿಗೆ ನೀಡಿದ್ದು ಅದರಲ್ಲಿ 40% ಕಮಿಷನ್ ಕೇಳಿದ್ದರಲ್ಲದೇ, ತಮ್ಮ ಮನೆಯ ಮುಂದಿನ ತೇರು ಬೀದಿ ರಸ್ತೆಗೆ 5 ಕೋಟಿಯ ಕಾಮಗಾರಿಗೆ 60% ಕಮಿಷನ್ ಕೇಳಿದ್ದಾರೆ ಎಂದು ಕೆಎಂಎಫ್ ಅಧ್ಯಕ್ಷ  ಭೀಮಾನಾಯ್ಕ್‌ ಆರೋಪಿಸಿದರು.

Advertisement

ಪಟ್ಟಣದ ಪುರಸಭೆಯಲ್ಲಿ ಸೋಮವಾರ ನೂತನ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿ ಕ್ಷೇತ್ರದಲ್ಲಿ ಯಾವ ಸಮುದಾಯವನ್ನೂ ಕಡೆಗಣಿಸದೆ ಎಲ್ಲಾ ಸಮುದಾಯಗಳಿಗೂ ಅನುದಾನ ನೀಡಿದ್ದೇನೆ. ಅದೇ ರೀತಿ ನಾನು ಶಾಸಕನಾಗಿದ್ದಾಗ ನೀಡಿದ ಭವನಗಳ ಕಾಮಗಾರಿ ಮೊಟಕು ಆಗದಂತೆ ಅಗತ್ಯವಿರುವ ಅನುದಾನ ಸಂಬಂಧಪಟ್ಟ ಸಚಿವರ ಬಳಿ ಮನವಿ ನೀಡಿ ಕಾಮಗಾರಿಗಳ ಪೂರ್ತಿ ಮಾಡಿಸುತ್ತಿದ್ದು, ಇಲ್ಲಿನ ಶಾಸಕರ ರೀತಿ ಕೇವಲ ವೇದಿಕೆಗಳಲ್ಲಿ ಶೋಕಿ ಮಾತುಗಳನ್ನು ಆಡುತ್ತಿಲ್ಲ. ಪುರಸಭೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಯಾವುದೇ ರೀತಿಯ ರಾಜಕಾರಣ ಮಾಡದೆ ಪಕ್ಷತೀತವಾಗಿ ನಗರದ 23 ವಾರ್ಡ್‌ಗಳನ್ನು ಗಣನೆಗೆ ತೆಗೆದುಕೊಂಡು ಅಭಿವೃದ್ಧಿ ಮಾಡಲಿ ಎಂದರು.

ನೂತನ ಅಧ್ಯಕ್ಷ ಎಂ ಮರಿ ರಾಮಪ್ಪ ಮಾತನಾಡಿ, ಪುರಸಭೆ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಯದೆ 29 ತಿಂಗಳು ಕಳೆದಿವೆ. ನಮ್ಮ ಭೀಮಾ ನಾಯ್ಕ  ಮಾರ್ಗದರ್ಶನದಲ್ಲಿ ಎಲ್ಲ ವಾರ್ಡ್‌ಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಅಂಬಿಕಾ ದೇವಿಂದ್ರಪ್ಪ, ಸದಸ್ಯರಾದ ಪವಾಡಿ ಹನುಮಂತಪ್ಪ, ಅಜಿಜುಲ್ಲ ರಾಜೇಶ್ ಬೆಡಗಿ, ವೀರೇಶ್ ನೆಲ್ ಇಸ್ಮಾಯಿಲ್ ಸಾಬ್ ಸೇರಿ ಸದಸ್ಯರು, ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ಸಾಹೀರಾಬಾನು, ಕುರಿ ಶಿವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋರಿ ಗೋಣಿಬಸಪ್ಪ, ಅಕ್ಕಿ ತೊಟೇಶ್, ಪ್ರಭು, ನಾಮ ನಿರ್ದೇಶಕ ಸದಸ್ಯರಾದ ಮಂಜುನಾಥ್ ತ್ಯಾವಾಣಿಗಿ ಕೊಟ್ರೇಶ್ ಸೇರಿ ಕಾಂಗ್ರೆಸ್ ಮುಖಂಡರಿದ್ದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು

Advertisement

Udayavani is now on Telegram. Click here to join our channel and stay updated with the latest news.

Next