ರಾಯಚೂರು: ಇಷ್ಟು ದಿನ ಆಮೆ ವೇಗದಲ್ಲೇ ಸಾಗಿದ್ದ ರಾಯಚೂರು ಪ್ರತ್ಯೇಕ ವಿಶ್ವವಿದ್ಯಾಲಯ ಪೂರ್ಣ ಪ್ರಮಾಣದಲ್ಲಿ ಸಕ್ರಿಯವಾಗಲು ಆರ್ಥಿಕ ಅಡಚಣೆಗಳು ಎದುರಾಗಿವೆ. ಈಚೆಗೆ ನೇಮಕಗೊಂಡಿರುವ ಕುಲಪತಿಗಳು ವಿವಿ ಬಲವರ್ಧನೆಗಾಗಿ ಸರ್ಕಾರಕ್ಕೆ 600 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರದ ಸ್ಪಂದನೆ ಬೇಕಿದೆ.
ಸರ್ಕಾರ ಪ್ರತಿ ವರ್ಷ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ದೊಡ್ಡ ಮೊತ್ತದ ಹಣ ಬಿಡುಗಡೆ ಮಾಡುತ್ತದೆ. ಆದರೆ, ರಾಯಚೂರು ಪ್ರತ್ಯೇಕ ವಿವಿ ಘೋಷಣೆಯಾಗಿ ವರ್ಷಗಳೇ ಕಳೆದರೂ ಇಂದಿಗೂ ಅನುದಾನ ಬಿಡುಗಡೆ ಮಾಡದ ಕಾರಣ ಮೂಲ ಸೌಲಭ್ಯಗಳ ಕೊರತೆ ಎದುರಿಸುತ್ತಿದೆ. ಕಳೆದ ಎರಡು ತಿಂಗಳ ಹಿಂದೆ ಉಪಕುಲಪತಿಯನ್ನು ನೇಮಿಸಿದ್ದು, ಆಡಳಿತಾತ್ಮಕ ಚಟುವಟಿಕೆಗಳಿಗೆ ತುಸು ಜೀವಕಳೆ ಬಂದಿದೆ. ವ್ಯವಹಾರಗಳ ನಿರ್ವಹಣೆ ಜತೆಗೆ ವಿವಿ ಬಲವರ್ಧನೆಗೆ ಬೇಕಾದ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಲಾಗಿದೆ.
ಮೂರು ಪ್ರತ್ಯೇಕ ಪ್ರಸ್ತಾವನೆ: ಗುಲ್ಬರ್ಗ ವಿಶ್ವವಿದ್ಯಾಲಯದೊಂದಿಗೆ ಈಗ ಸಂಯೋಜಿತ ಕಾಲೇಜುಗಳನ್ನು ಪ್ರತ್ಯೇಕಿಸಿ ರಾಯಚೂರು ವಿವಿ ಅ ಧೀನಕ್ಕೆ ನೀಡಲಾಗಿದೆ. ಸುಮಾರು 224 ಕಾಲೇಜುಗಳು, 19 ಸ್ನಾತಕೋತ್ತರ ಕೇಂದ್ರಗಳು ಒಳಗೊಂಡಿವೆ. ಅದರ ಜತೆಗೆ ಹಣಕಾಸು ವ್ಯವಹಾರ ಕೂಡ ಇತ್ಯರ್ಥಗೊಂಡಿದೆ. ಗುಲ್ಬರ್ಗ ವಿವಿ ಸಿಂಡಿಕೇಟ್ ಮಂಡಳಿ ಕೂಡ ಪೂರಕವಾಗಿ ಕೆಲಸ ಮಾಡಿದ್ದು, ಆಡಳಿತಾತ್ಮಕ ಪ್ರಕ್ರಿಯೆಗಳು ವಿಳಂಬವಾಗುತ್ತಿಲ್ಲ. ಈಗ ಮುಖ್ಯವಾಗಿ ಬೇಕಿರುವುದು ಅನುದಾನ ಮಾತ್ರ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯದಿಂದ ಮೂರು ಪ್ರತ್ಯೇಕ ಪ್ರಸ್ತಾವನೆಗಳು ಸಲ್ಲಿಸಲಾಗಿದೆ.ಪೂರ್ಣ ಪ್ರಮಾಣದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕ, ಅಗತ್ಯ ಕಟ್ಟಡಗಳು, ಆಡಳಿತ ಭವನ, ಕ್ಯಾಂಟೀನ್, ಸಿಬ್ಬಂದಿ ವಸತಿ ಸಮುತ್ಛಯ, ವಸತಿ ನಿಲಯ, ಕುಡಿವ ನೀರು ಸೇರಿದಂತೆ ಮೂಲ ಸೌಲಭ್ಯಗಳ ಕುರಿತು ಬೇಡಿಕೆಸಲ್ಲಿಸಲಾಗಿದೆ. ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಕೈಗೊಳ್ಳಬಹುದಾದ ಯೋಜನೆಗಳು ಹಾಗೂ ಗುತ್ತಿಗೆ ನೌಕರರ ನೇಮಕ ಸಂಬಂಧಿ ಸಿದ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಕೆಯಾಗಿವೆ. ಒಟ್ಟಾರೆ 600 ಕೋಟಿಗೂ ಅ ಧಿಕ ಮೊತ್ತದ ಅಂದಾಜು ಪಟ್ಟಿ ಒಳಗೊಂಡ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಸರ್ಕಾರ ಏಕಕಾಲಕ್ಕೆ ಅಷ್ಟು ಅನುದಾನ ನೀಡುವ ಸಾಧ್ಯತೆಗಳು ಕಡಿಮೆಯಿದ್ದು, ಹಂತ-ಹಂತವಾಗಿ ನೀಡುವ ಸಾಧ್ಯತೆಗಳು ಹೆಚ್ಚಾಗಿದೆ. ಮೊದಲ ಹಂತದಲ್ಲಿ ಕನಿಷ್ಟ 150 ಕೋಟಿ ನೀಡಿದರೆ ಅನುಕೂಲವಾಗಲಿದೆ ಎಂಬುದು ಕುಲಪತಿಗಳ ಅನಿಸಿಕೆ.
ಇದನ್ನೂ ಓದಿ:ಶೇ.50ರಷ್ಟು ಅತಿಥಿ ಉಪನ್ಯಾಸಕರಿಗೆ ಕೋಕ್
ಬಜೆಟ್‌ನತ್ತ ಚಿತ್ತ: ವಿವಿಗೆ ಬೇಕಾದ ವಿಶೇಷ ಅನುದಾನದ ಕುರಿತು ಈಗಾಗಲೇ ಕುಲಪತಿಗಳು ಜಿಲ್ಲೆಯ ಕೆಲ ಜನಪ್ರತಿನಿ ಧಿಗಳೊಟ್ಟಿಗೆ ಚರ್ಚಿಸಿದ್ದು, ಪೂರಕ ಸ್ಪಂದನೆ ಸಿಕ್ಕಿದೆ. ಸರ್ಕಾರದ ಮಟ್ಟದಲ್ಲೂ ರಾಯಚೂರು ವಿವಿ ಅನುಷ್ಠಾನ ಸಂಬಂ ಧಿತ ಅ ಧಿಕಾರಿಗಳ ಮಟ್ಟದ ಸಭೆಯಲ್ಲಿ ಚರ್ಚೆ ಕೂಡ ಆಗಿದೆ. ಹೀಗಾಗಿ ಸರ್ಕಾರ ಈ ಬಜೆಟ್‌ನಲ್ಲಿ ಎಷ್ಟು ಅನುದಾನ ನೀಡಬಹುದು ಎಂಬ ನಿರೀಕ್ಷೆ ಗರಿಗೆದರಿದೆ. ರಾಯಚೂರು ವಿವಿ ಘೋಷಣೆಯಾಗಿದ್ದು, ಬಿಟ್ಟರೆ\ ಈವರೆಗೂ ಯಾವುದೇ ವಿಶೇಷ ಅನುದಾನ ಕಂಡಿಲ್ಲ. ಬಿಜೆಪಿ ನೇತೃತ್ವದ ಸರ್ಕಾರ ಜಿಲ್ಲೆಗೆ ನೀಡುವ ಕೊಡುಗೆಗಳಲ್ಲಿ ಪ್ರತ್ಯೇಕ ವಿವಿಗೆ ವಿಶೇಷ ಅನುದಾನ ಕೂಡ ಇರಲಿದೆಯೇ ಎಂಬ ನಿರೀಕ್ಷೆಗಳಿವೆ. ನಾನು ಅಧಿಕಾರ ವಹಿಸಿಕೊಂಡು ಎರಡೂವರೆ ತಿಂಗಳಾಗಿದೆ.
ಬಂದ ಕೂಡಲೇ ವಿವಿ ಪೂರ್ಣ ಪ್ರಮಾಣದಲ್ಲಿ ಸಕ್ರಿಯವಾಗಲು ಬೇಕಿರುವ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಏನೆಲ್ಲ ಬೇಕು ಎಂಬ ವಿಸ್ತೃತ ವರದಿಯನ್ನು ಸರ್ಕಾರ ಕೇಳಿದ್ದು, ಮೂರು ಪ್ರಸ್ತಾವನೆಗಳಲ್ಲಿ ನೀಡಲಾಗಿದೆ. ಮೂಲ ಸೌಲಭ್ಯ, ಸಿಬ್ಬಂದಿ ಸೇರಿದಂತೆ ಎಲ್ಲ ಆಡಳಿತಾತ್ಮಕ ಚಟುವಟಿಕೆಗೆ ಆರಂಭಗೊಳ್ಳಬೇಕಾದರೆ ಕನಿಷ್ಟ 600 ಕೋಟಿಗೂ ಅಧಿ ಕ ಹಣ ಬೇಕಾಗಲಿದೆ. ಸರ್ಕಾರ ಈ ಬಜೆಟ್‌ನಲ್ಲಿ ಮೊದಲ ಹಂತದಲ್ಲಿ ಎಷ್ಟು ಹಣ ಬಿಡುಗಡೆ ಮಾಡಲಿದೆ ಎಂಬ ನಿರೀಕ್ಷೆಯಲ್ಲಿದೆ. ಜಿಲ್ಲೆಯ ಜನಪ್ರತಿನಿಧಿಗಳಿಂದಲೂ ಉತ್ತಮ ಸ್ಪಂದನೆ ಸಿಕ್ಕಿದ್ದು, ಸರ್ಕಾರದ ಮಟ್ಟದಲ್ಲೂ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ.
ಪ್ರೊ| ಹರೀಶ ರಾಮಸ್ವಾಮಿ, ಕುಲಪತಿ, ರಾಯಚೂರು ವಿವಿ
ಸಿದ್ಧಯ್ಯಸ್ವಾಮಿ ಕುಕುನೂರು