Advertisement

Rahul Gandhi ಗ್ಯಾರಂಟಿಗಳು ಕರ್ನಾಟಕ, ಹಿಮಾಚಲದಲ್ಲಿ ಫಸಲು ನೀಡಿವೆ: ಅಮಿತ್ ಶಾ

05:25 PM Sep 29, 2024 | Team Udayavani |

ಚಂಡೀಗಢ: ಚುನಾವಣ ಕಾವೇರಿರುವ ಹರಿಯಾಣದಲ್ಲಿ ಭಾನುವಾರ(ಸೆ29) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ”ಹಿಮಾಚಲ ಪ್ರದೇಶ ಮತ್ತು ಕರ್ನಾಟಕದಲ್ಲಿ ರಾಹುಲ್ ಗಾಂಧಿ ಅವರ ಚುನಾವಣ ಗ್ಯಾರಂಟಿಗಳು ಫಸಲು ಪಡೆದಿವೆ ಎಂದಿದ್ದಾರೆ.

Advertisement

ಗುರುಗ್ರಾಮ್‌ನ ಬಾದಶಹಪುರದಲ್ಲಿ ಚುನಾವಣ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿ, ಚುನಾವಣ ಸಮಯದಲ್ಲಿ ಕಾಂಗ್ರೆಸ್ ದೊಡ್ಡ ಭರವಸೆಗಳನ್ನು ನೀಡುತ್ತದೆ. ಹಿಮಾಚಲ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ರಾಹುಲ್ ಗಾಂಧಿಯವರ ಗ್ಯಾರಂಟಿಗಳು ಫಲ ನೀಡಿದವು. ಆದರೆ ಅವರಿಗೆ ಈಗ ತಮ್ಮ ಗ್ಯಾರಂಟಿಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ” ಎಂದು ಕಿಡಿ ಕಾರಿದರು.

ಬಿಜೆಪಿ ಈಡೇರಿಸಲು ಸಾಧ್ಯವಾಗದ ಯಾವುದೇ ಭರವಸೆ ನೀಡುವುದಿಲ್ಲ. ರಾಹುಲ್ ಬಾಬಾ ಮತ್ತು ಕಂಪನಿ ಅಭಿವೃದ್ಧಿಯನ್ನು ಕೈಗೊಳ್ಳಲು ಸಾಧ್ಯವಿಲ್ಲ.ಹರ್ಯಾಣದ ಅಭಿವೃದ್ಧಿಯನ್ನು ಖಚಿತಪಡಿಸುವುದು ಡಬಲ್ ಇಂಜಿನ್ ಸರಕಾರ. ನಾವು ದೇಶದ ಗಡಿಯನ್ನು ಭದ್ರಪಡಿಸುತ್ತೇವೆ, ನಾವು ಮೀಸಲಾತಿಯನ್ನು ರಕ್ಷಿಸುತ್ತೇವೆ ಮತ್ತು 370 ನೇ ವಿಧಿಯನ್ನು ಹಿಂತಿರುಗಿಸಲು ಎಂದಿಗೂ ಅನುಮತಿಸುವುದಿಲ್ಲ” ಎಂದರು.

”ವಕ್ಫ್ ಮಂಡಳಿಯಲ್ಲಿನ ಪ್ರಸ್ತುತ ಶಾಸನದಲ್ಲಿ ಸಮಸ್ಯೆ ಇದೆ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ನಾವು ಅದನ್ನು ತಿದ್ದುಪಡಿ ಮಾಡುತ್ತೇವೆ” ಎಂದು ಘೋಷಿಸಿದರು.

ಇಂದಿರಾ ಗಾಂಧಿಯಿಂದ ಹಿಡಿದು ಮನಮೋಹನ್ ಸಿಂಗ್ ವರೆಗೆ ಕಾಂಗ್ರೆಸ್ ಒನ್ ರ‍್ಯಾಂಕ್ ಒನ್ ಪೆನ್ಷನ್ ಬೇಡಿಕೆಯನ್ನು ಈಡೇರಿಸಲಿಲ್ಲ. 2015ರಲ್ಲಿ ನರೇಂದ್ರ ಮೋದಿ ಸರಕಾರ ಅದನ್ನು ಈಡೇರಿಸಿ ಸೈನಿಕರಿಗೆ ಸೂಕ್ತ ಗೌರವ ನೀಡಿತು ಎಂದರು.

Advertisement

ಅಗ್ನಿಪಥ್ ಯೋಜನೆ ಬಗ್ಗೆ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಶಾ, ”ತುಷ್ಟೀಕರಣದಿಂದ ಕಾಂಗ್ರೆಸ್ ಕುರುಡಾಗಿದೆ. ರಾಹುಲ್ ಗಾಂಧಿ ಸುಳ್ಳು ಹೇಳುವ ಯಂತ್ರ. ಅಗ್ನಿವೀರ್‌ಗಳಿಗೆ ಉದ್ಯೋಗ ಸಿಗುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಸಶಸ್ತ್ರ ಪಡೆಗಳ ಯುವ ಮುಖಗಳನ್ನು ಖಚಿತಪಡಿಸಿಕೊಳ್ಳಲು ಅಗ್ನಿವೀರ್ ಯೋಜನೆಯನ್ನು ಪರಿಚಯಿಸಲಾಗಿದೆ. ನಿಮ್ಮ ಮಕ್ಕಳನ್ನು ಸೈನ್ಯಕ್ಕೆ ಕಳುಹಿಸಲು ಹಿಂಜರಿಯಬೇಡಿ. ಹರಿಯಾಣ ಮತ್ತು ಕೇಂದ್ರ ಸರಕಾರವು ಪ್ರತಿಯೊಬ್ಬ ಅಗ್ನಿವೀರ್‌ಗೆ ಪಿಂಚಣಿ, ಉದ್ಯೋಗಗಳನ್ನು ನೀಡಲಿದೆ” ಎಂದು ಕೇಂದ್ರ ಗೃಹ ಸಚಿವರು ಭರವಸೆ ನೀಡಿದರು.

ಅಕ್ಟೋಬರ್ 3 ರಂದು ನವರಾತ್ರಿ ಪ್ರಾರಂಭವಾಗುತ್ತದೆ. ಅಕ್ಟೋಬರ್ 5 ರಂದು, ನಿಮ್ಮ ಮತ ಚಲಾಯಿಸುವಾಗ, ಶಕ್ತಿ ದೇವತೆ ಅನ್ನು ಯಾರು ಅವಮಾನಿಸುತ್ತಾರೆ ಎನ್ನುವುದನ್ನು ಅರಿತು ರಾಹುಲ್ ಬಾಬಾ ಮತ್ತು ಅವರ ಕಾಂಗ್ರೆಸ್‌ ಪಕ್ಷಕ್ಕೆ ಉತ್ತರವನ್ನು ನೀಡಬೇಕು” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next