Advertisement

Ipl 2024: ರನೌಟಾಗಿ ಅಳುತ್ತ ಕೂತ ತ್ರಿಪಾಠಿ!

08:15 AM May 23, 2024 | Team Udayavani |

ಅಹ್ಮದಾಬಾದ್‌: ಕೆಕೆಆರ್‌ ಎದುರಿನ ಪಂದ್ಯದಲ್ಲಿ ಉತ್ತಮವಾಗಿ ಆಡುತ್ತಿದ್ದ ರಾಹುಲ್‌ ತ್ರಿಪಾಠಿ, ರನೌಟ್‌ ಆದ ಬಳಿಕ ಡ್ರೆಸ್ಸಿಂಗ್‌ ರೂಮ್‌ ಮೆಟ್ಟಿಲ ಮೇಲೆ ಅಳುತ್ತ ಕುಳಿತ ದೃಶ್ಯವೊಂದು ವೈರಲ್‌ ಆಗಿದೆ. ಆದರೆ ಇದಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.

Advertisement

ಆರಂಭಿಕರಿಬ್ಬರೂ ಬೇಗನೇ ಔಟಾದ ಬಳಿಕ ತಂಡವನ್ನು ಆಧರಿಸತೊಡಗಿದ ತ್ರಿಪಾಠಿ, 55 ರನ್‌ ಬಾರಿಸಿದ ವೇಳೆ ಅಬ್ದುಲ್‌ ಸಮದ್‌ ನೀಡಿದ ಕರೆಯಿಂದ ರನೌಟ್‌ ಸಂಕಟಕ್ಕೆ ಸಿಲುಕಿದರು.

ತಮ್ಮ ಜವಾಬ್ದಾರಿಯನ್ನು ಪರಿಪೂರ್ಣವಾಗಿ ನಿಭಾಯಿಸಲು ಸಾಧ್ಯವಾಗ ಲಿಲ್ಲವಲ್ಲ ಎಂಬ ಕಾರಣಕ್ಕೆ ತ್ರಿಪಾಠಿ ಭಾವುಕರಾದರು ಎಂದು ಭಾವಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next