ಯಲಬುರ್ಗಾ/ಕೊಪ್ಪಳ: ಕಾರ್ಯಕ್ರಮ ವೊಂದರಲ್ಲಿ ವಂದೇ ಮಾತರಂ ಗೀತೆಯನ್ನು ಬೇಗ ಮುಗಿಸಿ ಎಂದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಾಜಕೀಯದಲ್ಲಿ ಮುಂದುವರಿಯಲು ಅನರ್ಹ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದರು.
ಕುಕನೂರು ಪಟ್ಟಣದಲ್ಲಿ ಶುಕ್ರವಾರ ಸಂಜೆ ನಡೆದ ಕರುನಾಡ ಜಾಗೃತಿ ಯಾತ್ರೆಯಲ್ಲಿ ಮಾತನಾಡಿದ ಅವರು, ಮೇ 15 ಮತ ಎಣಿಕೆಯ ದಿನ ಕಾಂಗ್ರೆಸ್ ಸರಕಾರ ನೆಲಕ್ಕುರುಳಲಿದೆ.
ರಾಜ್ಯದಲ್ಲಿ ಬಿಜೆಪಿ ಅಲೆ ಇದ್ದು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅ ಧಿಕಾರಕ್ಕೆ ಬರುವುದು ಶತಃಸಿದ್ಧ. ಕಾಂಗ್ರೆಸ್‌ನ ರಾಹುಲ್ ಬಾಬಾ ಓಡಾಡುತ್ತಾ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿ ಕಾರಕ್ಕೆ ಬರುತ್ತದೆಂದು ಹೇಳುತ್ತಾರೆ. ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಅಧಿ ಕಾರಕ್ಕೆ ಬಂದಿರುವದನ್ನು ರಾಹುಲ್ ಗಾಂ ಧಿ ತಿಳಿದುಕೊಳ್ಳಲಿ. ಕಳೆದ 5 ವರ್ಷಗಳಿಂದ ಸಿದ್ದರಾಮಯ್ಯ ಸರಕಾರದಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ರಾಜ್ಯದ ಅಭಿವೃದ್ಧಿಕ್ಕಿಂತ ತಮ್ಮ ಅಭಿವೃದ್ಧಿ ಮಾಡಿಕೊಂಡಿದ್ದಾರೆ ಎಂದರು.
ಕೊಪ್ಪಳದ ಶಿವ ಚಿತ್ರಮಂದಿರದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಲು ಹೇಗೆ ಸನ್ನದ್ಧರಾಗ ಬೇಕು? ಇದುವರೆಗೂ ಮಾಡಿಕೊಂಡಿರುವ ತಯಾರಿಗಳೇನು? ಮುಂದೆ ಏನು ಮಾಡಬೇಕು ಎಂಬ ಹಲವು ಅಂಶಗಳನ್ನು ಶಾ ಮನದಟ್ಟು ಮಾಡಿದರು.
ಜನಾರ್ದನ ರೆಡ್ಡಿಗೆ ತಾಕೀತು
ಶ್ರೀರಾಮುಲು ಸಹಿತ ಪಕ್ಷದ ಅಭ್ಯರ್ಥಿಗಳ ಪರ ಬಹಿರಂಗ ಪ್ರಚಾರ ಮಾಡದಂತೆ ಜನಾರ್ದನ ರೆಡ್ಡಿಗೆ ಅಮಿತ್ ಶಾ ತಾಕೀತು ಮಾಡಿದ್ದಾರೆ. ಬಿಜೆಪಿಯಲ್ಲಿ ಮತ್ತೆ ರೆಡ್ಡಿ ಸಹೋದರರ ಪ್ರಾಬಲ್ಯ ಎಂಬಂತೆ ಕಾಂಗ್ರೆಸ್ ಸಹಿತ ವಿಪಕ್ಷಗಳು ಬಿಂಬಿಸುತ್ತಿರುವುದು ಹಾಗೂ ಅದು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯ ವಿಷಯವಾಗಿರುವುದು ಪಕ್ಷದಲ್ಲಿ ಆತಂಕಕ್ಕೆ ಕಾರಣವಾಗಿದೆ.