Advertisement

ಮೋದಿ ಸ್ಕ್ಯಾಮ್‌ ಅಲರ್ಟ್‌: ರಾಹುಲ್‌ ಗಾಂಧಿ ಟ್ವೀಟ್‌, ವಾಗ್ದಾಳಿ

04:55 PM Apr 07, 2018 | udayavani editorial |

ಹೊಸದಿಲ್ಲಿ : ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಇಂದು ಶನಿವಾರ ಟ್ವಿಟರ್‌ನಲ್ಲಿ “ಮೋದಿ ಸ್ಕ್ಯಾಮ್‌ ಅಲರ್ಟ್‌’ ಪೋಸ್ಟ್‌ ಮೂಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸರಕಾರದಿಂದ  ಬಹುಕೋಟಿ ರಾಫೇಲ್‌ ಫೈಟರ್‌ ಜೆಟ್‌ ವ್ಯವಹಾರದಲ್ಲಿ ಅಕ್ರಮ ನಡೆದಿರುವುದನ್ನು ಆರೋಪಿಸಿ ಹೊಸದಾಗಿ ವಾಗ್ಧಾಳಿ ಆರಂಭಿಸಿದ್ದಾರೆ.

Advertisement

ರಾಹುಲ್‌ ತಮ್ಮ ಟ್ವೀಟ್‌ನಲ್ಲಿ ಬರೆದಿರುವುದು ಈ ರೀತಿ ಇದೆ : 15 ಬಿಲಿಯ ಡಾಲರ್‌ಗಳ ಫೈಟರ್‌ ಜೆಟ್‌ ಡೀಲ್‌ ಪುನರಪಿ ಟೆಂಡರ್‌ ಆಗಿದೆ. ವ್ಯೂಹಾತ್ಮಕ ಭಾಗೀದಾರನಾಗುವ ರೇಸ್‌ನಲ್ಲಿ ಮೋದಿ ಸ್ನೇಹಿತರು ಇದ್ದಾರೆ. ರಾಫೇಲ್‌ ಡೀಲ್‌ನಲ್ಲಿ ದೇಶಕ್ಕೆ 40,000 ಕೋಟಿ ರೂ.ನಷ್ಟವಾಗಿದೆ. ಈ ಹಣವನ್ನು ಫ್ರಾನ್ಸ್‌ಗೆ “ಸಯನೋರಾ” ಮಾಡಲಾಗಿದೆ. ಅಂತೆಯೇ ಪ್ರಧಾನಿ ಮೋದಿ ಈ ಗುತ್ತಿಗೆಯ ಮರು ಟೆಂಡರ್‌ ನಡೆಸಿ ಸ್ನೇಹಿತರಿಗೆ ಅನುಕೂಲ ಮಾಡಿಕೊಡಲಿದ್ದಾರೆ’. 

ರಾಫೇಲ್‌ ಫೈಟರ್‌ ಜೆಟ್‌ ಡೀಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರದಿಂದ ದೇಶದ ಬೊಕ್ಕಸಕ್ಕೆ 40,000 ಕೋಟಿ ರೂ. ನಷ್ಟವಾಗಿದೆ ಎಂದು ರಾಹುಲ್‌ ಈ ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next