ಮುಧೋಳ: ಕಬ್ಬು ದರ ನಿಗದಿ ಹಳೆ ಬಾಕಿ ಪಾವತಿಯಾಗುವವರೆಗೆ ಕಾರ್ಖಾನೆ ಆರಂಭಿಸಬಾರದು ಎಂದು ಆಗ್ರಹಿಸಿ ಒಂದು ಬಣದ ರೈತರು ಹೋರಾಟಕ್ಕೆ ಮುಂದಾಗಿದ್ದರೆ, ಕೂಡಲೇ ನಿರಾಣಿ ಸಕ್ಕರೆ ಕಾರ್ಖಾನೆ ಆರಂಭಿಸಬೇಕು ಎಂದು ಒತ್ತಾಯಿಸಿ ಮತ್ತೊಂದು ಬಣ ರಸ್ತೆಗಿಳಿದು ಆಕ್ರೋಶ ಹೊರಹಾಕುತ್ತಿದೆ. ಎರಡೂ ಬಣದ ರೈತರಿಂದ ನಡೆಯುತ್ತಿರುವ ಪ್ರತಿಭಟನೆಯಿಂದ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ನಿರಾಣಿ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಆಗ್ರಹಿಸಿ ಒಂದು ಬಣ ಪ್ರತಿಭಟನೆ ಮುಂದಾಗಿದ್ದರೆ, ದರ ನಿಗದಿ ಹಾಗೂ ಬಾಕಿ ನೀಡುವವರೆಗೆ ಕಾರ್ಖಾನೆ ಆರಂಭಿಸದಂತೆ ಮತ್ತೊಂದು ಬಣದ ರೈತರು ಪ್ರತಿಭಟನೆ ಮುಂದಾಗಿದ್ದಾರೆ.
ಎರಡು ಬಣದ ಪ್ರತಿಭಟನಾಕಾರರನ್ನು ತಡೆದಿರುವ ಪೊಲೀಸರು ಒಂದು ಬಣವನ್ನು ಜಿಎಲ್ ಬಿಸಿ ಐಬಿಯಲ್ಲಿ ಮತ್ತೊಂದು ಬಣದ ಮುಖಂಡರನ್ನು ತಾಲೂಕು ಕೃಷಿ ಇಲಾಖೆ ಆವರಣದಲ್ಲಿ ಇರಿಸಿದ್ದಾರೆ.
ಪ್ರತಿಭಟನೆ ಬಿಸಿಯಿಂದ ಪೊಲೀಸರು ಹಾಗು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.
ಸ್ಥಳಕ್ಕೆ ಎಸ್ಪಿ, ಎಎಸ್ಪಿ, ಡಿವೈಎಸ್ಪಿ ಸ್ಥಳದಲ್ಲೇ ಬೀಡುಬಿಟ್ಟು ಎರಡು ಬಣದ ರೈತ ಮುಖಂಡರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತಿದೆ.