Advertisement

ಕಾಂಗ್ರೆಸ್‌ ಆಶ್ವಾಸನೆ ಈಡೇರಿಸುವ ಪಕ್ಷ : ರಾಹುಲ್‌ ಗಾಂಧಿ

01:47 PM Mar 15, 2019 | Team Udayavani |

ಬಾರಾಗಢ, ಒಡಿಶಾ : ಪ್ರಧಾನಿ ನರೇಂದ್ರ ಮೋದಿ ಅವರು ಜನರಿಗೆ, ವಿಶೇಷವಾಗಿ ಬಡ ರೈತರಿಗೆ ಸುಳ್ಳು ಆಶ್ವಾಸನೆಗಳನ್ನು ಕೊಟ್ಟು ಮೋಸ ಮಾಡುತ್ತಿದ್ದಾರೆ ಎಂದು ಇಂದಿಲ್ಲಿ ಆರೋಪಿಸಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಕಾಂಗ್ರೆಸ್‌ ಪಕ್ಷ ಯಾವತ್ತೂ ಚುನಾವಣೆಗಳನ್ನು ಗೆದ್ದ ಬಳಿಕ ತನ್ನ ಮಾತನ್ನು ಉಳಿಸಿಕೊಂಡು ಬಂದಿದೆ ಎಂದು ಹೇಳಿದ್ದಾರೆ.

Advertisement

ಪಶ್ಚಿಮ ಒಡಿಶಾದ ಈ ಪಟ್ಟಣದಲ್ಲಿಂದು ಚುನಾವಣಾ ಪ್ರಚಾರ ರಾಲಿಯಲ್ಲಿ ಮಾತನಾಡುತ್ತಿದ್ದ ರಾಹುಲ್‌ ಗಾಂಧಿ, ಮೋದಿ ಅವರಂತಹ ನಾಯಕರ ಹಾಗೆ ಕಾಂಗ್ರೆಸ್‌ ಎಂದೂ ಸುಳ್ಳು ಭರವಸೆ ನೀಡುವುದಿಲ್ಲ; ನೀಡಿದ ಭರವಸೆಗಳನ್ನು ಈಡೇರಿಸಿ ತೋರಿಸುತ್ತದೆ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next