Advertisement
ವೈಶಾಲಿ ಸಾಧನೆಗೆ 5 ಬಾರಿಯ ಮಾಜಿ ಚೆಸ್ ವಿಶ್ವಚಾಂಪಿಯನ್ ವಿಶ್ವನಾಥನ್ ಆನಂದ್ ಶುಭಾಶಯ ಹೇಳಿದ್ದಾರೆ. “ಕಂಚು ಗೆದ್ದ ವೈಶಾಲಿಗೆ ಅಭಿನಂದನೆಗಳು. ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ನಮಗೆಲ್ಲ ಹೆಮ್ಮೆಯಾಗಿದೆ’ ಎಂದು ವಿಶಿ ಟ್ವೀಟ್ ಮಾಡಿದ್ದಾರೆ.
ಪುರುಷರ ವಿಭಾಗದಲ್ಲಿ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್, ರಷ್ಯಾದ ಇಯಾನ್ ನೆಪೋಮ್ನಿಯಾಚ್ಚಿ ಜಂಟಿ ಚಾಂಪಿಯನ್ ಆಗಿದ್ದಾರೆ. ಚೆಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಇಂಥದ್ದೊಂದು ಘಟನೆ ನಡೆದಿದೆ. ಹಾಗೆಯೇ ಈ ನಡೆ ವಿವಾದಕ್ಕೂ ಕಾರಣವಾಗಿದೆ. ಫೈನಲ್ನಲ್ಲಿ ಕಾರ್ಲ್ಸನ್ ಆರಂಭದ 2 ಪಂದ್ಯ ಗೆದ್ದರು. ಅನಂತರ ನೆಪೋಮ್ನಿಯಾಚ್ಚಿ 2 ಪಂದ್ಯ ಗೆದ್ದರು. ಪಂದ್ಯ 2-2 ಅಂಕಗಳಿಂದ ಸಮಗೊಂಡಿತು. ಹೀಗಾಗಿ ಟೈಬ್ರೇಕರ್ಗೆ ಹೋಗಲು ನಿರ್ಧರಿಸಲಾಯಿತು. ಕಿರು ಅವಧಿಯ ಮೂರೂ ಪಂದ್ಯಗಳು ಡ್ರಾಗೊಂಡ ಅನಂತರ ಸ್ವತಃ ಕಾಲ್ಸìನ್ ಪ್ರಶಸ್ತಿಯನ್ನು ಹಂಚಿಕೊಳ್ಳುವ ಸಲಹೆ ನೀಡಿದರು. ಇದನ್ನು ನೆಪೋಮ್ನಿಯಾಚ್ಚಿ ಮತ್ತು ಫಿಡೆ ಒಪ್ಪಿಕೊಂಡಿತು.
Related Articles
Advertisement