Advertisement
ಮುಂಗಾರು ಪ್ರವೇಶಕ್ಕೂ ಮುನ್ನವೇ ವರ್ಷಧಾರೆಯು ಬೆಚ್ಚಿಬೀಳಿಸುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಸರ್ಕಾರ, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಳೆ ಅನಾಹುತ ಎದುರಿಸಲು ಸಕಲ ರೀತಿಯಲ್ಲಿ ಸನ್ನದ್ಧವಾಗಿದೆ. ಮುಂದಿನ ವಾರವೇ “ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ’ (ಎನ್‌ಡಿಆರ್‌ಎಫ್) ತಂಡಗಳು ರಾಜ್ಯಕ್ಕೆ ಬರಲಿವೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
Related Articles
Advertisement
ಇದನ್ನೂ ಓದಿ : ಹತ್ತು ಗಿಗಾ ವ್ಯಾಟ್ ಹಸುರು ಇಂಧನ ಉತ್ಪಾದನೆ: ಸುನಿಲ್ ಕುಮಾರ್
ಜಿಲ್ಲಾಧಿಕಾರಿಗಳಿಗೆ ಟಾಸ್ಕ್: ಪ್ರತಿ ಜಿಲ್ಲೆಯಲ್ಲಿಯೂ ಎಲ್ಲ ರೀತಿಯ ಸಲಕರಣೆಗಳೊಂದಿಗೆ ಒಂದು ವಾಹನ ಸದಾ ಸಿದ್ಧವಾಗಿರಬೇಕು. ರಸ್ತೆಯಲ್ಲಿ ಮರ ಬಿದ್ದಾಗ ತೆರವುಗೊಳಿಸಲು, ನೆರೆ ಹಾವಳಿ ಉಂಟಾದಾಗ ಕಾರ್ಯಾಚರಣೆ ನಡೆಸಲು ಅವುಗಳನ್ನು ಬಳಸಬೇಕು. ಎನ್‌ಡಿಆರ್‌ಎಫ್ 4 ತಂಡಗಳು ಮುಂಗಾರು ಆರಂಭಕ್ಕೂ ವಾರ ಮುಂಚೆಯೇ ರಾಜ್ಯಕ್ಕೆ ಆಗಮಿಸಲಿದೆ. ಬೆಂಗಳೂರಿನಲ್ಲಿ ಒಂದು ತಂಡ ಕಾರ್ಯಾಚರಣೆಗೆ ಸದಾ ಸಿದ್ಧವಾಗಿರುತ್ತದೆ. ಎಲ್ಲ ಜಿಲ್ಲಾಧಿಕಾರಿಗಳು ಅಗತ್ಯ ಇರುವ ಎಲ್ಲ ಸಾಮಗ್ರಿಗಳನ್ನು ತತ್‌ಕ್ಷಣವೇ ಖರೀದಿ ಮಾಡಲು ಸೂಚಿಸಲಾಗಿದೆ ಎಂದು ಅಶೋಕ್ ಮಾಹಿತಿ ನೀಡಿದ್ದಾರೆ. 4 ಎನ್‌ಡಿಆರ್‌ಎಫ್ ತಂಡ ಎಲ್ಲೆಲ್ಲಿ?
1. ದಕ್ಷಿಣ ಕನ್ನಡ – ಉಡುಪಿ, ಉತ್ತರ ಕನ್ನಡ ಜಿಲ್ಲೆ ಹಾಗೂ ಸುತ್ತಮುತ್ತಲಿನ ಪ್ರದೇಶದ ಅನುಕೂಲಕ್ಕಾಗಿ
2. ಕೊಡಗು – ಮೈಸೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳು.
3. ಬೆಳಗಾವಿ, ಬಾಗಲಕೋಟ, ವಿಜಯಪುರ ಹಾಗೂ ಸುತ್ತಮುತ್ತಲಿನ ಪ್ರದೇಶದ ಅನುಕೂಲಕ್ಕಾಗಿ.
4. ರಾಯಚೂರು,ಯಾದಗಿರಿ, ಬಳ್ಳಾರಿ, ಕಲಬುರಗಿ ಹಾಗೂ ಸುತ್ತಮುತ್ತಲಿನ ಪ್ರದೇಶದ ಅನುಕೂಲಕ್ಕಾಗಿ. ಅಪಾರ ಹಾನಿ
ಮಳೆಯಿಂದ ಒಟ್ಟು ಬೆಳೆ ಹಾನಿಯಾದ ಪ್ರದೇಶ- 635 ಹೆಕ್ಟೇರ್
ಕೃಷಿ ಬೆಳೆ ಹಾನಿ – 204 ಹೆಕ್ಟೇರ್
ತೋಟಗಾರಿಕಾ ಬೆಳೆ ಹಾನಿ – 431 ಹೆಕ್ಟೇರ್
ಸಂಪೂರ್ಣ ಹಾನಿಗೀಡಾದ ಮನೆಗಳು- 23
ರಾಜ್ಯಾದ್ಯಂತ ಮೃತಪಟ್ಟವರು- 9 ಮಂದಿ