ಚಿಕ್ಕಬಳ್ಳಾಪುರ: ನಮ್ಮ ಮನೆಯಲ್ಲಿ ನಾವೇ ಪರಕೀಯರಾಗಿದ್ದೇವೆ. ರಾಜ್ಯದಲ್ಲಿ ಬಹು ಸಂಖ್ಯಾಕ ಹಿಂದೂಗಳನ್ನು ದಮನ ಮಾಡಲು ರಾಜ್ಯ ಕಾಂಗ್ರೆಸ್ ಸರಕಾರ ಹೊರಟಿದ್ದು, ಬೆಳಗಾವಿ ಅಧಿವೇಶನದಲ್ಲಿ ವಕ್ಫ್ ರದ್ದತಿಗೆ ಆಗ್ರಹಿಸಿ ಅಧಿ ವೇಶನ ನಡೆಸಲು ಬಿಡ ದಂತೆ ಹೋರಾಟ ನಡೆಸಲಿದ್ದೇವೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದರು.
ನಗರದಲ್ಲಿ ಮಂಗಳವಾರ ರೈತರ ಜಮೀನುಗಳನ್ನು ರಾತೋರಾತ್ರಿ ವಕ್ಫ್ ಹೆಸರಿಗೆ ಮಂಜೂರು ಮಾಡಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ವತಿಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಪಾದಯಾತ್ರೆ ಸಂದರ್ಭ ಅವರು ಮಾತನಾಡಿದರು.
ಅಹಿಂದ ಜಪ ಮಾಡುತ್ತಿದ್ದವರು ಇದೀಗ ಸಂಪೂರ್ಣವಾಗಿ ಹಿಂದ ಬಿಟ್ಟು ಅಲ್ಪಸಂಖ್ಯಾಕರನ್ನು ಉದ್ಧಾರ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ನಾಯಕರು ಕರ್ನಾಟಕವನ್ನು ಪಾಕಿಸ್ಥಾನ ಮಾಡಲು ಹೊರಟಿದ್ದಾರೆ, ವಕ್ಫ್ ರದ್ದತಿ ಆಗಲೇಬೇಕು ಎಂದರು.
ಯುಪಿಎ ಸರಕಾರ ವಕ್ಫ್ ಗೆ ನ್ಯಾಯಾಂಗದ ಅಧಿಕಾರ ಕೊಟ್ಟಿದೆ. ಹಿಂದೂಗಳಿಗೆ ಒಂದು ಕಾನೂನು, ಮುಸ್ಲಿಮರಿಗೆ ಒಂದು ಕಾನೂನಾ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಶೂನ್ಯವಾಗಿದೆ ಎಂದರು. ಸಂಸದ ಡಾ| ಕೆ. ಸುಧಾಕರ್ ಮಾತನಾಡಿ, ಬಹುಸಂಖ್ಯಾಕ ಹಿಂದೂ ಗಳ ಮೇಲೆ ವಕ#… ಗದಾ ಪ್ರಹಾರ ಮಾಡುತ್ತಿದೆ ಎಂದರು.