Advertisement

ರಸ್ತೆ ಗುಂಡಿ ಮುಚ್ಚಲು ಆರಕ್ಷಕರು ಬದ್ಧ

03:04 PM Oct 20, 2021 | Team Udayavani |

ಬೆಂಗಳೂರು: ರಸ್ತೆ ಗುಂಡಿಗೆ ಬಿದ್ದು ಅಪ ಘಾತಗಳು ಸಂಭವಿಸುತ್ತಿದ್ದರೂ ಬಿಬಿಎಂಪಿ ಅಧಿಕಾರಿಗಳು ಗುಂಡಿ ಮುಚ್ಚಲು ಕ್ರಮಕೈಗೊಳ್ಳದ ಕಾರಣ ಸಂಚಾರ ಪೊಲೀಸರೇ ಗುಂಡಿ ಮುಚ್ಚಲು ಮುಂದಾಗಿದ್ದು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Advertisement

ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್‌ನ ಮೇಲು ಸೇತುವೆ ರಸ್ತೆಯಲ್ಲಿ ಪಶ್ಚಿಮ ವಿಭಾಗದ ಸಂಚಾರ ಪೊಲೀಸರು ಸ್ಥಳೀಯರ ನೆರವಿನಿಂದ ರಸ್ತೆ ಗುಂಡಿಗಳನ್ನು ಮುಚ್ಚಿದ್ದರು. ಈ ಕುರಿತು ಪಶ್ಚಿಮ ಸಂಚಾರ ವಿಭಾಗದ ಡಿಸಿಪಿ ಕುಲದೀಪ್‌ ಕುಮಾರ್‌ ಜೈನ್‌ ಕೆಲ ಫೋಟೋಗಳನ್ನು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಬೆಂಗಳೂರು ಪೊಲೀಸರ ಈ ಕಾರ್ಯಕ್ಕೆ ಟ್ವಿಟಿಗರು, ಮೆಚ್ಚುಗೆ ವ್ಯಕ್ತಪಡಿಸಿದಲ್ಲದೆ, ಸಂಚಾರ ಪೊಲೀಸರ ಕಾರ್ಯ ನೋಡಿ ಬಿಬಿಎಂಪಿ ಕಲಿಯಬೇಕಿದೆ. ಸಾರ್ವಜ ನಿಕರ ಸಮಸ್ಯೆಗಳಿಗೆ ಬಿಬಿಎಂಪಿ ಸ್ಪಂದಿಸು ತ್ತಿಲ್ಲ ಎಂದು ಟೀಕಿಸಿದ್ದಾರೆ. ರಸ್ತೆಗಳ ನಿರ್ವಹಣೆ ಮತ್ತು ರಿಪೇರಿ ಕೆಲಸವನ್ನು ಬಿಬಿಎಂಪಿ ಮಾಡಬೇಕಿತ್ತು. ವಾಹನಗಳನ್ನು ಓಡಿಸುವವರ ಕಷ್ಟವನ್ನು ಹತ್ತಿರದಿಂದ ಗಮನಿಸುವ ಪೊಲೀಸರು ಇಂತಹ ಮಹತ್ವದ ಕೆಲಸಕ್ಕೆ ಮುಂದೆ ಬಂದಿದ್ದಾರೆ ಎಂದು ರಾಜೇಶ್‌ ಎಂಬುವರು ತಿಳಿಸಿದ್ದಾರೆ.

“ಪೊಲೀಸರು ಈ ಕೆಲಸ ಮಾಡುವುದನ್ನು ನೋಡಲು ಬೇಸರವಾಗುತ್ತಿದೆ. ಆದರೆ, ಅವರು ವಾಹನ ಬಳಕೆದಾರರ ಸುರಕ್ಷೆಗಾಗಿ ಇಂತಹ ಕೆಲಸ ಮಾಡುತ್ತಿದ್ದಾರೆ. ಬಿಬಿ ಎಂಪಿಗೆ ತೆರಿಗೆ ತುಂಬುವುದು ನಿಲ್ಲಿಸೋಣ, ಟ್ರಾಫಿಕ್‌ ಪೊಲೀಸರಿಗೆ ಹೆಚ್ಚು ದಂಡ ತುಂಬೋಣ’ ಎಂದು ಅರುಣ್‌ ವಾಸುಕಿ ಎಂಬುವರು ಟ್ವಿಟ್‌ ಮಾಡಿದ್ದಾರೆ. ಈ ನಡುವೆ ಕಿಶೋರ್‌ ನಾಯಕ್‌ ಎಂಬವರು, ಈ ರಸ್ತೆಗಳು ಒಂದು ವಾರವಾದರೂ ಚೆನ್ನಾಗಿ ಇರುತ್ತವೆಯೇ? ನಾನು ನಿಮ್ಮನ್ನು ಅಭಿನಂದಿಸಬೇಕೋ ಅಥವಾ ಅಳ ಬೇಕೋ?’ ಎಂಬ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:- ಗುಡಿಹಾಳದಲ್ಲೊಂದು ಮಾದರಿ ಗ್ರಂಥಾಲಯ

Advertisement

ಅದಕ್ಕೆ ಡಿಸಿಪಿ ಕುಲದೀಪ್‌ ಕುಮಾರ್‌ ಜೈನ್‌, ನಿರ್ಧಾರ ನಿಮ್ಮದ್ದು ಎಂದು ಉತ್ತರಿಸಿದ್ದಾರೆ. ಇನ್ನು ಕೆಲವರು, ಈ ಕೆಲಸ ನೀವೇಕೆ ಮಾಡಿದಿರಿ? ಬಿಬಿಎಂಪಿಯ ಗಮನ ಸೆಳೆ ಯಬೇಕಿತ್ತು ಅಲ್ಲವೆ? ನೀವು ಮಾಡ ಬೇಕಾದ ಕೆಲಸವೇ ಸಾಕಷ್ಟಿರುವಾಗ ಬೇಡ ದ ಉಸಾಬರಿ ಏಕೆ ಬೇಕಿತ್ತು? ಎಂದು ವಿ.ಎನ್‌ ಹೆಸರಿನ ಖಾತೆದಾರರು ಪ್ರಶ್ನಿಸಿದ್ದಾರೆ.ಅದಕ್ಕೂ ಡಿಸಿಪಿ ಉತ್ತರಿಸಿದ್ದು, ಅದು ನಮಗೆ ಗೊತ್ತಿದೆ. ವಾಹನ ಸವಾರರ ಸುರಕ್ಷತೆಯೇ ನಮ್ಮ ಆದ್ಯತೆ ಎಂದು ಉತ್ತರಿಸಿದ್ದಾರೆ.

ಸೂಕ್ತ ಸ್ಪಂದನೆಯಿಲ್ಲ- ರಸ್ತೆಯಲ್ಲಿ ನಿಂತು ಸಂಚಾರ ನಿರ್ವಹಣೆ ಜತೆಗೆ ರಸ್ತೆ ಗುಂಡಿಗಳ ಫೋಟೋಗಳನ್ನು ತೆಗೆದು ಸಂಬಂ ಧಿಸಿದ ಬಿಬಿಎಂಪಿ ಅಧಿಕಾರಿಗಳಿಗೆ ಆ್ಯಪ್‌ ಮತ್ತು ವೆಬ್‌ಸೈಟ್‌ ಮೂಲಕ ಸಂಚಾರ ಪೊಲೀಸರು ಮಾಹಿತಿ ನೀಡುತ್ತಿದ್ದಾರೆ. ಆದರೂ ಬಿಬಿಎಂಪಿ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಸಂಚಾರ ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next