ಮೈಸೂರು: ವಂದೇ ಭಾರತ್ ಮಿಷನ್ ಅಡಿಯಲ್ಲಿ ವಿದೇಶದಿಂದ ಮರಳಿ ಭಾರತಕ್ಕೆ ಕರೆತರಲಾಗುತ್ತಿದ್ದು, ಮೈಸೂರಿಗೆ 2500 ಮಂದಿ ಆಗಮಿಸಲಿದ್ದಾರೆ. ಅವರನ್ನು ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ಸಿದಟಛಿತೆ ಮಾಡಿಕೊಂಡಿದೆ.ವಿವಿಧ ದೇಶದಲ್ಲಿರುವ ಭಾರತೀ ಯರನ್ನು ವಿಶೇಷ ವಿಮಾನದಲ್ಲಿ ಕರೆ ತರಲಾಗುತ್ತಿದ್ದು, ಕರ್ನಾಟಕದ ಸುಮಾರು 11 ಸಾವಿರ ಮಂದಿ ವಾಪಸ್ಸಾ ಗಲಿದ್ದಾರೆ.
ಮೈಸೂರಿಗೆ ಬಂದವರನ್ನು ಕ್ವಾರಂಟೈನ್ ಮಾಡಲು 70ಕ್ಕೂ ಹೆಚ್ಚು ಹೋಟೆಲ್ ಸಿದಪಡಿಸಲಾಗಿದೆ. ವಾಪಸ್ಸಾ ಗುತ್ತಿರುವವರು ತಮ್ಮ ಹೆಸರು ನೋಂದಾಯಿಸಿಕೊಂಡಿ ದ್ದು, ಬೆಂಗಳೂರು, ಮಂಗಳೂರು ವಿಮಾನ ನಿಲ್ದಾಣ ಹಾಗೂ ಕಾರ ವಾರ, ಮಂಗಳೂರು ಬಂದರಿಗೆ ಆಗಮಿಸಲಿದ್ದಾರೆ. ಮೈಸೂರಿನಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿದ್ದು, ಕೇವಲ ನಾಲ್ವರು ಚಿಕಿತ್ಸೆ ಪಡೆಯುತ್ತಿರುವು ದರಿಂದ ಕಟ್ಟುನಿಟ್ಟಾಗಿ ಕ್ವಾರಂಟೈನ್ ಮಾಡಲು ಸಿದತೆ ಮಾಡಿಕೊಳ್ಳಲಾಗಿದೆ.
ಜಿಲ್ಲಾಡಳಿತ ಈಗಾಗಲೇ ಕ್ವಾರಂಟೈನ್ ಗೆ ಅಗತ್ಯವಿರುವ ವಿವಿಧ ಕ್ಯಾಟಗರಿಯ ಹೋಟೆಲ್‌ಗಳನ್ನು ವಶಕ್ಕೆ ಪಡೆದಿದ್ದು, ಸ್ವತ್ಛತೆ, ಸ್ಯಾನಿಟೈಸೇಷನ್ ಸೇರಿದಂತೆ ಎಲ್ಲಾ ಸಿದತೆಗಳನ್ನು ಮಾಡಿಕೊಂಡಿದೆ. ವಿದೇಶದಲ್ಲಿರುವ ಮೈಸೂರಿನ ನಿವಾಸಿ ಗಳು ಬೆಂಗಳೂರು ಹಾಗೂ ಮಂಗಳೂರಿ ನಿಂದ ರಸ್ತೆಯ ಮೂಲಕ ಆಗಮಿಸಲಿ ದ್ದಾರೆ. ಹೋಟೆಲ್‌ನಲ್ಲಿನ ವಾಸ್ತವ್ಯ ಹಾಗೂ ಊಟದ ಬಿಲ್ಲನ್ನು ಕ್ವಾರಂಟೈನ್ ಗಳೇ ನೀಡಬೇಕಿದೆ.
ಕ್ವಾರಂಟೈನ್‌ನಲ್ಲಿರುವವರ ಆರೋಗ್ಯ ತಪಾಸಣೆಗಾಗಿ ಪ್ರತಿ ಹೋಟೆಲ್‌ನಲ್ಲೂ 3 ರೂಂಗಳನ್ನು ಆರೋಗ್ಯ ಸಿಬ್ಬಂದಿಗೆ ಮೀಸಲಿಡಲಾಗಿದೆ. ಥರ್ಮಲ್ ಸ್ಕ್ರೀನಿಂಗ್ ಮಾಡಿದ ಬಳಿಕ ಸೋಂಕಿನ ಲಕ್ಷಣ ಇರುವವರು ಹಾಗೂ ಇಲ್ಲದವರನ್ನು 2 ಗುಂಪಾಗಿ ವಿಂಗಡಿಸಲಾಗುತ್ತದೆ. ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. 14 ದಿನದಲ್ಲಿ 3 ಬಾರಿ ಪರೀಕ್ಷೆ ಮಾಡಲಾಗುತ್ತದೆ. ಲಕ್ಷಣ ಇಲ್ಲದವರನ್ನು ಹೋಟೆಲ್‌ಗಳಲ್ಲಿ ಕ್ವಾರಂಟೈನ್ ಮಾಡಿ 7 ದಿನದಲ್ಲಿ 2 ಬಾರಿ ಕೋವಿಡ್ ಪರೀಕ್ಷೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.