ಈ ಮಧ್ಯೆ ನಗರಸಭೆಯ ಎರಡನೆ ಅವಧಿಯ ಮೊದಲ ಸಾಮಾನ್ಯ ಸಭೆಯಲ್ಲಿ ಸರಕಾರದಿಂದ ಅನುಮತಿ ಪಡೆದು ನಗರಸಭೆಯೇ ಅನುದಾನ ಭರಿಸಿ ಭೂ ಸ್ವಾಧೀನ ಮಾಡಿ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸದಸ್ಯರಿಂದ ಆಗ್ರಹ ವ್ಯಕ್ತವಾಗಿದೆ.
Advertisement
ಚತುಷ್ಪಥ ರಸ್ತೆ13 ಕೋ.ರೂ. ವೆಚ್ಚದ ರೈಲ್ವೇ ಅಂಡರ್ ಪಾಸ್‌ಗೆ ಪೂರಕವಾಗಿ ವಾಹನ ಸಂಚಾರಕ್ಕೆ ಹೊಸದಾಗಿ ಯು ಆಕಾರದಲ್ಲಿ ಚತುಷ್ಪಥ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಒಂದು ಪಾರ್ಶ್ವದಲ್ಲಿ ದ್ವಿಪಥ ರಸ್ತೆ ಪೂರ್ಣಗೊಂಡಿದೆ. ಇನ್ನೊಂದು ಭಾಗದ ದ್ವಿಪಥ ರಸ್ತೆಯು ಅಪೂರ್ಣ ಸ್ಥಿತಿಯಲ್ಲಿದೆ. ಎರಡು ಭಾಗದಿಂದ ಕೆಲಸ ಆರಂಭವಾಗಿದ್ದರೂ ರಸ್ತೆಯ ಮಧ್ಯೆ 10.5 ಸೆಂಟ್ಸ್ ಜಾಗ ಖಾಸಗಿಯವರಿಗೆ ಸೇರಿದ್ದು ಆ ಜಮೀನು ಸ್ವಾಧೀನ ಆದ ಬಳಿಕವಷ್ಟೇ ಕಾಮಗಾರಿ ನಡೆಸಬೇಕಾದ ಕಾರಣ ಕಾಮಗಾರಿ ಅರ್ಧದಲ್ಲೇ ನಿಂತಿತ್ತು.
ಪ್ರಸ್ತುತ ಅಲ್ಲಿ ಸೆಂಟ್ಸ್‌ಗೆ 5 ಲಕ್ಷ ರೂ. ಮಾರುಕಟ್ಟೆ ಮೌಲ್ಯವಿದೆ ಎಂಬ ಬೇಡಿಕೆ ಇದ್ದು ಸರಕಾರದ ಮಾರುಕಟ್ಟೆ ದರ ಅಷ್ಟು ಇಲ್ಲ. ಸರಕಾರಿ ಮಾರುಕಟ್ಟೆಗಿಂತ ಹೆಚ್ಚಿನ ಮೊತ್ತ ಪಾವತಿಸುವ ಅಧಿಕಾರ ಯಾವುದೇ ಇಲಾಖೆಗಳಿಗೂ ಇಲ್ಲ. ಸರಕಾರಿ ಮೊತ್ತಕ್ಕೆ ಮಾಲಕರು ಒಪ್ಪಿಗೆ ನೀಡುವ ಬಗ್ಗೆ ಜೀವಂಧರ್ ಜೈನ್ ಅಧ್ಯಕ್ಷತೆಯ ಹಿಂದಿನ ಆಡಳಿತ ಭೂ ಮಾಲಕರ ಜತೆ ಚರ್ಚೆ ನಡೆಸಿತ್ತು. ಆಗ ಅವರು ಸಹಮತ ಭಾವ ವ್ಯಕ್ತಪಡಿಸಿದ್ದರೂ ಆ ಮಾತುಕತೆಯ ಮುಂದು ವರಿಸಲು ಸಾಧ್ಯವಾಗಲಿಲ್ಲ. ಜನಪ್ರತಿನಿಧಿಗಳ ಅಧಿಕಾರ ಅವಧಿ ಮುಗಿದಿರುವುದು ಇದಕ್ಕೆ ಕಾರಣ. 14 ತಿಂಗಳಿನಿಂದ ಅಧಿಕಾರಿಗಳ ಆಡಳಿತ ಇದ್ದು ಭೂ
ಸ್ವಾಧೀನ ಪ್ರಕ್ರಿಯೆ ಅರ್ಧದಲ್ಲೇ ನಿಂತು ಹೋಗಿತ್ತು.
Related Articles
ಸರಕಾರಿ ದರದಲ್ಲಿ ಭೂ ಸ್ವಾಧೀನ ಮಾಡುವ ಬಗ್ಗೆ ಭೂ ಮಾಲಕರ ಜತೆ ಹಿಂದೆ ಚರ್ಚೆ ನಡೆಸಲಾಗಿತ್ತು. ಅವರೊಂದಿಗೆ ಇನ್ನೊಮ್ಮೆ ಮಾತುಕತೆ ನಡೆಸಬೇಕು. ಬೇರೆ ಇಲಾಖೆಗಳು ಅನುದಾನ ನೀಡಲು ಸಾಧ್ಯವಿಲ್ಲದ ಕಾರಣ ನಗರಸಭೆಯು ಜಿಲ್ಲಾಧಿಕಾರಿಗಳ ಮೂಲಕ ಸರಕಾರದ ಒಪ್ಪಿಗೆ ಪಡೆದು ಭೂ ಸ್ವಾಧೀನಕ್ಕೆ ನಗರಸಭೆಯಿಂದಲೇ ಅನುದಾನ ಭರಿಸಬೇಕು. ಈಗಾಗಲೇ ರಸ್ತೆ ಅಪೂರ್ಣದ ಕಾರಣದಿಂದ ಅಲ್ಲಿ ಅಪಘಾತಗಳು ಸಂಭವಿಸುತ್ತಿದ್ದು ಭೂ ಸ್ವಾಧೀನ ಪ್ರಕ್ರಿಯೆ ಶೀಘ್ರ ಆಗಬೇಕು.
-ಜೀವಂಧರ್ ಜೈನ್, ಮಾಜಿ ಅಧ್ಯಕ್ಷರು, ನಗರಸಭೆ ಪುತ್ತೂರು
Advertisement
ರಸ್ತೆ ನಿರ್ಮಾಣಕ್ಕೆ ಭೂ ಸ್ವಾಧೀನದ ಜವಾಬ್ದಾರಿ ವಹಿಸುವವರು ಯಾರೆನ್ನುವ ಬಗ್ಗೆ ಇನ್ನೂ ಇತ್ಯರ್ಥ ಆಗಿಲ್ಲ. ಎಪಿಎಂಸಿ ಅಥವಾ ನಗರಸಭೆ ಭೂ ಸ್ವಾಧೀನದ ಮೊತ್ತ ಭರಿಸುವಂತೆ ಹಿಂದಿನ ಸಂಸದರೂ ನಿರ್ದೇಶಿಸಿದ್ದರೂ ಅದಕ್ಕೆ ಆ ಎರಡು ಇಲಾಖೆಗಳು ಒಪ್ಪಿಗೆ ಸೂಚಿಸಿಲ್ಲ