Advertisement

ಸಮಾಜದಲ್ಲಿ ಮಹಿಳೆಗೆ ಅತ್ಯಂತ ಗೌರವದ ಸ್ಥಾನವಿದೆ : ಪುಷ್ಪಾವತಿ. ಆರ್

12:14 PM Mar 10, 2022 | Team Udayavani |

ನೆಲಮಂಗಲ : ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನೆಲಮಂಗಲ ರಂಗಶಿಕ್ಷಣ ಕೇಂದ್ರ ಸಹಯೋಗದೊಂದಿಗೆ ಇಂದು ವಿಶ್ವ ಮಹಿಳಾ ದಿನಾಚರಣೆಯನ್ನು ನೆಲಮಂಗಲ ನಗರದ ರಂಗಶಿಕ್ಷಣ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

Advertisement

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಪುಷ್ಪಾವತಿ. ಆರ್.  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಮಾಜದಲ್ಲಿ ಮಹಿಳೆಗೆ ಅತ್ಯಂತ ಗೌರವದ ಸ್ಥಾನವಿದ್ದು ಮಹಿಳೆಯರಿಗೆ ಸರ್ಕಾರ ಹಲವಾರು ಸೌಲಭ್ಯಗಳನ್ನು ನೀಡಿದ್ದು ಮಹಿಳೆಯರು ಇಂದಿನ ಆಧುನಿಕ ಯುಗದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಮಹಿಳೆಯರು ತಮ್ಮ ಆತ್ಮರಕ್ಷಣೆಗಾಗಿ ಸಮರಕಲೆಯೊಂದಿಗೆ ಇನ್ನಿತರ ಆತ್ಮರಕ್ಷಣೆಯ ಕಲೆಗಳನ್ನು ಅಭ್ಯಸಿಸಬೇಕು ದೃತಿಗೆಡದೆ ಮಹಿಳೆಯರು ಮುನ್ನುಗ್ಗಿ ಸಂಕಷ್ಟದಲ್ಲಿರುವ ಮಹಿಳೆಯರನ್ನು ಹಾಗೂ ತಮ್ಮ ಆತ್ಮ ರಕ್ಷಣೆಗೆ ಮುಂದಾಗಬೇಕು ಎಂದರು,ಅಲ್ಲದೇ ಮಹಿಳೆಯರಿಗಾಗಿ ಸಹಾಯವಾಣಿಗಳನ್ನು ಮಹಿಳಾ ಮತ್ತು ಮಕ್ಕಳಅಭಿವೃದ್ಧಿಇಲಾಖೆ ತೆರೆದಿದ್ದು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು,

ರಂಗಭೂಮಿ ಮತ್ತು ನಿರ್ದೇಶನದಲ್ಲಿ ಅವಿರತ ಸೇವೆ ಸಲ್ಲಿಸಿದ ಡಾ || ಪುಷ್ಪಲತಾರವರಿಗೆ ಅಭಿನಂದಿಸಲಾಯಿತ್ತು ತಂದೆ ಜನ್ಮಕ್ಕೆ ಕಾರಣವಾದರೆ ತಾಯಿ ಕೊನೆಯವರೆಗೂ ಪೋಷಿಸುವವಳು ಹೆಣ್ಣಿಗೆ ಮಾತೃ ಸ್ವರೂಪದ ಗೌರವಾನ್ವಿತ ಸ್ಥಾನವಿದೆ, ಇಂದು ಸಮಾಜದಲ್ಲಿ ಮಹಿಳೆಯರಿಂದ ಅಪಾರವಾದ ಕೊಡುಗೆಗಳಿದ್ದು ಗ್ರಾಮೀಣ ಭಾಗದಲ್ಲಿ ಜಾನಪದ, ಸಾಹಿತ್ಯ,ಸಂಸ್ಕೃತಿ, ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ, ಸರ್ಕಾರಗಳು ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದು ಆದರೆ ಮಹಿಳೆಯರಿಗಾಗಿ ಮೀಸಲಿರುವ ಹಲವಾರು ಯೋಜನೆಗಳು ಸೂಕ್ತ ಫಲಾನುಭವಿಗಳಿಗೆ ತಲುಪುತ್ತಿಲ್ಲವೆಂಬುದೇ ವಿಷಾದಕರ ಸಂಗತಿ, ಅಲ್ಲದೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಶೇಕಡ 50ರಷ್ಟು ಮೀಸಲಾತಿ ಕೊಟ್ಟಿದ್ದು ಮಹಿಳೆಯರು ಪ್ರಗತಿಯನ್ನು ಸಾಧಿಸುತ್ತಿದ್ದಾರೆ.

ಇದನ್ನೂ ಓದಿ : ಗೋವಾಕ್ಕೆ ಶಾಸಕರ ರಕ್ಷಣೆಗೆ ಸೂತ್ರಧಾರರನ್ನು ಕಳಿಸಿದ್ದಾರಲ್ಲ : ಎಚ್ ಡಿಕೆ ವ್ಯಂಗ್ಯ

Advertisement

ಮಹಿಳೆಯರು ಇಂದು ಎಲ್ಲಾ ಕ್ಷೇತ್ರದಲ್ಲೂ ಮೇಲುಗೈಯನ್ನು ಸಾಧಿಸುತ್ತಿರುವುದು ಸಂತಸದ ವಿಚಾರ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಬಿ. ಆರ್.ಪ್ರದೀಪ್ ಕುಮಾರ್ ಹರ್ಷವನ್ನು ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಪ್ರತಿನಿಧಿ ಮಂಜುಳ ಸಿದ್ದರಾಜು, ಕ, ಸಾ, ಪ,ನಿಕಟಪೂರ್ವ ಅಧ್ಯಕ್ಷ ಕೇಶವಮೂರ್ತಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಬಿ. ಪ್ರಕಾಶ್ ಮೂರ್ತಿ, ಸಿ. ಮಂಜುನಾಥ್, ಕ,ಸಾ, ಪ,ಕಾರ್ಯಕಾರಿ ಸಮಿತಿ ಪದಾಧಿಕಾರಿಗಳಾದ ಸಾಹಿತಿ ಆನಂದ್. ವೈ.ಮೌರ್ಯ, ಜನಾರ್ಧನ್, ಅಂಜನಾದ್ರಿ ಕಲಾನಿಕೇತನ ಟ್ರಸ್ಟ್ ಅಧ್ಯಕ್ಷ ದಿನೇಶ್. ಹೆಚ್, ಕವಿಗಳಾದ ಎನ್,ಆರ್, ನಾಗರಾಜ್, ಡಾ,ಶಿವಲಿಂಗಯ್ಯ, ಕವಿತ್ರಿ ಯಶೋಧ. ಆರ್, ಯುವ ಮುಖಂಡರಾದ ಕೇಶವಮೂರ್ತಿ, ಸೇರಿದಂತೆ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ವಿಶೇಷವಾಗಿ ಸೋದರ ಭಾವನೆಯೊಂದಿಗೆ ಗುಲಾಬಿ ಹೂಗಳನ್ನು ನೀಡುವುದರ ಮೂಲಕ ಸಿಹಿ ಹಂಚಿ ಸಂಭ್ರಮಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next