ಚಂಡೀಗಢ: ಮಾಜಿ ಸಚಿವರು ಮತ್ತು ಮಾಜಿ ಶಾಸಕರು ಸೇರಿ ಒಟ್ಟು 184 ಗಣ್ಯರಿಗೆ ನೀಡಲಾಗಿದ್ದ ರಕ್ಷಣೆಯನ್ನು ಪಂಜಾಬ್ ಸರ್ಕಾರ ಶನಿವಾರ ಹಿಂಪಡೆದು ಆದೇಶಿಸಿದೆ. ಪ್ರಸ್ತುತ ಬೆದರಿಕೆ ಮೌಲ್ಯಮಾಪನದ ಆಧಾರದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಮಾಜಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಛನ್ನಿ ಅವರ ಕುಟುಂಬಕ್ಕೆ ನೀಡಲಾಗಿದ್ದ ರಕ್ಷಣೆಯನ್ನೂ ಹಿಂಪಡೆಯಲಾಗಿದೆ. ಮಾಜಿ ಸಚಿವರಾದ ಬೀಬಿ ಜಾಗಿರ್ ಕೌರ್, ಮದನ್ ಮೋಹನ್ ಮಿತ್ತಲ್, ಸುರ್ಜಿತ್ ಕುಮಾರ್
ರಖ್ರಾ, ಸೂಚಾ ಸಿಂಗ್ ಚೋತೇಪುರ್, ಗುಲ್ಜರ್ ಸಿಂಗ್ ಪೊಲೀಸ್ ರಕ್ಷಣೆ ಕಳೆದುಕೊಂಡ ಪ್ರಮುಖರು.
ಎಎಪಿ ಸರ್ಕಾರವು ಅಧಿಕಾರಕ್ಕೆ ಬಂದ ಮಾರನೇ ದಿನವೇ ಒಟ್ಟು 122 ಗಣ್ಯರಿಗೆ ನೀಡಲಾಗಿದ್ದ ರಕ್ಷಣೆಯನ್ನು ಹಿಂಪಡೆದಿತ್ತು.
ಇದನ್ನೂ ಓದಿ:ಸಮಗ್ರ ಕೃಷಿ ಪದ್ಧತಿ ಅಳವಡಿಸಿ ಸ್ವಾವಲಂಬಿಗಳಾಗಿ; ಬಿ.ಸಿ. ಪಾಟೀಲ್
ಮತ್ತೊಂದೆಡೆ, ಪಂಜಾಬ್ ವಿದ್ಯುತ್ ಇಲಾಖೆಯು 1,600 ಅಸಿಸ್ಟಂಟ್ ಲೈನ್‌ಮನ್‌ಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಪ್ರಕಟಿಸಿದೆ. ಈ ಕುರಿತಂತೆ, ಸಾರ್ವಜನಿಕರಿಂದ ಏ. 30ರ ನಂತರ ಅರ್ಜಿಗಳನ್ನು ಆಹ್ವಾನಿಸುವುದಾಗಿ ಇಲಾಖೆ ತಿಳಿಸಿದೆ.