ರಂಗಪಟ್ಟಣ: ರಾಜ್ಯದ ರೈತರ ಬಗ್ಗೆಯೂ ನಟ ಪುನೀತ್ ರಾಜ್‌ಕುಮಾರ್ ಕಾಳಜಿ ವಹಿಸಿದ್ದರು ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಕೆ.ಎಸ್ .ನಂಜುಂಡೇಗೌಡ ತಿಳಿಸಿದರು. ರಾಜ್ಯದ ಹೈನುಗಾರಿಕೆಯಲ್ಲಿರುವ ರೈತರ ಪರವಾಗಿ ನಂದಿನಿ ಹಾಲಿನ ಅಂಬಾಸಿಡರ್ ಆಗಿ ಉಚಿತ ಕಾರ್ಯ ನಿರ್ವಹಣೆ ಮಾಡಿದ್ದು ರೈತರ ಮೇಲಿನ ಕಾಳಜಿ ಎಂದು ಹೇಳಿದರು.
ಮಂಡ್ಯ ಜಿಲ್ಲೆಯಲ್ಲಿ ಪ್ರಥಮವಾಗಿ ರೈತರ ಆತ್ಮಹತ್ಯೆ ನಡೆದ ಸಂದರ್ಭದಲ್ಲಿ ಶ್ರೀರಂಗಪಟ್ಟಣಕ್ಕೆ ದೊಡ್ಡಮನೆ ಚಲನಚಿತ್ರ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಪಿಎಸ್‌ಎಸ್‌ಕೆ ಕಾರ್ಖಾನೆಗೆ ಚಿತ್ರೀಕರಣಕ್ಕೆ ಆಗಮಿಸಿದ ವೇಳೆ ನಮ್ಮನ್ನು ಭೇಟಿ ಮಾಡಿದರು.
ಇದನ್ನೂ ಓದಿ:- ಅಪ್ಪು ಅಂತಿಮ ರ‍್ಶನದಲ್ಲಿ ನಟ ಬಾಲಕೃಷ್ಣ ಮತ್ತು ನಟ ಪ್ರಭುದೇವ
ಈ ವೇಳೆ ಚಿನ್ನೇನಹಳ್ಳಿ, ಸಬ್ಬನಕುಪ್ಪೆ, ಗಾಣದ ಹೊಸೂರು ಗ್ರಾಮಗಳಲ್ಲಿ ರಾಜ್ಯದಲ್ಲೇ ಮೊದಲು ಆತ್ಮಹತ್ಯೆಗಳು ನಡೆದಿದ್ದವು. ರೈತರ ಮನೆಗಳಿಗೆ ಭೇಟಿ ನೀಡಿ ಅವರಿಗೆ ಕೈಲಾದ ನೆರವು ನೀಡಿದ್ದರು. ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ಬೇಡ.
ನಿಮ್ಮ ಆಶ್ರಯದಲ್ಲಿ ನಿಮ್ಮ ಕುಟುಂಬಗಳು ಇರುತ್ತವೆ ರೈತರು ಆತ್ಮಹತ್ಯೆ ಮಾಡಿಕೊಂಡರೆ ಅವರ ಕುಟುಂಬಗಳ ಗತಿ ಏನು ಎಂದು ಸಾಂತ್ವನ ಹೇಳಿದ್ದರು. ಅಲ್ಲದೇ, ನಮ್ಮ ಕುಟುಂಬ ರೈತರ ಪರ ಇರುತ್ತೆ ಎಂದು ಹೇಳಿದರು. ಇದೀಗ ಅವರೇ ಇಹಲೋಕ ತೆರಳಿದ್ದು ಬಾರಿ ದುಃಖಕ್ಕೆ ಕಾರಣವಾಗಿದೆ ಎಂದು ಹೇಳಿದರು.