Advertisement
ಪ್ರಕರಣದಲ್ಲಿ ಮೂವರು ತಲೆಮರೆಸಿಕೊಂಡವರು ಸೇರಿ ಒಟ್ಟು 11 ಮಂದಿ ಆರೋಪಿಗಳಿಗೆ ಸೇರಿದ ಪುಣೆಯ ಕೊಂಡ್ವಾ ಪ್ರದೇಶದಲ್ಲಿರುವ ಆಸ್ತಿಗಳನ್ನು ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯ ಸೆಕ್ಷನ್ 25ರ ಅಡಿ ಎನ್‌ಐಎ ವಶಪಡಿಸಿಕೊಂಡಿದೆ. ಭಯೋತ್ಪಾದನೆ ಕೃತ್ಯಗಳಿಗಾಗಿ ತರಬೇತಿ ನೀಡಲು, ಯೋಜನೆ ರೂಪಿಸಲು ಮತ್ತು ಐಇಡಿ ತಯಾರಿಸಲು ಈ ಸ್ಥಳಗಳನ್ನು ಬಳಸಿಕೊಳ್ಳಲಾಗಿತ್ತು ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ. ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ದೇಶದ ವಿವಿಧ ಸ್ಥಳಗಳಲ್ಲಿ ಭಯೋತ್ಪಾದನೆ ಕೃತ್ಯಗಳನ್ನು ನಡೆಸಲು ಐಸಿಸ್ ಉಗ್ರರು ಯೋಜಿಸಿದ್ದರು. ಅಲ್ಲದೇ ಇದಕ್ಕಾಗಿ ಹಣ ಕೂಡಿಸಲು ಡಕಾಯಿತಿ ಮತ್ತು ಕಳ್ಳತನ ಕೃತ್ಯಗಳಲ್ಲಿ ಉಗ್ರರು ತೊಡಗಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಹೊಸದಿಲ್ಲಿ: ದೇಶವಿರೋಧಿ ಚಟುವಟಿಕೆ ಆರೋಪಕ್ಕೆ ಸಂಬಂಧಿಸಿದಂತೆ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಮತ್ತೂಬ್ಬ ಆರೋಪಿಯ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪೂರಕ ಚಾರ್ಜ್ ಶೀಟ್ ಸಲ್ಲಿಸಿದೆ. ಬಿಹಾರದ ಪಟ್ನಾದಲ್ಲಿ ಕಾನೂನು ಬಾಹಿರ ಮತ್ತು ದೇಶವಿರೋಧಿ ಚಟುವಟಿಕೆ ನಡೆಸಿದ್ದ ಪ್ರಕರಣವಿದು. ಈ ವರೆಗೆ ಒಟ್ಟು 17 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಪಿಎಫ್ಐನ ರಾಜ್ಯ ಉಪಾಧ್ಯಕ್ಷ ಮೊಹದ್ ರಿಯಾಸ್ ಮೊರೈಫ್ ಅಲಿಯಾಸ್ ಬಬುÉ ವಿರುದ್ಧ ಐಪಿಸಿ ಹಾಗೂ ಯುಎಪಿಎ ಕಾನೂನುಗಳ ವಿವಿಧ ಸೆಕ್ಷನ್‌ಗಳ ಅನ್ವಯ ಪೂರಕ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಈತ ಪಿಎಫ್ಐ ಅನ್ನು ನಿಷೇಧಿಸಿದ ಬಳಿಕವೂ ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿ, ಮುಸ್ಲಿಂ ಯುವಕರಿಗೆ ದೇಶದ ವಿರುದ್ಧವೇ ಪಿತೂರಿ ರೂಪಿಸಲು ತರಬೇತಿ ನೀಡುತ್ತಿದ್ದ ಎಂದು ಎನ್‌ಐಎ ಆರೋಪಿಸಿದೆ.