Advertisement

ಜನತೆಯ ಆರೋಗ್ಯ ರಕ್ಷಣೆಗೆ ಪ್ರಾಮಾಣಿಕ ಯತ್ನ

03:37 PM Aug 21, 2020 | Suhan S |

ಚಿಕ್ಕೋಡಿ: ನಿಪ್ಪಾಣಿ ಕ್ಷೇತ್ರದ ಜನಗಳೆಲ್ಲ ನನ್ನ ಮಕ್ಕಳೆಂದು ಭಾವಿಸಿ, ಅವರ ಆರೋಗ್ಯಕ್ಕೆ ಒತ್ತು ನೀಡುತ್ತ, ಅವರ ಕಾಳಜಿ ವಹಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಲೇ ಇದ್ದೇನೆ. ಅವರಿಗಾಗಿ ಹೊಸ ತಂತ್ರಜ್ಞಾನಗಳನ್ನು ಬಳಸಿ, ಅತ್ಯುತ್ತಮ ಜೀವನಶೆ„ಲಿ ನೀಡುವ ಪಣ ತೊಟ್ಟಿದ್ದೇನೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

Advertisement

ನಿಪ್ಪಾಣಿ ನಗರಸಭೆಯಲ್ಲಿ ತಾಲೂಕು ಆಡಳಿತ, ನಗರಸಭೆ, ಪೊಲೀಸ್‌, ಶಿಕ್ಷಣ ಇಲಾಖೆ, ವೈದ್ಯಕೀಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪಲ್ಸ್‌ ಆಕ್ಸಿಮೀಟರ್‌ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ನಗರದ 31 ವಾರ್ಡ್‌ಗಳಿಗಾಗಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ 31 ಆಕ್ಸಿ ಮೀಟರ್‌ಗಳನ್ನು ವಿತರಿಸಲಾಗಿದೆ. ಈ ಮೂಲಕ ನಾಗರಿಕರ ತಪಾಸಣೆ ನಡೆಸಿ ಆಕ್ಸಿಜನ್‌ ಕಡಿಮೆ ಇದ್ದವರನ್ನು ಗುರುತಿಸಿ ಇದೆ ಆ.24ರಿಂದ ಸಮೀಪದ ಶಿವಶಂಕರ ಜೊಲ್ಲೆ ಪಬ್ಲಿಕ್‌ ಸ್ಕೂಲ್‌ನಲ್ಲಿ ಆರಂಭಿಸಲಾಗುವ 40 ಹಾಸಿಗೆಗಳುಳ್ಳ ಕೋವಿಡ್‌ ಸೆಂಟರ್‌ನಲ್ಲಿ ಉಪಚಾರ ನೀಡಲಾಗುವುದು ಎಂದರು.

ಕೋವಿಡ್‌ ಸೋಂಕನ್ನು ಹೋಗಲಾಡಿಸುವುದು ಪ್ರತಿಯೊಬ್ಬರ ಕೈಯಲ್ಲಿದೆ. ಎಲ್ಲರೂ ಮಾಸ್ಕ್ ಹಾಗೂ ಸ್ಯಾನಿಟೈಜರ್‌ ಬಳಸುತ್ತ, ಅಂತರ ಕಾಯ್ದುಕೊಳ್ಳಲು ಮರೆಯಬೇಡಿ ಎಂದು ಕಿವಿಮಾತು ಹೇಳಿದರು. ಸಂಸದ ಅಣ್ಣಾಸಾಹೇಬ ಜೊಲ್ಲೆ, ಪೌರಾಯುಕ್ತ ಮಹಾವೀರ ಬೊರಣ್ಣವರ, ವೈದ್ಯಾಧಿಕಾರಿ ಡಾ. ಸೀಮಾ ಗುಂಜಾಳೆ, ಬಿಜೆಪಿ ನಗರ ಘಟಕ ಅಧ್ಯಕ್ಷ ಪ್ರಣವ ಮಾನವಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next