Advertisement

ಪುದು ಗ್ರಾ.ಪಂ.: ಹಕ್ಕುಪತ್ರ, ಸವಲತ್ತು ವಿತರಣೆ 

03:39 PM Nov 20, 2017 | Team Udayavani |

ಬಂಟ್ವಾಳ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಸುಭದ್ರ ಮತ್ತು ಸುಭಿಕ್ಷೆಯ ಜನಪರವಾದ ಆಡಳಿತ ನಡೆಸುವುದರ ಜತೆಗೆ ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಿದ ಎಲ್ಲ ಭರವಸೆ ಪೂರೈಸುವಲ್ಲಿ ಸಫಲವಾಗಿದೆ ಎಂದು ಆಹಾರ ಖಾತೆ ಸಚಿವ ಯು.ಟಿ. ಖಾದರ್‌ ಹೇಳಿದರು.

Advertisement

ಅವರು ನ. 19ರಂದು ಫರಂಗಿಪೇಟೆಯಲ್ಲಿ ಪುದು ಗ್ರಾ.ಪಂ. ವ್ಯಾಪ್ತಿಯ ಫಲಾನುಭವಿಗಳಿಗೆ ಹಕ್ಕುಪತ್ರ ಮತ್ತು ವಿವಿಧ ಸವಲತ್ತುಗಳನ್ನು ವಿತರಿಸಿ ಮಾತನಾಡಿದರು. ಸಮಬಾಳು, ಸಮಪಾಲು ಎನ್ನುವ ಧ್ಯೇಯವಾಕ್ಯದೊಂದಿಗೆ ನಿವೇಶನರಹಿತರಿಗೆ ಹಕ್ಕುಪತ್ರ ನೀಡಿ ಸಮಾಜದ ಕಟ್ಟಕಡೆಯ, ಶೋಷಿತ, ದುರ್ಬಲರು ಮತ್ತು ದಲಿತರು ನೆಮ್ಮದಿಯ ಜೀವನ ನಡೆಸುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದಾರೆ ಎಂದರು.

ಪುದು ಗ್ರಾ.ಪಂ. ಉಪಾಧ್ಯಕ್ಷ ಹಾಶೀರ್‌ ಪೆರಿಮಾರ್‌ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿ.ಪಂ. ಸದಸ್ಯರಾದ ರವೀಂದ್ರ ಕಂಬಳಿ, ಚಂದ್ರಪ್ರಕಾಶ್‌ ಶೆಟ್ಟಿ ತುಂಬೆ, ತಾ.ಪಂ. ಸದಸ್ಯೆ ಪದ್ಮಶ್ರೀ, ಗ್ರಾ.ಪಂ. ಸದಸ್ಯರಾದ ರಮ್ಲಾನ್‌ ಮಾರಿಪಳ್ಳ, ಜಾಹೀರ್‌, ಲಕ್ಷ್ಮೀ ಲಿಡಿಯೋ ಪಿಂಟೋ, ಜಾನಕಿ, ತಾ.ಪಂ. ಮಾಜಿ ಸದಸ್ಯ ಆಶಿಫ್‌ ಇಕ್ಬಾಲ್‌, ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋನಪ್ಪ ಮಜಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಹನೀಫ್‌, ಮಾಜಿ ಉಪಾಧ್ಯಕ್ಷ ಮಹಮ್ಮದ್‌ ಭಾವ, ಹಿರಿಯರಾದ ಭಾಸ್ಕರ್‌ ರೈ, ಸಾಹಿತಿ ಮಹಮ್ಮದ್‌ ಮಾರಿಪಳ್ಳ, ಪಿಡಿಒ ಚಂದ್ರಾವತಿ, ಕಂದಾಯ ನಿರೀಕ್ಷಕ ರಾಮು, ಗ್ರಾಮಕರಣಿಕ ಪ್ರದೀಪ್‌ ಮತ್ತಿತರರು ಉಪಸ್ಥಿತರಿದ್ದರು.

ಬಂಟ್ವಾಳ ತಹಶೀಲ್ದಾರ್‌ ಪುರಂದರ ಹೆಗ್ಡೆ ಪ್ರಸ್ತಾವನೆ ನೀಡಿದರು. ಜಿ.ಪಂ. ಮಾಜಿ ಸದಸ್ಯ ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಉಮ್ಮರ್‌ ಫಾರೂಕ್‌ ಸ್ವಾಗತಿಸಿ, ರಫೀಕ್‌ ಪೆರಿಮಾರ್‌ ವಂದಿಸಿದರು. ಮಹಮ್ಮದ್‌ ಗಜಲ್‌ ಕಾರ್ಯಕ್ರಮ ನಿರೂಪಿಸಿದರು. 150 ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು.

ಸವಲತ್ತು ತಲುಪಿಸಲು ಸಹಕರಿಸಿ
ಅನ್ನ ಭಾಗ್ಯದ ಮೂಲಕ ಬಡವರು ಸ್ವಾಭಿಮಾನದಿಂದ ಬದುಕುವಂತಾಗಿದೆ. ಗ್ರಾ.ಪಂಗಳಿಗೆ ಸರಕಾರ ನೀಡುವ ಎಲ್ಲ ಸವಲತ್ತುಗಳು ಜನಸಾಮಾನ್ಯರಿಗೆ ತಲುಪಲು ಪಂಚಾಯತ್‌ ಸದಸ್ಯರು ಮುತುವರ್ಜಿ ವಹಿಸಬೇಕು. ಸಕಾರಾತ್ಮಕ ಚಿಂತನೆಯ ಮೂಲಕ ಸಮಾಜ ಕಟ್ಟುವ ಕೆಲಸ ಮಾಡಿ ನಕಾರಾತ್ಮಕ ಚಿಂತನೆಯ ಮೂಲಕ ಸಮಾಜ ಒಡೆಯುವ ಕೆಲಸ ಯಾರೂ ಮಾಡಬಾರದು. 
ಯು.ಟಿ. ಖಾದರ್‌,
ಆಹಾರ, ನಾಗರಿಕ ಪೂರೈಕೆ ಸಚಿವ 

Advertisement
Advertisement

Udayavani is now on Telegram. Click here to join our channel and stay updated with the latest news.

Next