Advertisement

ಪಿಯು: ಮಿಂಚಿದ ಟಿಟಿ ತಾರೆ ಅರ್ಚನಾ

06:00 AM May 02, 2018 | |

ಬೆಂಗಳೂರು: ಟೇಬಲ್‌ ಟೆನಿಸ್‌ ಸ್ಪರ್ಧೆಯಲ್ಲಿ ಕಳೆದೊಂದು ವರ್ಷ 10 ಚಿನ್ನ, ಆರು ಬೆಳ್ಳಿ ಮತ್ತು ಏಳು ಕಂಚಿನ ಪದಕ ಗೆದ್ದಿರುವ ಅರ್ಚನಾ ಕಾಮತ್‌ ದ್ವಿತೀಯ ಪಿಯು ಪರೀಕ್ಷೆಯ ಕಲಾ ವಿಭಾಗದಲ್ಲಿ ಶೇಕಡಾ 97 ಅಂಕ ಪಡೆದು ಮಿಂಚಿದ್ದಾರೆ. 

Advertisement

ಕ್ರೀಡೆ ಮತ್ತು ಶಿಕ್ಷಣಕ್ಕೆ ಸಮನಾದ ಆದ್ಯತೆ ನೀಡಿದ 17ರ ಹರೆಯದ ಅರ್ಚನಾ ಆ್ಯತ್ಲೀಟ್‌ಗಳ ಸಾಲಿನಲ್ಲಿ ಗುರುತಿಸಲ್ಪಡುವ ಅಸಾಧಾರಣ ಪ್ರತಿಭೆಯಾಗಿದ್ದಾರೆ. ಸೈಕಾಲಜಿ ಯಲ್ಲಿ ನೂರಕ್ಕೆ ನೂರು ಅಂಕ ಪಡೆದ ಅವರು 600ರಲ್ಲಿ 582 ಅಂಕ ಗಳಿಸಿದ್ದಾರೆ. ಎಸ್‌ಎಸ್‌ಎಲ್‌ಸಿಯಲ್ಲಿ ಅವರು 625ರಲ್ಲಿ 617 (ಶೇ. 98.72) ಅಂಕ ಗಳಿಸಿದ್ದರು. 

ಅವರು ಕಾಲೇಜಿಗೆ ಕೇವಲ ಒಂದು ದಿನ ಹೋಗಿರುವುದು ಬಲುದೊಡ್ಡ ಆಶ್ಚರ್ಯವಾಗಿದೆ. ಶೈಕ್ಷಣಿಕ ವರ್ಷದ ಉಳಿದ ಸಮಯದಲ್ಲಿ ಅವರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಬ್ಯುಸಿಯಾಗಿದ್ದರು.  2017ರ ಎಪ್ರಿಲ್‌ನಿಂದ 2018ರ ಮಾರ್ಚ್‌ವರೆಗೆ ಅರ್ಚನಾ 7 ರಾಷ್ಟ್ರೀಯ ಮತ್ತು 14 ಅಂತಾರಾಷ್ಟ್ರೀಯ ಕೂಟದಲ್ಲಿ ಭಾಗವಹಿಸಿದ್ದು 23 ಪದಕ ಗೆದ್ದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next