Advertisement

JPC ಅವಧಿ ವಿಸ್ತರಣೆ: ವಕ್ಫ್ ಮಸೂದೆ ಮಂಡನೆ ಮುಂದಿನ ವರ್ಷಕ್ಕೆ?

11:33 PM Nov 28, 2024 | Team Udayavani |

ನವದೆಹಲಿ: ವಕ್ಫ್ ತಿದ್ದುಪಡಿ ವಿಧೇಯಕ ಪರಿಶೀಲ­ನೆಗಾಗಿ ರಚಿಸಲಾಗಿರುವ ಸಂಸತ್‌ ಜಂಟಿ ಸಮಿತಿಯ ಅವಧಿಯನ್ನು(JPC) ವಿಸ್ತರಿಸಲಾಗಿದೆ. ಈ ಬಗ್ಗೆ ಸಮಿತಿ ಅಧ್ಯಕ್ಷ ಬಿಜೆಪಿ ಸಂಸದ ಜಗದಂಬಿಕಾ ಪಾಲ್‌ ಗುರುವಾರ ಲೋಕಸಭೆಯಲ್ಲಿ ಗೊತ್ತುವಳಿ ಮಂಡಿಸಿ­ದ್ದಾರೆ. ಅದನ್ನು ಧ್ವನಿಮತದಿಂದ ಅಂಗೀಕಾರಿಸಲಾ­ಯಿತು.

Advertisement

ಈ ಹಿನ್ನೆಲೆಯಲ್ಲಿ ವಿಧೇಯಕನ್ನು ಮುಂದಿನ ವರ್ಷದ ಫೆಬ್ರವರಿಯಲ್ಲಿ ನಡೆಯಲಿ­ರುವ ಬಜೆಟ್‌ ಅಧಿವೇಶನದಲ್ಲಿ ಮಂಡಿಸಲಾಗುತ್ತದೆ ಎನ್ನಲಾಗಿದೆ. ದೆಹಲಿಯಲ್ಲಿ ನಡೆದಿದ್ದ ಜೆಪಿಸಿ ಸಭೆಯಲ್ಲಿ ಸಮಿ­ತಿಯ ಅವಧಿಯನ್ನು ವಿಸ್ತರಿಸುವ ಬಗ್ಗೆ ಆಡಳಿತ ಮತ್ತು ವಿಪಕ್ಷಗಳ ಸದಸ್ಯರ ನಡುವೆ ಒಮ್ಮತಾ­ಭಿಪ್ರಾಯ ಉಂಟಾಗಿತ್ತು. ಸಮಿತಿಯ ಅವಧಿ ನ.29ಕ್ಕೆ ಮುಕ್ತಾಯ­ವಾಗ­ಬೇಕಾಗಿತ್ತು. ಆ.8ರಂದು ಸಮಿತಿಯನ್ನು ರಚಿಸಿ ವಿವಾದಾತ್ಮಕ ವಿಧೇಯಕ ಪರಿಶೀಲನೆಗೆ ಅದಕ್ಕೆ ಒಪ್ಪಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next