Advertisement

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌

12:10 AM Nov 27, 2024 | Team Udayavani |

ಮಂಗಳೂರು: ದೇಶದ ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ. ಸಂವಿಧಾನದ ಮೂಲಕವೇ ಭಾರತದ ಹೊಸ ಶಕೆ ಮೂಡಿಬಂದಿದ್ದು, ಜಗತ್ತು ಗುರುತಿಸಲು ಬಲ ನೀಡಿತು ಎಂದು ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್‌ ಹೇಳಿದರು.

Advertisement

ದ.ಕ. ಜಿಲ್ಲಾಡಳಿತ, ಜಿ. ಪಂ., ಮಂಗಳೂರು ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಉರ್ವಸ್ಟೋರ್‌ ಡಾ| ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಮಂಗಳವಾರ ಆಯೋಜಿಸಲಾದ “ಭಾರತದ ಸಂವಿ ಧಾನ ದಿನಾಚರಣೆ’ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂವಿಧಾನ ನೀಡಿದ ಅಂಬೇಡ್ಕರ್‌ ಅವರಿಗೆ ನಾವು ಎಷ್ಟು ಗೌರವ ನೀಡಿದ್ದೇವೆ ಎಂಬ ಬಗ್ಗೆ ಈಗ ಪರಾಮರ್ಶೆ ನಡೆಸಬೇಕಾಗಿದೆ. ಅವರು ಚುನಾವಣೆಗೆ ನಿಂತಾಗ ಎಲ್ಲರೂ ಅವರನ್ನು ಬೆಂಬಲಿಸಬೇಕಾಗಿತ್ತು. ಆದರೆ ಅಂದಿನ ಕಾಲದ ರಾಜಕೀಯ ಸ್ಥಿತಿಯಿಂದ ಅವರು ಸೋಲು ಎದುರಿಸಬೇಕಾಯಿತು. ಸಂವಿಧಾನವನ್ನು ಕೊಡುಗೆ ಕೊಟ್ಟವರ ಸ್ಮರಣೆ ನಮ್ಮ ಆದ್ಯ ಕರ್ತವ್ಯ ಎಂದರು.

ಸಂವಿಧಾನ ಪಾಲನೆ ನಮ್ಮ ಕರ್ತವ್ಯವಿಧಾನ ಪರಿಷತ್‌ ಸದಸ್ಯ ಐವನ್‌ಡಿ’ಸೋಜಾ ಮಾತನಾಡಿ, ಸಂವಿಧಾನದ ಅಂಶಗಳನ್ನು ಚಾಚೂ ತಪ್ಪದೆ ಪಾಲಿಸು ವುದು ನಮ್ಮ ಕರ್ತವ್ಯ ಎಂದರು.

ಶ್ರೀ ಗೋಕರ್ಣನಾಥ ಪಿಯು ಕಾಲೇಜಿನ ಪ್ರಾಂಶುಪಾಲ ರಘುರಾಜ್‌ ಕದ್ರಿ, ನಾರಾಯಣ ಗುರು ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ, ಮಂಗಳೂರು ವಿ.ವಿ. ಕಾಲೇಜಿನ ಉಪನ್ಯಾಸಕ ರಘು ಧರ್ಮಸೇನ ವಿಶೇಷ ಉಪನ್ಯಾಸ ನೀಡಿದರು.

Advertisement

ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿ ಲನ್‌, ಜಿ.ಪಂ. ಸಿಇಒ ಡಾ| ಆನಂದ್‌ ಕೆ., ಮಂಗಳೂರು ಪಾಲಿಕೆ ಆಯುಕ್ತ ಆನಂದ್‌ ಸಿ.ಎಲ್‌., ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಡಾ| ಬಿ.ಎಸ್‌. ಹೇಮಲತಾ, ಸಹಾಯಕ ನಿರ್ದೇ ಶಕ ಸುರೇಶ್‌ ಅಡಿಗ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ “ಸಂವಿಧಾನ ಪಾಠ’
ವಿದ್ಯಾರ್ಥಿಗಳ ಜತೆಗೆ ಸಂವಾದ ನಡೆಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರು ಸಂವಿಧಾನದ ವಿಚಾರದ ಬಗ್ಗೆ ಮನಮುಟ್ಟುವ ಹಾಗೆ ಮಾತನಾಡಿರುವುದು ಗಮನ ಸೆಳೆಯಿತು. ಇತರ ದೇಶ ಹಾಗೂ ಭಾರತದ ನಡುವಿನ ವ್ಯತ್ಯಾಸ, ನಮ್ಮ ಸಂವಿಧಾನದ ವೈಶಿಷ್ಟ್ಯದ ಬಗ್ಗೆ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಅವರು ಪ್ರಸ್ತುತಪಡಿಸಿದರು. “ಸಂವಿಧಾನದಲ್ಲಿ ತಿಳಿಸಿರುವ ಪ್ರಕಾರ ನಾವು ಅವಕಾಶವನ್ನು ಬಳಸಿಕೊಂಡು ಮುನ್ನಡೆಯಬೇಕು. ಆ ಸಂದರ್ಭ ಬೇರೆಯವರ ಅವಕಾಶವನ್ನು ನಿರಾಕರಿಸಬಾರದು. ಭಾರತದಲ್ಲಿ ಸಂವಿಧಾನ ಬರುವ ಮುನ್ನ ಎಲ್ಲರಿಗೂ ಸಮಾನತೆಯ ಅವಕಾಶ ಇರಲಿಲ್ಲ. ಅಮೆರಿಕದಂತಹ ದೇಶದಲ್ಲಿ ಸಂವಿಧಾನ ಬಂದ ಮೇಲೆಯೂ ಹಲವು ವರ್ಷದವರೆಗೆ ಮತದಾನ ಹಕ್ಕು ಎಲ್ಲರಿಗೂ ಸಿಕ್ಕಿರಲಿಲ್ಲ. ಆದರೆ ಭಾರತದಲ್ಲಿ ಮತದಾನ ಹಕ್ಕು ಹಾಗೂ ಅದರ ಮೌಲ್ಯ ಎಲ್ಲರಿಗೂ ಸಮಾನವಾಗಿ ಆರಂಭದಲ್ಲಿಯೇ ದೊರೆಕಿದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next