ಕಾಮಗಾರಿ ಮತ್ತು ಫೀವರ್ ಕ್ಲಿನಿಕ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಸಾರ್ವಜನಿಕರ ಸಹಕಾರದಿಂದ ಕೋವಿಡ್ ಹಾವಳಿ ತಡೆಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
Advertisement
ತ್ಯಾಮಗೊಂಡ್ಲು ಹೋಬಳಿಯಲ್ಲಿ ಲಾಕ್‌ಡೌನ್ ತುಂಬಾ ಪರಿಣಾಮಕಾರಿಯಾಗಿ ಜಾರಿಯಲ್ಲಿದೆ. ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ನರೇಗಾ ಕಾಮಗಾರಿಯಲ್ಲಿ ಗುರಿಗಿಂತ ಹೆಚ್ಚು ಕೆಲಸವಾಗುತ್ತಿದೆ. ನಾವು 65 ಸಾವಿರ ಕೂಲಿ ಕಾರ್ಮಿಕರಕೆಲಸ ಅಂದಾಜು ಮಾಡಲಾಗಿತ್ತು. ಆದರೆ ನಮ್ಮ ನೀರಿಕ್ಷೆ ಮೀರಿ 80 ಸಾವಿರಕ್ಕೂ ಹೆಚ್ಚು ಜನರು ನರೇಗಾ ಯೋಜನೆಯಲ್ಲಿ ಕೆಲಸ ಮಾಡಿದ್ದಾರೆ, ಈ ಬಾರಿ ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಿಸುವ ಹಿತದೃಷ್ಟಿಯಿಂದ ಕೆರೆ, ಕುಂಟೆ, ಗೋಕಟ್ಟೆ ಮತ್ತು ಕಲ್ಯಾಣಿಗಳ ಸ್ವತ್ಛತೆ ಮತ್ತು ನೀರು ಹರಿದು ಬರಲು ಕಾಲುವೆ ಗುರುತಿಸುವ ಕೆಲಸ ಮಾಡಲಾಗಿದೆ. ಅದಕ್ಕೆ ಜಿಲ್ಲೆಯ ಎಲ್ಲ ಗ್ರಾಪಂ
ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮಿಸಿದ್ದಾರೆ ಎಂದರು.