Advertisement
ಪಟ್ಟಣದ ಗಾಂಧಿನಗರ ಕಡೆಯಿರುವ ಸ್ಮಶಾನ ರುದ್ರಭುಮಿ ಅಂದಾಜು 20 ಎಕರೆ ಪ್ರದೇಶಕ್ಕಿಂತ ಹೆಚ್ಚು ವಿಶಾಲವಾದ ಪ್ರದೇಶದಿಂದ ಕೂಡಿದ್ದು, ಪಟ್ಟಣದಲ್ಲಿ ವಾಸ ಮಾಡುವ ಹಿಂದೂ ಸಮುದಾಯದ ರೆಡ್ಡಿ, ಬಣಜಿಗ, ದೇವಾಂಗ, ಜಂಗಮ, ಮಡಿವಾಳ, ಹಾಲುಮತ, ಪಂಚಮಶಾಲಿ, ಮಾದಿಗ, ಚಲುವಾದಿ, ಭೋವಿ, ಕೊರಮ-ಕೊರಚ, ಕಬ್ಬೇರ, ಪತ್ತಾರ, ಉಪ್ಪಾರ ಸೇರಿದಂತೆ ವಿವಿಧ ಸಮುದಾಯ ಜನರು ನಿಧನರಾದರೆ, ಅಂತ್ಯ ಸಂಸ್ಕಾರ ಮಾಡಲು ಇದೊಂದೇ ಸ್ಮಶಾನ ರುದ್ರಭೂಮಿ ಇದೆ.
Related Articles
Advertisement
ವಿದ್ಯುತ್ ಇಲ್ಲದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಸ್ಮಶಾನದಲ್ಲಿ ವಿದ್ಯುತ್ ವ್ಯವಸ್ಥೆ ಮಾಡಬೇಕು. ದಾರಿಗೆ ಮುಳ್ಳಿನ ಗಿಡಗಳನ್ನು ತೆರವುಗೊಳಿಸಬೇಕು. ಅಂತ್ಯಸಂಸ್ಕಾರ ಮಾಡುವ ಸಶ್ಮಾನ ಮಾರ್ಗದಲ್ಲಿ ಮಳೆಗಾಲದಲ್ಲಿ ಕೆಸರು ಗದ್ದೆಯಾಗಿ ಮಾರ್ಪಾಡುತ್ತದೆ. ರಸ್ತೆ ಅಭಿವೃದ್ದಿಪಡಿಸಬೇಕು. ಇವೆಲ್ಲ ಸಮಸ್ಯೆ ಇರುವುದರಿಂದ ಸ್ಮಶಾನಕ್ಕೆ ಬರುವ ಸಾರ್ವಜನಿಕರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನಾದರೂ ತಾಲೂಕು ಆಡಳಿತ ಎಚ್ಚೆತ್ತುಕೊಂಡು ಪಟ್ಟಣದ ರುದ್ರಭುಮಿಯಲ್ಲಿ ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕು. ರಸ್ತೆ ಅಭಿವೃದ್ದಿಪಡಿಸಿ ಅಂತ್ಯಸಂಸ್ಕಾರಕ್ಕೆ ಬರುವ ಜನರಿಗೆ ಅನುಕೂಲ ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮೆದಕಿನಾಳ, ಹಿರೇದಿನ್ನಿ, ಉಸ್ಕಿಹಾಳ, ತಲೆಖಾನ, ದಿನ್ನಿಭಾವಿ ಮಸ್ಕಿ ತಾಂಡಾ, ಅಡವಿಭಾವಿ, ಗುಡದೂರು ಸೇರಿದಂತೆ ಅನೇಕ ಗ್ರಾಮಗಳಲ್ಲಿನ ಸ್ಮಶಾನದಲ್ಲಿ ವಿದ್ಯುತ್ ವ್ಯವಸ್ಥೆ ಇರುವುದಿಲ್ಲ. ಅಧಿಕಾರಿಗಳು ಇತ್ತ ಗಮನ ಹರಿಸಿ ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.
ಮಸ್ಕಿ ಪಟ್ಟಣದ ಗಾಂಧಿನಗರ ಕಡೆಯಿರುವ ರುದ್ರಭುಮಿಯಲ್ಲಿ ಹಿಂದೂ ಧರ್ಮದಲ್ಲಿ ಬರುವ ಎಲ್ಲಾ ಜಾತಿಯ ಜನ ಮೃತರಾದರೆ ಇಲ್ಲೆ, ಅಂತ್ಯ ಸಂಸ್ಕಾರ ಮಾಡುತ್ತಾರೆ. ಆದರೆ ಈ ಸ್ಮಶಾನಕ್ಕೆ ಹೋಗಲು ರಸ್ತೆ ಸರಿಯಿಲ್ಲ. ರಾತ್ರಿ ಹೊತ್ತು ಅಂತ್ಯಸಂಸ್ಕಾರ ಮಾಡಿದರೆ ಬ್ಯಾಟರಿ, ಮೊಬೈಲ್, ಟಾರ್ಚಿನ ಸಹಾಯದಿಂದ ಅಂತ್ಯ ಸಂಸ್ಕಾರ ಮಾಡುತ್ತಾರೆ. ಸಶ್ಮಾನದಲ್ಲಿ ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕು. ಇಲ್ಲಿ ಬೆಳೆದಿರುವ ಮುಳ್ಳಿನ ಗಿಡ ತೆರವುಗೊಳಿಸಬೇಕು. –ಮಂಜುನಾಥ ನಂದಿಹಾಳ, ಪುರಸಭೆ ಸದಸ್ಯರು ಮಸ್ಕಿ.