Advertisement

ಸೆ. 3ರಿಂದ ಸಾರ್ವಜನಿಕ ಬಸ್‌ ಸೇವೆ ಆರಂಭ

12:13 PM Aug 23, 2020 | Suhan S |

ಪುಣೆ, ಆ. 21: ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಐದು ತಿಂಗಳುಗಳಿಂದ ಮುಚ್ಚಲ್ಪಟ್ಟಿರುವ ಪುಣೆ ಮಹಾನಗರ ಸಾರಿಗೆ ಮಹಾಮಂಡಲದ (ಪಿಎಂಪಿಎಂಎಲ್) ಸಾರ್ವಜನಿಕ ಬಸ್‌ ಸೇವೆಗಳನ್ನು ಸೆಪ್ಟಂಬರ್‌ 3ರಿಂದ ಪ್ರಾರಂಭಿಸಲಾಗುವುದು ಎಂದು ಮೇಯರ್‌ ಮುರಳೀಧರ್‌ ಮೊಹೋಲ್‌ ಮಾಹಿತಿ ನೀಡಿದ್ದಾರೆ.

Advertisement

ಪುಣೆ ಮತ್ತು ಪಿಂಪ್ರಿಯಲ್ಲಿ ಸಾರ್ವಜನಿಕ ಸಾರಿಗೆ ಪ್ರಾರಂಭಿಸುವ ಹಿನ್ನೆಲೆಯಲ್ಲಿ ಪುಣೆ ಮಹಾನಗರ ಪಾಲಿಕೆಯಲ್ಲಿ ಸಭೆ ನಡೆಸಲಾಯಿತು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ್‌ ಮೇಯರ್‌ ಮುರಳೀಧರ್‌ ಮೊಹೋಲ್‌ ಅವರು, ಪುಣೆ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಕೊರೊನಾ ರೋಗಿಗಳ ಸಂಖ್ಯೆಯನ್ನು ಪರಿಗಣಿಸಿ ಮಾರ್ಚ್‌ನಿಂದ ಲಾಕ್‌ಡೌನ್‌ ಜಾರಿಗೊಳಿಸಲಾಯಿತು. ಈ ವೇಳೆ ಪಿಎಂಪಿಎಂಎಲ್‌ ಸಾರ್ವಜನಿಕರ ಬಸ್‌ ಸೇವೆಗಳನ್ನು ಸ್ಥಗಿತಗೊಳಿಸಿತ್ತು. ಅನಂತರ ರಾಜ್ಯ ಸರಕಾರದ ಆದೇಶದಂತೆ ಜಿಲ್ಲೆಯಲ್ಲಿ ಲಾಕ್‌ ಡೌನ್‌ ಸಡಿಲಗೊಳಿಸಿದ್ದರಿಂದ ನಗರದ ಎಲ್ಲಾ ಸೇವೆಗಳನ್ನು ಪುನಃಸ್ಥಾಪಿಸಲು ಸಹಾಯವಾಗಿದೆ. ಈಗ ನಗರದ ಎಲ್ಲಾ ನಾಗರಿಕರ ಬೇಡಿಕೆಯನ್ನು ಪರಿಗಣಿಸಿ ಸೆಪ್ಟೆಂಬರ್‌ 3 ರಿಂದ ಪಿಎಂಪಿಎಂಎಲ್‌ ಬಸ್‌ ಸೇವೆಗಳನ್ನು ಪ್ರಾರಂಭಿಸಲಾಗುವುದು ಎಂದರು.

ನಿರ್ಬಂಧಿತ ಪ್ರದೇಶಗಳು ಮತ್ತು ಪೇಟ್‌ ಭಾಗಗಳನ್ನು ಹೊರತು ಪಡಿಸಿ ಉಳಿದ ಪ್ರದೇಶಗಳಲ್ಲಿ ಪಿಎಂಪಿಎಂಎಲ್‌ ಸಾರ್ವಜನಿಕ ಬಸ್‌ ಸೇವೆಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಅಲ್ಲದೆ, ನಿಗಮದ 13 ಡಿಪೋಗಳ 421 ಬಸ್‌ಗಳು, 190 ಮಾರ್ಗಗಳಲ್ಲಿ ಕಾರ್ಯನಿರ್ವಹಿಸಲು ಯೋಜಿಸಲಾಗಿದೆ. ನಗರದ ಮುಖ್ಯ ರಸ್ತೆಗಳು ಹಾಗೂ ಉಪನಗರಗಳಲ್ಲಿ ಬೆಳಗ್ಗೆ ಮತ್ತು ಸಂಜೆಯ ವೇಳೆ ಜನ ಸಂದಣೆ ಉಂಟಾಗುವುದರಿಂದ ಹೆಚ್ಚಿನ ಸೇವೆಗಳನ್ನು ಒದಗಿಸಲಾಗುವುದು. ಪ್ರತಿ ಬಸ್‌ನಲ್ಲಿ ಶೇ. 50ರಷ್ಟು ಪ್ರಯಾಣಿಕರು ಮಾತ್ರ ಪ್ರಯಾಣಿಸಲು ಅವಕಾಶವಿದ್ದು, ಎಲ್ಲ ನಿಯಮಗಳನ್ನು ಪ್ರಯಾಣಿಕರು ಪಾಲಿಸಬೇಕೆಂದು ಮೇಯರ್‌ ಮುರಳೀಧರ್‌ ಮೊಹೋಲ್‌ ಮನವಿ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next