Advertisement

Assam ಕ್ಷೇತ್ರ ಮರುವಿಂಗಡನೆ: ಮುಂದುವರಿದ ಪ್ರತಿಭಟನೆ

08:25 PM Jun 24, 2023 | Team Udayavani |

ಗುವಾಹಟಿ: ಅಸ್ಸಾಂ ಲೋಕಸಭೆ ಹಾಗೂ ವಿಧಾನಸಭಾ ಸ್ಥಾನಗಳ ಮರು ವಿಂಗಡಣೆ ಕರಡು ಪ್ರಸ್ತಾಪದ ವಿರುದ್ಧ ಶನಿವಾರವೂ ಅಸ್ಸಾಂನಲ್ಲಿ ಪ್ರತಿಭಟನೆಗಳು ಮುಂದುವರಿದಿವೆ. ಚುನಾವಣೆ ಆಯೋಗವು ಬಿಜೆಪಿ ಪರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವಿಪಕ್ಷಗಳು ಆರೋಪಿಸಿವೆ.

Advertisement

ಅಲ್ಲದೇ, ಪ್ರಸ್ತಾಪವು ಜನರ ಭಾವನೆಗಳನ್ನು ಧಿಕ್ಕರಿಸಿ, ಧಾರ್ಮಿಕ ನೆಲೆಯ ಆಧಾರದಲ್ಲಿ ಮತದಾರರನ್ನು ವಿಭಜಿಸುವ ಬಿಜೆಪಿಯ ಪ್ರಯತ್ನವಾಗಿದೆ. ಈ ಹಿನ್ನೆಲೆ ಜನರ ಕುಂದುಕೊರತೆಗಳನ್ನು ಆಯೋಗದ ಮುಂದೆ ತೆರೆದಿಡಲು ವಿಪಕ್ಷಗಳು ನಿರ್ಧರಿಸಿವೆ. ಈ ನಿಟ್ಟಿನಲ್ಲಿ 12 ವಿಪಕ್ಷಗಳ ಆಯೋಗವು ಶಿವಸಾಗರ ಜಿಲ್ಲೆಗೆ ಜೂ.30ರಂದು ಭೇಟಿ ನೀಡಿ, ಜನರೊಟ್ಟಿಗೆ ಸಂವಾದ ನಡೆಸಲು ತೀರ್ಮಾನಿಸಿವೆ ಎಂದು ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಭುಪೇನ್‌ ಕುಮಾರ್‌ ಬೋರ್‌ ಹೇಳಿದ್ದಾರೆ.

ಆಯೋಗದ ಪ್ರಸ್ತಾಪದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಸ್ಥಾನಗಳನ್ನು ಕ್ರಮವಾಗಿ 14 ಹಾಗೂ 126ರ ರೀತಿ ನಿರ್ವಹಿಸಿ, ಪರಿಶಿಷ್ಟ ಜಾತಿಗೆ ಮೀಸಲಿರುವ ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯನ್ನು 8ರಿಂದ 9ಕ್ಕೆ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಿರುವ ಕ್ಷೇತ್ರವನ್ನು 16ರಿಂದ 19ಕ್ಕೆ ಏರಿಸಲು ಪ್ರಸ್ತಾಪಿಸಲಾಗಿದೆ. ಇದರಲ್ಲಿ ವಿಪಕ್ಷಗಳ ಹಲವು ಭದ್ರಕೋಟೆಗಳು ವಿಲೀನವಾಗುವ ಸಾಧ್ಯತೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next