Advertisement

ಮಲ್ಲೇಶ್ವರಂನಲ್ಲಿ ಗುಂಡಿ ಬಿದ್ದ ರಸ್ತೆ: ಪೂಜೆ ಮಾಡಿ, ಮಲಗಿ ವಿನೂತನ ಪ್ರತಿಭಟನೆ

04:25 PM Mar 13, 2022 | Team Udayavani |

ಬೆಂಗಳೂರು: ಮಲ್ಲೇಶ್ವರಂ ನಿವಾಸಿಗಳು ಕ್ಲೌಡ್ ನೈನ್ ಆಸ್ಪತ್ರೆ ಬಳಿ ಗುಂಡಿಬಿದ್ದ ರಸ್ತೆಗಳಿಗೆ ಪೂಜೆ ಮಾಡಿ,ಗುಂಡಿಯಲ್ಲಿ ಮಲಗಿ ತಿಭಟನೆ ಮಾಡಿದರು.

Advertisement

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ದಿ ಹೆಸರಿನಲ್ಲಿ ಅವೈಜ್ಞಾನಿಕವಾಗಿ ರಸ್ತೆಗಳನ್ನು ಅಗೆಯಲಾಗಿದೆ ಇದರಿಂದ ನಾಗರಿಕರ ಜೀವಕ್ಕೆ ಸಂಚಾಕಾರವಾಗಿರುವ ಕಾರಣ ಅನೂಪ್ ಆಯ್ಯಂಗಾರ್ ರವರ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.

ಅನೂಪ್ ಆಯ್ಯಂಗಾರ್ ರವರು ಮಾತನಾಡಿ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ರಸ್ತೆಗಳು ಗುಂಡಿಮಯವಾಗಿದೆ ಮತ್ತು ಕಳಪೆ ಕಾಮಗಾರಿಯಿಂದ ಮಲ್ಲೇಶ್ವರಂ 18ನೇ ಕ್ರಾಸ್ ನಲ್ಲಿ ಸರ್ಕಲ್ ಮಾರಮ್ಮ ದೇವಸ್ಥಾನ ಬಳಿ ರಸ್ತೆ ಅಪಘಾತದಿಂದ ಯುವಕ ಮೃತಪಟ್ಟಿದ್ದಾನೆ. ಸ್ಯಾಂಕಿ ಕರೆಯಲ್ಲಿ 12ವರ್ಷಗಳಿಂದ ಕಾಮಗಾರಿ ನಡೆಯುತ್ತಿದೆ ಅದರು ಪೂರ್ಣಗೊಂಡಿಲ್ಲ. ಬೀಗಲ್ಸ್ ಬ್ಯಾಸ್ಕೆಟ್ ಬಾಲ್ ಒಳಾಂಗಣ ಕ್ರೀಡಾಂಗಣ ಸಾರ್ವಜನಿಕರಿಗೆ ಉಪಯೋಗಕ್ಕೆ ಅವಕಾಶ ನೀಡದೇ ಬೀಗ ಜಡಿಯಲಾಗಿದೆ. ಟೆಂಡರ್ ,ಮರು ಟೆಂಡರ್ ಗಳ ಡೊಡ್ಡ ಹಗರಣ ಸರಮಾಲೆಯಾಗಿದೆ ಎಂದು ಆಕ್ರೋಶ ಹೊರ ಹಾಕಿದರು.

ಕಾಮಗಾರಿಗಳು ನಡೆಯುತ್ತಿರುವ ಜಾಗದಲ್ಲಿ ಗುತ್ತಿದಾರರ ಹೆಸರು,ಇಂಜಿನಿಯರ್ ಗಳ ಬಗ್ಗೆ ಮಾಹಿತಿ ಹಾಗೂ ನಿಗದಿ ಮಾಡಿದ ಸಮಯ ,ಹಣದ ವೆಚ್ಚ ,ಕಾಲಮಿತಿ ವಿವರವುಳ್ಳ ಫಲಕಗಳು ಹಾಕಿಲ್ಲ.ಅವೈಜ್ಞಾನಿಕವಾಗಿ ರಸ್ತೆಗಳನ್ನು ಅಗೆಯಲಾಗಿದೆ ಇದರಿಂದ ಮಕ್ಕಳು ,ಹಿರಿಯ ನಾಗರಿಕರು ಮತ್ತು ಮಹಿಳೆಯರಿಗೆ ನಡೆದಾಡಲು ಕಷ್ಟವಾಗಿದೆ ಮತ್ತು ವಾಹನ ಸಂಚಾರಕ್ಕೆ ಆನಾನುಕೂವಾಗಿದೆ.145ವರ್ಷಗಳ ಇತಿಹಾಸವಿರುವ ಪಾರಂಪರಿಕ,ಸಾಂಸ್ಕೃತಿಕ ಪ್ರದೇಶ ಮಲ್ಲೇಶ್ವರಂ ರಕ್ಷಣೆ ಮತ್ತು ಸುರಕ್ಷತೆಗಾಗಿ ನಮ್ಮ ಪ್ರತಿಭಟನೆ ಎಂದು ಹೇಳಿದರು.

Advertisement

Advertisement

Udayavani is now on Telegram. Click here to join our channel and stay updated with the latest news.

Next