Advertisement

ವಿದ್ಯುತ್‌ ದರ ಏರಿಕೆ ವಿರೋಧಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

12:33 PM Apr 12, 2022 | Team Udayavani |

ಬಿಜೈ: ಕೊರೊನಾ ಸಂಕಷ್ಟದಿಂದ ಹೊರ ಬರಲಾಗದ ಜನರಿಗೆ ಪೆಟ್ರೋಲ್‌, ಡೀಸೆಲ್‌ ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ತತ್ತರಿಸುತ್ತಿರುವಾಗಲೇ ರಾಜ್ಯ ಸರಕಾರ ವಿದ್ಯುತ್‌ ಬೆಲೆ ಏರಿಕೆ ಮಾಡಿರುವುದು ಗಾಯದ ಮೇಲೆ ಉಪ್ಪು ಸುರಿದಂತಾಗಿದೆ ಎಂದು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್‌ ಆರೋಪಿಸಿದರು.

Advertisement

ಡಿವೈಎಫ್‌ಐ, ಎಸ್‌ಎಫ್‌ಐ ಮತ್ತು ಜೆಎಂಎಸ್‌ ಸಂಘಟನೆಗಳ ಜಂಟಿ ಸಹಭಾಗಿತ್ವದಲ್ಲಿ ವಿದ್ಯುತ್‌ ದರ ಏರಿಕೆ ವಿರೋಧಿಸಿ ನಗರದ ಬಿಜೈ ಬಳಿ ಇರುವ ಮೆಸ್ಕಾಂ ಕೇಂದ್ರ ಕಚೇರಿ ಎದುರು ಸೋಮವಾರ ನಡೆದ ಪ್ರತಿಭಟನ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದು ಹೋಗಿದೆ. ಜನಸಾಮಾನ್ಯರ ನೈಜ ಸಮಸ್ಯೆ ಗಳ ಪರಿಹಾರ ಮಾಡದೆ ಜಾತಿ, ಧರ್ಮದ ಹೆಸರಲ್ಲಿ ಗಲಾಟೆ ಮಾಡಲು ಪ್ರಚೋದನೆ ನೀಡಲಾಗುತ್ತಿದೆ ಎಂದರು.

ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್‌ ಬಜಾಲ್‌ ಮಾತನಾಡಿ, ರಾಜ್ಯ ಸರಕಾರ ಪ್ರತಿ ಯುನಿಟಿಗೆ 0.50 ಪೈಸೆ ಯಷ್ಟು ದರ ಏರಿಸಿದೆ. ಮೆಸ್ಕಾಂ ಇಲಾಖೆ ಈ ಹಿಂದೆ ಫೆಬ್ರವರಿಯಲ್ಲಿ 2021-22 ಅವಧಿಯ ಆರ್ಥಿಕ ವರ್ಷದಲ್ಲಿ 943 ಕೋ.ರೂ. ಆದಾಯ ಕೊರತೆ ನೀಗಿಸಲು 1.67 ರೂ. ಸುಂಕವನ್ನು ಏರಿಕೆ ಮಾಡಿತ್ತು. ಈಗ ಮತ್ತೆ ರಾಜ್ಯದಲ್ಲಿ ಏರಿಕೆ ಮಾಡಲಾಗುತ್ತಿದೆ ಎಂದರು.

ಜನವಾದಿ ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷೆ ಭಾರತಿ ಬೋಳಾರ ಮಾತನಾ ಡಿದರು. ಡಿವೈಎಫ್‌ಐ ಮುಖಂಡರಾದ ಮನೋಜ್‌ ವಾಮಂಜೂರ್‌, ಸುನಿಲ್‌ ತೇವುಲ, ರಫೀಕ್‌ ಹರೇಕಳ, ರಜಾಕ್‌ ಮುಡಿಪು, ಹನೀಫ್‌ ಬೆಂಗ್ರೆ, ತಯ್ಯೋಬ್‌ ಬೆಂಗ್ರೆ, ಸಲೀಮ್‌ ಶಾಡೋ, ಜಗದೀಶ್‌ ಬಜಾಲ್‌, ಜಯಲಕ್ಷ್ಮೀ, ಅಸುಂತಾ ಡಿ’ಸೋಜಾ, ಪ್ರಮಿಳಾ ದೇವಾಡಿಗ, ವಿದ್ಯಾರ್ಥಿ ಮುಖಂಡರಾದ ವಿನತ್‌, ಮಾಧುರಿ ಮೊದಲಾದವರಿದ್ದರು. ನವೀನ್‌ ಕೊಂಚಾಡಿ ಸ್ವಾಗತಿಸಿ, ನಿರೂಪಿಸಿದರು. ನಿತಿನ್‌ ಕುತ್ತಾರ್‌ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next