ಹುಬ್ಬಳ್ಳಿ: ಕೇಂದ್ರ ಸಚಿವ ಅಮಿತ್ ಶಾ ಅವರು ಡಾ.ಅಂಬೇಡ್ಕರ್ ಬಗ್ಗೆ ಅವಮಾನಕರ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳು ಕರೆ ನೀಡಿದ ಬಂದ್ ಗೆ ಹುಬ್ಬಳ್ಳಿ ಯಲ್ಲಿ ಬೆಳಿಗ್ಗೆ 6:00ಗಂಟೆಯಿಂದಲೇ ಪರಿಣಾಮ ಬೀರತೊಡಗಿದ್ದು, ಹಲವು ಕಡೆ ಖಾಸಗಿ ಬಸ್, ವಾಹನಗಳ ಚಕ್ರಗಳ ಗಾಳಿ ತೆಗೆದಿದ್ದು, ಚನ್ನಮ್ಮ ವೃತ್ತದ ಬಳಿ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.
-ಹೋರಾಟಗಾರರು ತಂಡ, ತಂಡವಾಗಿ ವಿವಿಧ ಕಡೆ ತೆರಳಿ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿಸಿದರು.
-ಖಾಸಗಿ ಬಸ್, ಕ್ಯಾಬ್, ಆಟೋರಿಕ್ಷಾ ಇನ್ನಿತರ ವಾಹನಗಳ ಚಕ್ರಗಳ ಗಾಳಿ ತೆಗೆಯಲಾಯಿತು.
-ಬೆಳಿಗ್ಗೆ 6:00 ಗಂಟೆಯಿಂದಲೇ ಚನ್ನಮ್ಮ ವೃತ್ತ, ಹೊಸೂರು ಸೇರಿದಂತೆ ಪ್ರಮುಖ ರಸ್ತೆ, ವೃತ್ತಗಳಲ್ಲಿ ಅಂಗಡಿ, ಮಳಿಗೆಗಳು ಮುಚ್ಚಿದ್ದರೆ ಒಳ ರಸ್ತೆಗಳಲ್ಲಿ ಕೆಲವೊಂದು ಮಳಿಗೆ, ಅಂಗಡಿಗಳು ತೆರೆದಿದ್ದು ಕಂಡು ಬಂದಿತು.
ಇದನ್ನೂ ಓದಿ: ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್