Advertisement

ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

03:32 PM Mar 03, 2021 | Team Udayavani |

ಮಂಡ್ಯ: ಪೆಟ್ರೋಲ್‌, ಡೀಸೆಲ್‌ ಹಾಗೂ ಆಹಾರ ಪದಾರ್ಥಗಳ ಬೆಲೆ ಏರಿಕೆವಿರೋಧಿಸಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಸಂಘಟನೆಯ ಕಾರ್ಯಕರ್ತರು ನಾಲ್ವಡಿ ಕೃಷ್ಣರಾಜ ಒಡೆಯರ್‌ ವೃತ್ತದಿಂದಮೆರವಣಿಗೆ ಹೊರಟು ಜಿಲ್ಲಾಧಿಕಾರಿಕಚೇರಿ ಬಳಿ ಧರಣಿ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಜನಸಾಮಾನ್ಯರಿಗೆ ಹೊರೆ: ಜನಸಾಮಾನ್ಯರು ಪ್ರತಿನಿತ್ಯ ಬಳಕೆ ಮಾಡುವ ಪದಾರ್ಥಗಳ ಬೆಲೆ ಏರಿಕೆಗೆ ಸರ್ಕಾರನೇರ ಹೊಣೆಯಾಗಿದೆ. ಅಂತಾರಾಷ್ಟ್ರೀಯಮಾರುಕಟ್ಟೆಯಲ್ಲಿ ತೈಲ ಬೆಲೆ ಕಡಿಮೆಇದ್ದರೂ ಪೆಟ್ರೋಲ್‌, ಡೀಸೆಲ್‌ ದರಹೆಚ್ಚಳವಾಗಿದೆ. ಆಳುವ ಸರ್ಕಾರಗಳುಪೆಟ್ರೋಲ್‌ಗೆ ಮೂಲದರ 31 ರೂ. ಇದ್ದರೆ, ಕೇಂದ್ರ ಸರ್ಕಾರ 16.5 ರೂ.,ರಾಜ್ಯ ಸರ್ಕಾರ 38.5 ರೂ. ತೆರಿಗೆ ಜತೆಗೆ ಕಮೀಷನ್‌ 6.5 ರೂ. ಹಾಕಿದೆ. ಇದರಿಂದಜನಸಾಮಾನ್ಯರಿಗೆ ದುಬಾರಿ ಹೊರೆ ಬಿದ್ದಿದೆ ಎಂದು ಕಿಡಿಕಾರಿದರು

ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು, ಇದರಿಂದ ಬಡಜನತೆಯ ಜೀವನ ಮಾಡುವುದು ದುಸ್ತರವಾಗಿದೆ. ಅಡುಗೆ ಅನಿಲ,ಅಕ್ಕಿ, ಬೇಳೆ, ಎಣ್ಣೆ ಪದಾರ್ಥಗಳನ್ನು ಜನತೆಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ. ಜನರ ಬದುಕನ್ನು ಬೀದಿಗೆ ತಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನಸಾಮಾನ್ಯರು ಕೈಗೆಟಕುವ ದರದಲ್ಲಿಆಹಾರ ಪದಾರ್ಥಗಳನ್ನು ಖರೀದಿಸು ವಂತಾಗಬೇಕು. ಕಳ್ಳತನ ಸುಲಿಗೆ ಮಾಡದೆಜನತೆ ಸ್ವಾಭಿಮಾನದಿಂದ ಬದುಕಬೇಕು.ಆದರೆ, ಸರ್ಕಾರವನ್ನು ಆಯ್ಕೆ ಮಾಡಿದತಪ್ಪಿಗೆ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆಮುಂದಿನ ದಿನಗಳಲ್ಲಿ ಜನರು ಬುದ್ಧಿ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

Advertisement

ಸಂಘಟನೆಯ ಜಿಲ್ಲಾಧ್ಯಕ್ಷ ಯೋಗಣ್ಣ,ವಿನಯ್‌, ರವೀಂದ್ರ, ಅರುಣ್‌,ಬೋರೇಗೌಡ, ಮಾಲತಿ, ಗೀತಾ ಸೇರಿದಂತೆ ಮತ್ತಿತರರಿದ್ದರು.

ಪಕ್ಷ ಸಂಘಟನೆಗಾಗಿ ಪ್ರವಾಸ :

ಮಳವಳ್ಳಿ: ಮುಂಬರುವ ಸ್ಥಳೀಯ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷವನ್ನುಸಂಘಟಿಸಲು ರಾಜಾÂದ್ಯಂತ ಪ್ರವಾಸಕೈಗೊಂಡು ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದು ಬಿಜೆಪಿ ರಾಜ್ಯ ಎಸ್‌ಸಿಮೋರ್ಚಾದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಜೆಪಿ ಮುಖಂಡರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಇನ್ನೂ ಎರಡು ತಿಂಗಳಲ್ಲಿ ನಡೆಯುವ ಜಿಪಂ, ತಾಪಂ ಚುನಾವಣೆಗೆ ಪಕ್ಷವನ್ನು ಬಲಪಡಿಸಿ,ಅಭ್ಯರ್ಥಿಗಳ ಗೆಲುವಿಗಾಗಿ ಸಂಘಟನೆಮಾಡುತ್ತಿದ್ದು, ಕಾರ್ಯಕರ್ತರಿಗೆ ಆತ್ಮಸ್ಥೈರ್ಯ ತುಂಬಲಾಗುತ್ತದೆ. ಮಳವಳ್ಳಿ ತಾಲೂಕಿನ ಮುಖಂಡರಜತೆ ಪಕ್ಷದ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದರು.

ಬಿಜೆಪಿ ತಾಲೂಕು ಅಧ್ಯಕ್ಷ ಎಂ.ಎನ್‌.ಕೃಷ್ಣ, ಪುರಸಭೆ ಸದಸ್ಯ ರವಿ, ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕ ಅಪ್ಪಾಜಿಗೌಡ, ಪ್ರಧಾನ ಕಾರ್ಯದರ್ಶಿ ಕೆ.ಸಿ.ನಾಗೇಗೌಡ, ಸಾಹಿತಿಮ.ಸಿ.ನಾರಾಯಣ, ಯಮದೂರುಸಿದ್ದರಾಜು, ಚಿಕ್ಕಣ್ಣ, ಬಸವರಾಜು, ಮಲ್ಲಿಕಾರ್ಜುನ, ರಾಜಣ್ಣ, ರಮೇಶ್‌, ಲಿಂಗದೇವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next